ಈಕೆ Instagram ಐಶ್ವರ್ಯಾ : ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ ಐಶ್ ತದ್ರೂಪಿ

Published : Sep 02, 2022, 12:26 PM ISTUpdated : Sep 02, 2022, 12:33 PM IST
ಈಕೆ Instagram ಐಶ್ವರ್ಯಾ : ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ ಐಶ್ ತದ್ರೂಪಿ

ಸಾರಾಂಶ

ಇನ್ಸ್ಟಾಗ್ರಾಮ್‌ನಲ್ಲಿ ಐಶ್‌ ತದ್ರೂಪಿಯೊಬ್ಬರು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಅವರ ಕೆಲ ವಿಡಿಯೋಗಳನ್ನು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಪ್ರಸ್ತುತ ಇನ್ಸ್ಟಾಗ್ರಾಮ್ ಸೆಲೆಬ್ರಿಟಿ ಎನಿಸಿದ್ದಾರೆ.

ಇದು ಸಾಮಾಜಿಕ ಜಾಲತಾಣಗಳ ಯುಗ. ಸಾಮಾಜಿಕ ಜಾಲತಾಣ ಇಂದು ಎಷ್ಟು ಪ್ರಭಾವಶಾಲಿಯಾಗಿದೆ ಎಂದರೆ ಅದೂ ಜನಸಾಮಾನ್ಯರನ್ನು ಕೂಡ ಸೆಲೆಬ್ರಿಟಿ ಮಟ್ಟಕ್ಕೆ ಕೊಂಡೊಯ್ದಿದೆ. ವಿಭಿನ್ನ ಪ್ರತಿಭೆ ಹೊಂದಿರುವ ಅನೇಕರು ತಮಗೆ ಪ್ರತಿಭೆ ಇದೆ. ಆದರೆ ಪ್ರದರ್ಶನಕ್ಕೆ ಸರಿಯಾಗಿ ವೇದಿಕೆ ಇಲ್ಲ ಎಂದು ಅಳುವ ಸಂದರ್ಭ ಈಗಿಲ್ಲ. ನಮ್ಮ ಪ್ರತಿಭೆಗೆ ನಾವೇ ವೇದಿಕೆ ಸಿದ್ಧಪಡಿಸಿಕೊಳ್ಳಬಲ್ಲಂತಹ ಅವಕಾಶವನ್ನು ಇಂದು ಸಾಮಾಜಿಕ ಜಾಲತಾಣಗಳು ನೀಡಿವೆ. ಪ್ರತಿಭೆಯ ಜೊತೆ ಆರ್ಥಿಕತವಾಗಿಯೂ ಮೇಲೆ ಬರಲು ಅನೇಕರಿಗೆ ಸಾಮಾಜಿಕ ಜಾಲತಾಣಗಳು ಸಹಾಯ ಮಾಡಿವೆ. ಅನೇಕರಿಗೆ ಹೊಸ ಹೊಸ ಅವಕಾಶಗಳನ್ನು ಕೈ ಬೀಸಿ ಕರೆದು ನೀಡಿವೆ. ಇದೇ ಕಾರಣಕ್ಕೆ ಈಗ ಸೋಶಿಯಲ್ ಮೀಡಿಯಾಗಳು ಯುವ ಸಮೂಹದ ಅಚ್ಚುಮೆಚ್ಚಿನ ತಾಣವಾಗಿವೆ. ಇಲ್ಲಿ ನಾವು ಸಾಕಷ್ಟು ಪ್ರತಿಭೆಗಳನ್ನು ನೋಡಬಹುದಾಗಿದೆ. 

ಹಾಗೆಯೇ ಕೆಲವು ಖ್ಯಾತ ಸಿನಿಮಾ ತಾರೆಯರ ತದ್ರೂಪಿಗಳನ್ನು (doppelganger) ಇಲ್ಲಿ ನೋಡಬಹುದಾಗಿದೆ. ಐಶ್ವರ್ಯ ರೈಯಂತೆ ಹೋಲುವ ಮಹಿಳೆಯೊಬ್ಬರು ಇನ್ಸ್ಟಾಗ್ರಾಮ್‌ನಲ್ಲಿ ಹವಾ ಎಬ್ಬಿಸಿದ್ದಾರೆ. ನೋಡಲು ಐಶ್ವರ್ಯ ರೈಯಂತೆ ಕಾಣುವ ಅಶಿತಾ ಸಿಂಗ್ (Ashita singh) ಎಂಬ ಮಹಿಳೆ ಐಶ್ವರ್ಯಾ ರೈ ಅವರ ಅನೇಕ ಸಿನಿಮಾಗಳ ಹಾಡಿಗೆ ಅವರಂತ ನಟಿಸುತ್ತಾ ವಿಡಿಯೋ ಮಾಡಿ ಇನ್ಸ್ಟಗ್ರಾಮ್‌ನಲ್ಲಿ ಹಾಕುತ್ತಿದ್ದು, ಸಾಕಷ್ಟು ಜನ ಈ ವಿಡಿಯೋಗಳನ್ನು ವೀಕ್ಷಿಸುತ್ತಾರೆ. ಇನ್ಸ್ಟಾಗ್ರಾಮ್‌ನಲ್ಲಿ ಇವರು ಲಕ್ಷಾಂತರ ಅಭಿಮಾನಿಗಳನ್ನು (Fans) ಹೊಂದಿದ್ದು ಸಾಕಷ್ಟು ಫೇಮಸ್ ಆಗಿದ್ದಾರೆ. ಐಶ್ವರ್ಯ ಅಭಿಮಾನಿಗಳು ಇವರನ್ನು ಭೇಟಿಯಾಗಲು ಹಾತೊರೆಯುತ್ತಾರೆ. ಐಶ್ವರ್ಯ ಜೊತೆ ಫೋಟೋ ಸಿಗದಿದ್ದರೇನಂತೆ ಐಶ್ವರ್ಯಾ ರೀತಿ ಇರುವ ಆಶಿತಾ ಜೊತೆ ಫೋಟೋ ತೆಗೆದುಕೊಂಡು ಸಂಭ್ರಮಿಸೋಣ ಎಂದು ಐಶ್ ಅಭಿಮಾನಿಗಳು ಸಮಾಧಾನಪಟ್ಟುಕ್ಕೊಳ್ಳುತ್ತಿದ್ದಾರೆ. 

