Click Review ಸೂಕ್ಷ್ಮ ಕಥಾಹಂದರದ ಚಿಂತನಾರ್ಹ ಕಥನ

By Kannadaprabha NewsFirst Published Feb 3, 2024, 10:06 AM IST
Highlights

ಪವನ್ ಬಸ್ರೂರು, ಕಾರ್ತಿಕ್ ಕಡಂಬ, ರಚನಾ ದಶರಥ್, ಸುಮನಾ ಶಶಿ, ಸಂಜು ಬಸಯ್ಯ ನಟನೆಯ ಕ್ಲಿಕ್ ಸಿನಿಮಾ ರಿಲೀಸ್ ಆಗಿದೆ. 

ಆರ್‌.ಬಿ.

ಬಾಲ್ಯಕಾಲದ ಆತಂಕ, ಖುಷಿ, ಕುತೂಹಲ, ಗೊಂದಲ, ನೋವು ಎಲ್ಲವನ್ನೂ ತನ್ನೊಳಗಿಟ್ಟುಕೊಂಡಿರುವ ಸಂದೇಶಾತ್ಮಕ ಸಿನಿಮಾ ಇದು. ಅದರೊಂದಿಗೆ ಪೋಷಕರ ಜವಾಬ್ದಾರಿ, ಅವರ ಯೋಚನೆಗಳನ್ನು ತೆರೆದಿಡುವ ಸಿನಿಮಾ ಕೂಡ ಹೌದು. ಆ ನಿಟ್ಟಿನಲ್ಲಿ ಇದೊಂದು ಸೂಕ್ಷ್ಮ ಮತ್ತು ಗಮನಾರ್ಹ ಪ್ರಯತ್ನ.

ಅಲ್ಲೊಬ್ಬ ಹುಡುಗನಿದ್ದಾನೆ. ಅವನಿಗೆ ಪಠ್ಯದಾಚೆಗಿನ ಜಗತ್ತಿನ ಮೇಲೆ ಹೆಚ್ಚು ಒಲವು. ಆ ಕಡೆಗೆ ಅವನು ಹೆಚ್ಚು ಗಮನ ಕೊಡುತ್ತಿರುತ್ತಾನೆ. ಕತೆ ಮುಂದಕ್ಕೆ ಸಾಗುತ್ತಿದ್ದಂತೆ ತಮ್ಮ ಇಷ್ಟದ ದಾರಿಯಲ್ಲಿ ಸಾಗುವುದು ಎಲ್ಲರಿಗೂ ಸಾಧ್ಯವೇ, ಒಂದು ವೇಳೆ ಇಷ್ಟದ ದಾರಿಯಲ್ಲಿ ಹೋದರೂ ಅದರಿಂದ ಗೆಲುವು ಪಡೆಯುವುದು ಸಾಧ್ಯವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಅದಕ್ಕೆ ತಕ್ಕಂತೆ ಕಡೆಗೆ ಉತ್ತರವೂ ಸಿಗುತ್ತದೆ.

Bachelor Party Review ದ್ರೋಹವೂ ಇಲ್ಲಿ ತಮಾಷೆಯ ಬೆನ್ನೇರಿದೆ!

ನಿರ್ದೇಶನ: ಶಶಿಕುಮಾರ್ ಮಂಡ್ಯ

ತಾರಾಗಣ: ಪವನ್ ಬಸ್ರೂರು, ಕಾರ್ತಿಕ್ ಕಡಂಬ, ರಚನಾ ದಶರಥ್, ಸುಮನಾ ಶಶಿ, ಸಂಜು ಬಸಯ್ಯ

SATHYAM SHIVAM REVIEW ಸತ್ಯ ದಾರಿಯಲಿ ನಡೆದರೆ ಮೆಚ್ಚನಾ ಪರಮಾತ್ಮ

ಇದೊಂದು ಸ್ಫೂರ್ತಿ ಕಥೆ. ಯೋಚನೆಗೆ ಹಚ್ಚುವ ಕತೆ. ಪೋಷಕರಲ್ಲಿ ಹೊಳಹನ್ನು ಹುಟ್ಟಿಸುವ ಕತೆ. ಇಂಥದ್ದೊಂದು ಸೂಕ್ಷ್ಮ ಕತೆಯನ್ನು ಸಮರ್ಥವಾಗಿ ತೆರೆ ಮೇಲೆ ತಂದಿರುವ ನಿರ್ದೇಶಕರ ಕೆಲಸ ಶ್ಲಾಘನೀಯ. ಜೊತೆಗೆ ಸಂಗೀತ, ಛಾಯಾಗ್ರಹಣ ಈ ಕತೆಗೆ ಪೂರಕವಾಗಿದೆ. ಪವನ್‌ ಬಸ್ರೂರು ಸೊಗಸಾಗಿ ನಟಿಸಿದ್ದಾರೆ. ಕಾರ್ತಿಕ್ ಕಡಂಬ, ರಚನಾ ದಶರಥ್‌ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

click me!