Latest Videos

ದುಬಾರಿ ಕಾರು ಪವಿತ್ರಾ ಗೌಡಗೂ ಬಂದಿದ್ದು ಹೇಗೆ; ದರ್ಶನ್ ಪತ್ನಿ 'ರೇಂಜ್‌' ತಲುಪಿದ್ರಾ ಪವಿತ್ರಾ ಗೌಡ!

By Contributor AsianetFirst Published Jun 15, 2024, 4:19 PM IST
Highlights

ಕಳೆದ 10 ವರ್ಷಗಳಿಂದ ದರ್ಶನ್ ಹಾಗೂ ಪವಿತ್ರಾ ಗೌಡ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎನ್ನಲಾಗಿದೆ. ತನ್ನ ಹಾಗೂ ದರ್ಶನ್ ಸಂಬಂಧದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಬರೆದುಕೊಂಡಿದ್ದರು. ಸ್ನೇಹಿತೆ ಪವಿತ್ರಾ ಗೌಡಗೆ ಹಲವು ದುಬಾರಿ..

ಕಳೆದ ಮಾರ್ಚ್‌ ತಿಂಗಳಿನಲ್ಲಿ ನಟಿ ಪವಿತ್ರಾ ಗೌಡಗೆ ದರ್ಶನ್‌ ದುಬಾರಿ ಕಾರು ಗಿಫ್ಟ್‌ ಉಡುಗೊರೆ ನೀಡಿದ್ದಾರೆ ಎನ್ನಲಾಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಕೊಡಿಸಿದ ಕಾರು ತನಗೂ ಬೇಕು ಅಂತ ಪವಿತ್ರಾ ಗೌಡ ಹಠ ಹಿಡಿದಿದ್ದರಂತೆ. ಅದಕ್ಕಾಗಿ ಈ ಕಾರು ಪವಿತ್ರಾ ಗೌಡ ಬಳಿ ಬಂದಿದೆ ಎನ್ನಲಾಗಿದೆ. ಹೀಗಾಗಿ ಐಷಾರಾಮಿ ರೇಂಜ್ ರೋವರ್‌ ಕಾರಿಗೆ ಒಡತಿಯಾಗಿದ್ದರು ಪವಿತ್ರಾ ಗೌಡ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಇದೀಗ ನಟಿ ಹಾಗು ದರ್ಶನ್ ಗೆಳತಿ ಪವಿತ್ರಾ ಗೌಡಪವಿತ್ರಾ ಗೌಡ ಎ1 ಆರೋಪಿಯಾಗಿ ಬಂಧನಕ್ಕೊಳಗಾಗಿದ್ದಾರೆ. 

ಕಳೆದ 10 ವರ್ಷಗಳಿಂದ ದರ್ಶನ್ ಹಾಗೂ ಪವಿತ್ರಾ ಗೌಡ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎನ್ನಲಾಗಿದೆ. ತನ್ನ ಹಾಗೂ ದರ್ಶನ್ ಸಂಬಂಧದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಬರೆದುಕೊಂಡಿದ್ದರು. ಸ್ನೇಹಿತೆ ಪವಿತ್ರಾ ಗೌಡಗೆ ಹಲವು ದುಬಾರಿ ಗಿಫ್ಟ್​ಗಳನ್ನ ಕೊಟ್ಟಿರೋ ನಟ ದರ್ಶನ್ ಅವರು, ಇದೀಗ ಅವರ ಸಲುವಾಗಿಯೇ ಕೊಲೆ ಕೇಸಿನಲ್ಲಿ ಆರೋಪಿಯಾಗಿ ಜೈಲು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. 

ವೀಡಿಯೋ ಮಾಡೋಕೋ, ಹುಡ್ಗಿ ಇಂಪ್ರೆಸ್ ಮಾಡೋಕೋ ಹೋಗಿ ಬೈಕಿಂದ ಬಿದ್ದು ಹಾಳಾಗ್ಬೇಡಿ: ರಾಕಿಂಗ್ ಸ್ಟಾರ್ ಯಶ್!