<

p> 

 

ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದ ಕಾಫಿನಾಡು ಚಂದು ಯಾರು?, ಇವರ ಆಸೆ ಏನು?

ಇವರ ಕೆಲವೊಂದು ವಿಡಿಯೋಗಳಳನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ವೀಡಿಯೋ ನೋಡಿದರೆಲ್ಲ ಐಶ್ವರ್ಯಾ ರೈಯೇ ಇನ್ಸ್ಟಾಗ್ರಾಮ್‌ನಲ್ಲಿ ಇಷ್ಟೊಂದು ಆಕ್ಟಿವ್ ಆಗಿದ್ದಾರಾ ಎಂದು ಕೆಲ ಕಾಲ ಅಚ್ಚರಿಯಿಂದ ನೋಡುವಂತೆ ಮಾಡುತ್ತಿವೆ ಇವರ ವಿಡಿಯೋಗಳು. ಅಶಿತಾ ಅವರ ಹಲವು ವಿಡಿಯೋಗಳು ವೈರಲ್ ಆದ ಬಳಿಕ ಅವರು ಸೆಲೆಬ್ರಿಟಿ ಆಗಿದ್ದು, ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಳನ್ನು ಹೊಂದಿದ್ದಾರೆ. ಇವರಿಗೆ ಹಲವು ಬ್ರಾಂಡ್‌ಗಳು ಜಾಹೀರಾತಿಗೆ ಬೇಡಿಕೆ ಇರಿಸಿದ್ದು, ಸೋಶಿಯಲ್ ಮೀಡಿಯಾ ಇವರ ಬದುಕಿಗೆ ರಂಗು ತುಂಬಿದ್ದು, ಅದೃಷ್ಟ ಖುಲಾಯಿಸಿದೆ ಎಂದರೆ ತಪ್ಪಾಗಲಾರದು.

 

ಮದ್ವೆ ಮನೆಯಲ್ಲಿ ಅಜ್ಜನ ಸಖತ್ ಸ್ಟೆಪ್‌ : ಪಂಚೆ ಎತ್ತಿಕಟ್ಟಿ ಕುಣಿತಿದ್ದ ತಾತನಿಗೆ ಮೊಮ್ಮಗಳ ಸಾಥ್‌

ಇತ್ತ ವಿಡಿಯೋ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದು, ಈಕೆ ಐಶ್ವರ್ಯ ರೈ ಪಡಿಯಚ್ಚಿನಂತಿದ್ದಾಳೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಐಶ್ವರ್ಯಾ ರೈ ನಿಮ್ಮ ನಕಲು ಎಂದು ಒಬ್ಬರು ಈಕೆಗೆ ಕಾಮೆಂಟ್ ಮಾಡಿದ್ದರೆ ಮತ್ತೆ ಕೆಲವರು ಐಶ್ವರ್ಯಾ ಪ್ರೊಮ್ಯಾಕ್ಸ್‌ ಎಂದು ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್ ನಟಿಯರಾದ ಅಲಿಯಾ ಭಟ್, ದೀಪಿಕಾ ಪಡುಕೋಣೆ (DP), ಪ್ರಿಯಾಂಕಾ ಚೋಪ್ರಾರ(Piggi) ತದ್ರೂಪಿಗಳು ಕೂಡ ಇನ್ಸ್ಟಾಗ್ರಾಮ್‌ನಲ್ಲಿ(Instagram) ಹವಾ ಮೂಡಿಸಿದ್ದು ಅವರ ವಿಡಿಯೋಗಳು ಕೂಡ ಸಾಕಷ್ಟು ವೈರಲ್ ಆಗಿವೆ.  ಇತ್ತ ಮಂಗಳೂರು ಬ್ಯೂಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಸೌಂದರ್ಯಕ್ಕೆ ಸರಿಸಾಟಿ ಯಾರೂ ಇಲ್ಲ. ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಐಶ್‌ಗೆ ಐಶೇ ಸರಿಸಾಟಿ. ಆದರೆ ಬಚ್ಚನ್‌ ಕುಟುಂಬದ ಸೊಸೆಯಾಗಿರುವ ಐಶ್ವರ್ಯಾ ಸಾಮಾಜಿಕ ಜಾಲತಾಣದಲ್ಲಿ ಅಷ್ಟೊಂದು ಆಕ್ಟಿವ್ ಆಗಿಲ್ಲ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್