ಯಶಸ್ವಿನಿ, ಅರ್ಜುನ್ ಕಿಶೋರ್, ಅನೂಷಾ ಆನಂದ್, ನವೀಂದ್ರ ಗಂಗಾಧರ್ ನಟನೆಯ ಮಾಯೆ ಆಂಡ್ ಕಂಪನಿ ಸಿನಿಮಾ ರಿಲೀಸ್ ಆಗಿದೆ. ಚಿತ್ರ ಹೇಗಿದೆ?
ಪೀಕೆ
ಸೋಷಿಯಲ್ ಮೀಡಿಯಾದಿಂದ ಗೆಳೆಯರು ಸಿಗ್ತಾರೆ, ಮನರಂಜನೆ ಸಿಗುತ್ತೆ, ಜೊತೆಗೆ ಜನರನ್ನು ಯಾಮಾರಿಸೋ ಬಗ್ಗೆಯೂ ಕೇಳಿ ಗೊತ್ತು. ಮಾಯೆ ಆ್ಯಂಡ್ ಕಂಪನಿ ಸಿನಿಮಾದಲ್ಲಿ ಅಂಥಾ ಮತ್ತೊಂದು ಕಥೆ ಸಿಗುತ್ತೆ. ಆ ಮೂಲಕ ಈ ಸಿನಿಮಾ ಸೋಷಿಯಲ್ ಮೀಡಿಯಾ ಬಳಕೆಯ ಬಗ್ಗೆ ಮಹತ್ವದ ಸಂದೇಶವೊಂದನ್ನು ಚಿತ್ರ ಪ್ರೇಕ್ಷಕರಿಗೆ ರವಾನಿಸುತ್ತದೆ.
undefined
ಸ್ನೇಹಿತೆ ಬಳಿ ಚಿನ್ನದ ನೆಕ್ಲೇಸ್ ಇದೆ. ತಾನೂ ಅಂಥದ್ದೊಂದು ನೆಕ್ಲೇಸ್ ಕೊಂಡುಕೊಂಡು ಅವಳಿಗೂ ಹೊಟ್ಟೆ ಉರಿಸಬೇಕು ಎಂಬ ಮಾನ್ಸಿಗೆ ನೆನಪಾಗೋದು ಫೇಸ್‌ಬುಕ್ ಗೆಳೆಯ ರಾಘವ. ಹಣ ಹೊಂದಿಸುವ ಆತನ ಪ್ಲಾನ್ ಏನು? ಆಸೆ ತೀರಿಸಿಕೊಳ್ಳಲು ಶಾರ್ಟ್‌ಕಟ್ ದಾರಿಯಲ್ಲಿ ಹೋದಾಗ ಎದುರಾಗುವ ಸವಾಲುಗಳೇನು, ಇಲ್ಲಿ ಹೊರಬೀಳುವ ಸತ್ಯಗಳೇನು ಎಂಬುದನ್ನು ತಿಳಿಯಲು ‘ಮಾಯೆ ಆ್ಯಂಡ್ ಕಂಪನಿ’ ಸಿನಿಮಾ ನೋಡಬಹುದು.
Bachelor Party Review ದ್ರೋಹವೂ ಇಲ್ಲಿ ತಮಾಷೆಯ ಬೆನ್ನೇರಿದೆ!
ತಾರಾಗಣ: ಯಶಸ್ವಿನಿ, ಅರ್ಜುನ್ ಕಿಶೋರ್, ಅನೂಷಾ ಆನಂದ್, ನವೀಂದ್ರ ಗಂಗಾಧರ್
ನಿರ್ದೇಶನ: ಸಂದೀಪ್ ಕುಮಾರ್
ಈ ಸಿನಿಮಾದಲ್ಲಿ ಕೋವಿಡ್ ಬಳಿಕ ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗದವರ ಬದುಕಿನಲ್ಲಾದ ಸ್ಥಿತ್ಯಂತರಗಳನ್ನೂ ಹೇಳುತ್ತದೆ. ಅದೇ ರೀತಿ, ‘ಇಂಥಾ ಹತ್ತು ಕೋವಿಡ್ ಬಂದರೂ ನಮ್ ಜನ ಪಾಠ ಕಲಿಯಲ್ಲ ಸಾರ್’ ಎಂಬ ಆಟೋ ಡ್ರೈವರ್ ಮಾತು ವಾಸ್ತವವನ್ನು ತೆರೆದಿಡುತ್ತದೆ.
Case of Kondana Review ತೀವ್ರವಾಗಿ ಕಾಡುವ ಕ್ರೈಮ್ ಥ್ರಿಲ್ಲರ್
ಸಿನಿಮಾದ ಮೊದಲ ಭಾಗ ರಾಘವ ಹಾಗೂ ಮಾನ್ಸಿ ಏನು ಮಾಡಲು ಹೊರಟಿದ್ದಾರೆ ಎಂಬ ಕುತೂಹಲ ಮೂಡಿಸಿದರೆ, ಎರಡೇ ಭಾಗದಲ್ಲಿ ಊಹಿಸಲಾಗದ ತಿರುವುಗಳಿವೆ. ಕೊನೆಯಲ್ಲೊಂದು ಸಂದೇಶವಿದೆ. ಊಹೆಗೂ ಮೀರಿ ಸೋಷಿಯಲ್ ಮೀಡಿಯಾ ನೆವದಲ್ಲಿ ನಾವು ಹೇಗೆ ಯಾಮಾರಬಹುದು ಎಂಬುದನ್ನು ಈ ಸಿನಿಮಾ ಪ್ರೇಕ್ಷಕರಿಗೆ ಮನದಟ್ಟು ಮಾಡಿಸುತ್ತದೆ.