
ಯುವ
ನಿರ್ದೇಶನ: ಸಂತೋಷ್ ಆನಂದ್‌ರಾಮ್
ತಾರಾಗಣ: ಯುವ ರಾಜ್‌ಕುಮಾರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಕಿಶೋರ್
ರೇಟಿಂಗ್: 3
ರಾಜೇಶ್ ಶೆಟ್ಟಿ
ಪ್ರೇಕ್ಷಕರು ಈ ಚಿತ್ರವನ್ನು ಎದುರು ನೋಡುತ್ತಿದ್ದುದರ ಮುಖ್ಯ ಕಾರಣ ಯುವ ರಾಜ್‌ಕುಮಾರ್. ಆ ನಿರೀಕ್ಷೆಗೆ ತಕ್ಕಂತೆ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ ಯುವ. ಮೊದಲಾರ್ಧ ಪೂರ್ತಿ ಆವರಿಸಿರುವ ಫೈಟು, ಆಕರ್ಷಕ ಡಾನ್ಸು, ರಫ್ ಆ್ಯಂಡ್ ಟಫ್ ನೋಟ, ಆ್ಯಂಗ್ರಿ ಯಂಗ್ ಮ್ಯಾನ್ ಲುಕ್, ಬಡವರ ಬಂಧು ಗುಣ ಎಲ್ಲವೂ ಸೇರಿ ಯುವ ರಾಜ್‌ಕುಮಾರ್ ಎಂಟ್ರಿಯನ್ನು ಅದ್ದೂರಿಯಾಗಿಸಿದೆ.
ಇದೊಂದು ಕಾಂಬೋ ಊಟ ಇದ್ದಂತೆ ಕಾಂಬೋ ಸಿನಿಮಾ. ಇಲ್ಲಿ ಯಾವುದು ಇಲ್ಲ ಎನ್ನುವಂತಿಲ್ಲ, ಎಲ್ಲಾ ಇದೆ. ಕಾಲೇಜ್ ತರುಣರ ಕಿಚ್ಚು, ಕಣ್ಣು ಸೆಳೆಯುವ ಆದರ್ಶ ಪ್ರೇಮ, ತಂದೆ ಮಗನ ಬಾಂಧವ್ಯ, ಸ್ನೇಹಕ್ಕಾಗಿ ಹೋರಾಟ, ಮಧ್ಯಮ ವರ್ಗದ ತೊಳಲಾಟ, ಡೆಲಿವರಿ ತರುಣ- ತರುಣಿಯರ ಕನಸುಗಳು, ಅನ್ಯಾಯದ ವಿರುದ್ಧ ಯುದ್ಧ, ಜೊತೆಗೆ ಐಸ್‌ಕ್ರೀಮ್ ಮೇಲೆ ಚೆರಿ ಇಟ್ಟಂತೆ ಕ್ರೀಡಾ ಸ್ಫೂರ್ತಿ ಎಲ್ಲವನ್ನೂ ಮಿಕ್ಸ್ ಮಾಡಿ ಕೊಟ್ಟಿದ್ದಾರೆ ನಿರ್ದೇಶಕರು. ಅಂಶಗಳು ಜಾಸ್ತಿ ಇರುವುದರಿಂದ ಯುವ ಎದ್ದು ಕಾಣುತ್ತಾರೆ.
Merry Christmas Movie Review: ಸುಂದರ ಮೊಗದ ಹಿಂದಿನ ಕ್ರೂರತೆ ಇಷ್ಟಿರುತ್ತಾ?
ಮೊದಲಾರ್ಧ ತುಂಬಾ ಯುವ ಮನಸ್ಸಿನ ಹೋರಾಟ-ಹಾರಾಟಗಳಿದ್ದರೆ ದ್ವಿತೀಯಾರ್ಧದಲ್ಲಿ ಮನಸ್ಸು ಹಿಂಡುವ ಭಾವನಾತ್ಮಕ ಸಂಗತಿಗಳಿವೆ. ಮೊದಲೆಲ್ಲಾ ಅಬ್ಬರ, ಕೊನೆಯಲ್ಲಿ ನಿಟ್ಟುಸಿರು. ತಾಂತ್ರಿಕವಾಗಿ ಶ್ರೀಮಂತ. ಆದರೆ ಬರವಣಿಗೆ ಕೊಂಚ ಸೊರಗಿ ಸೋರೆಕಾಯಿ. ಸಂಭಾಷಣೆ ಸಾಲುಗಳ ಪಂಚ್‌ಗಳಿಗೂ ಸ್ವಲ್ಪ ದಣಿವಾಗಿದೆ. ಇಲ್ಲಿ ಬಳಸಿರುವ ಬ್ಯಾವರ್ಸಿ ಎಂಬ ಪದ ಕೇಳಿ ಆ ಪದಕ್ಕೇ ಮುಜುಗರವಾಗಬಹುದು.
ತಂದೆ- ಮಗನ ಲವ್ ಹೇಟ್ ರಿಲೇಶನ್‌ಶಿಪ್ ಈ ಚಿತ್ರದ ಹೆಚ್ಚುಗಾರಿಕೆ. ಆ ಸಂಬಂಧವೇ ಯುವನ ತಾಕತ್ತು. ಕಣ್ಣಂಚು ಒದ್ದೆಗೊಳಿಸುವಂತೆ ಅಚ್ಯುತ್ ಕುಮಾರ್- ಯುವ ಜೋಡಿ ಕಾಣಿಸುತ್ತದೆ. ಅಷ್ಟರ ಮಟ್ಟಿಗೆ ಇದೊಂದು ಮಧ್ಯಮ ವರ್ಗದ ಹೋರಾಟ, ಭಾವನೆಗಳ ತಾಕಲಾಟಗಳ ಸಿನಿಮಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.