ಪವಿತ್ರಾ ಗೌಡ ಅವರ ಬಿಳಿ ಬಣ್ಣದ ರೇಂಜ್ ರೋವರ್‌ ಕಾರಿದೆ. ಇದೇ ವರ್ಷದ ಮಾರ್ಚ್‌ ತಿಂಗಳ ಅಂತ್ಯದಲ್ಲಿ ಪವಿತ್ರಾ ಗೌಡ ಹೆಸರಿನಲ್ಲಿ ಈ ಕಾರು ನೋಂದಣಿಯಾಗಿದೆ. ಈ ರೇಂಜ್ ರೋವರ್‌ ಕಾರನ್ನು ಪವಿತ್ರಾ ಗೌಡಗೆ ದರ್ಶನ್‌ ಉಡುಗೊರೆಯಾಗಿ ನೀಡಿದ್ದರೆಂದು ಗುಲ್ಲೆದ್ದಿದೆ. ಮಾರ್ಚ್ ತಿಂಗಳ ಆರಂಭದಲ್ಲಿ ರೇಂಜ್ ರೋವರ್ ಕಾರು ಖರೀದಿ ಮಾಡಿದ್ದರು ವಿಜಯಲಕ್ಷ್ಮೀ . ಅದೇ ಕಾರು ಬೇಕು ಅಂತ ಪವಿತ್ರಾ ಗೌಡ ದರ್ಶನ್​ ಬಳಿ ಹಠ ಮಾಡಿದ್ರು ಎಂಬಂತೆ ಒಂದೇ ತಿಂಗಳ ಬಳಿಕ ಪವಿತ್ರಾ ಕೂಡ ಇದೇ ಕಾರನ್ನು ಹೊಂದಿದ್ದಾರೆ.

ಅಪ್ಪು ಅವ್ರು ಬಿಗ್ ಸ್ಟಾರ್, ಇಲ್ಲಿ ಇಷ್ಟು ಜನ ಕಾಯ್ತಾ ಇದೀವಿ; ಹೀಗಂದಿದ್ಯಾಕೆ 'ಕೋಟಿ' ಪರಮ್..?

ವಿಜಯಲಕ್ಷ್ಮಿ ಕಾರು ಖರೀದಿಸಿದ ಒಂದೇ ತಿಂಗಳಲ್ಲಿ ಪವಿತ್ರಾ ಗೌಡ ಕೈಗೂ ಸಿಕ್ಕಿತ್ತು ಅದೇ ಬ್ರ್ಯಾಂಡ್​ನ ಕಾರು, ಹೀಗಾಗಿಯೇ ಜನರೆಲ್ಲಾ ಹಾಗೆ ಮಾತನಾಡುವಂತೆ  ಆಗಿತ್ತು. ಪವಿತ್ರಾ ಗೌಡಗೆ ಬೂಟಿಕ್ ಶಾಪ್​​​​​​ ಓಪನ್ ಮಾಡೋಕೂ ಸಪೋರ್ಟ್ ಮಾಡಿದ್ದು ದರ್ಶನ್ ಅನ್ನೋ ಮಾತಿದೆ. ಆರ್‌ಆರ್‌ ಆರ್​ ನಗರದಲ್ಲಿ ರೆಡ್​ ಕಾರ್ಪೆಟ್ ಸ್ಟುಡಿಯೋ 777 ಎಂಬ ಶಾಪ್ ಅನ್ನು ನಟಿ ಹಾಗೂ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಓಪನ್ ಮಾಡಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ದರ್ಶನ್ ವಾಸವಾಗಿರೋ ಆರ್‌ಆರ್‌ ನಗರದಲ್ಲೇ ಪವಿತ್ರಾ ಗೌಡ ಐಶಾರಾಮಿ ಮನೆ ಕೂಡ ಇದೆ.

ಮುಂಗಾರು ಮಳೆ ಜೋಡಿ ಹೊಸ ಸಿನಿಮಾಗೆ ಆಯ್ಕೆಯಾದ 'ಆ ಬಿಗ್ ಸ್ಟಾರ್' ನಟ ಯಾರು?

ಈ ಮೂಲಕ ನಟ ದರ್ಶನ್ ಹಾಗು ಪವಿತ್ರಾ ಗೌಡ ಸಂಬಂಧದ ಬಗ್ಗೆ ಹಲವು ರೀತಿಯಲ್ಲಿ ಅನುಮಾನ ಮೂಡಿದೆ. ಪೊಲೀಸ್ ಅಧಿಕಾರಿಗಳು ದರ್ಶನ್ ಪತ್ನಿಗೆ ರೇಣುಕಾ ಸ್ವಾಮಿ ಆಶ್ಲಿಲ ಮೆಸೇಜ್ ಕಳಿಸಿದ್ದ ಅಂದಿದ್ರು. ಆದರೆ ಇಂದು ದರ್ಶನ್ ಲಾಯರ್ ಪವಿತ್ರಾ ಗೌಡ ದರ್ಶನ್ ರ ಸ್ನೇಹಿತೆ ಅಂದಿದ್ದಾರೆ. ಈ ಮೂಲಕ ನಟ ದರ್ಶನ್ ಅವರು ನಟಿ ಪವಿತ್ರಾ ಗೌಡ ಅವರನ್ನೂ ಇನ್ನೂ ಕಾನೂನಿನ ಪ್ರಕಾರ ಮದುವೆಯಾಗಿಲ್ಲ ಎನ್ನಬಹುದಲ್ಲವೇ?

click me!