Kaalapatthar Review: ಸೈನಿಕನ ಸಂಕಟ, ಸಂದಿಗ್ಧ, ಸಂಘರ್ಷಗಳ ಕಥೆ ಕಾಲಾಪತ್ಥರ್‌

By Kannadaprabha News  |  First Published Sep 14, 2024, 4:50 PM IST

ಕಾಲಾಪತ್ಥರ್‌ ನೆವದಲ್ಲಿ ಉದ್ಭವಿಸುವ ಸಂಕಟ, ಸಂಘರ್ಷಗಳ ಕಥೆಯೇ ‘ಕಾಲಾಪತ್ಥರ್‌’ ಸಿನಿಮಾ. ಚಿತ್ರದಲ್ಲಿ ಉತ್ತರ ಕರ್ನಾಟಕದ ಹಳ್ಳಿಗಳ ಚಿತ್ರಣವನ್ನು ವಿಭಿನ್ನವಾಗಿ ತೆರೆದಿಡಲಾಗಿದೆ. 
 


ಪ್ರಿಯಾ ಕೆರ್ವಾಶೆ

ಸಿನಿಮಾ ಇರಲಿ, ಲೈಫೇ ಇರಲಿ, ಕೆಲವೊಂದು ಕ್ಷಣಗಳು ಕ್ಷಣಗಳಲ್ಲಷ್ಟೇ ಕಂಡರೆ ಚೆಂದ. ಕೊಂಚ ಲಂಭಿಸಿದರೂ ‘ವಿಶೇಷ’ ಅನಿಸುವ ಕ್ಷಣ ಸಾಮಾನ್ಯವಾಗಿಬಿಡುತ್ತವೆ. ಕಾಲಾಪತ್ಥರ್‌ ಸಿನಿಮಾ ಈ ಎಚ್ಚರಿಕೆಗೆ ಸಾಕ್ಷಿಯಾಗಿ ನಮ್ಮ ಮುಂದೆ ನಿಲ್ಲುತ್ತದೆ. ವರನಟ ಡಾ ರಾಜ್‌ಕುಮಾರ್‌ ಭಕ್ತ ಶಂಕರ್‌ ಒಬ್ಬ ಸೈನಿಕ. ಗಡಿಭಾಗದಲ್ಲಿರೋ ಈತನಿಗೆ ಗನ್‌ ಬದಲಿಗೆ ಸೌಟ್ ಹಿಡಿಯೋ ಸೌಭಾಗ್ಯ. ಸೈನಿಕರಿಗೆ ಅಡುಗೆ ಮಾಡುವ ಈ ಸೈನಿಕ ಒನ್‌ ಫೈನ್‌ ಡೇ ವೀರಯೋಧನಾಗಿ ಬದಲಾದಾಗ ಆತನ ಊರಲ್ಲಿ ಆತನದೇ ಕರಿಶಿಲೆಯ ಪ್ರತಿಮೆ ಎದ್ದು ನಿಲ್ಲುತ್ತದೆ. 

ಈ ಕಾಲಾಪತ್ಥರ್‌ ನೆವದಲ್ಲಿ ಉದ್ಭವಿಸುವ ಸಂಕಟ, ಸಂಘರ್ಷಗಳ ಕಥೆಯೇ ‘ಕಾಲಾಪತ್ಥರ್‌’ ಸಿನಿಮಾ. ಚಿತ್ರದಲ್ಲಿ ಉತ್ತರ ಕರ್ನಾಟಕದ ಹಳ್ಳಿಗಳ ಚಿತ್ರಣವನ್ನು ವಿಭಿನ್ನವಾಗಿ ತೆರೆದಿಡಲಾಗಿದೆ. ಮಳೆಯಿಲ್ಲದೇ, ಹಸಿರಿಲ್ಲದೇ ಬರಡು ನೆಲದಲ್ಲಿ ಬದುಕು ಸಾಗಿಸುವ ಕಷ್ಟಜೀವಿಗಳ ಜೀವನದ ನೋಟವನ್ನು ಕಟ್ಟಿಕೊಡುವ ಪ್ರಯತ್ನವನ್ನು ಈ ಚಿತ್ರ ಮಾಡಿದೆ. ಜೊತೆಗೆ ಹೆಚ್ಚು ಕಡಿಮೆ ನಮ್ಮೆಲ್ಲರಲ್ಲೂ ಇರುವ ಒಂದು ಸಮಸ್ಯೆ ತೀವ್ರವಾಗುತ್ತ ಹೋದರೆ ಯಾವ ಹಂತ ತಲುಪಬಹುದು ಅನ್ನೋದನ್ನು ರೂಪಕದ ಮೂಲಕ ಹೇಳಲಾಗಿದೆ.

Latest Videos

undefined

ಕಾಲಾಪತ್ಥರ್‌
ತಾರಾಗಣ : ವಿಕ್ಕಿ ವರುಣ್‌, ಧನ್ಯಾ ರಾಮ್‌ಕುಮಾರ್‌, ನಾಗಾಭರಣ,
ನಿರ್ದೇಶನ: ವಿಕ್ಕಿ ವರುಣ್‌
ರೇಟಿಂಗ್‌ : 3

ಈ ಸಿನಿಮಾವನ್ನು ಚೆಂದಕ್ಕೇನೋ ಕಟ್ಟಿಕೊಡಲಾಗಿದೆ. ಆದರೆ ಇಂಥಾ ಕಥೆ ಹೇಳುವಾಗ ಯಾವ ತೀವ್ರತೆ ಬೇಕಿತ್ತೋ ಅದು ಮಾಯವಾಗಿದೆ. ನಿರೂಪಣೆಯಲ್ಲಿ ಫೋಕಸ್‌ ಕೊರತೆ ಕಾಣುತ್ತದೆ. ಮುಂದೆ ಏನಾಗಬಹುದು ಅನ್ನೋದನ್ನು ಸುಲಭವಾಗಿ ಗೆಸ್‌ ಮಾಡಬಹುದು. ಸಂದೀಪ್‌ ಕುಮಾರ್‌ ಸಿನಿಮಾಟೋಗ್ರಫಿಯಲ್ಲಿ ಉತ್ತರ ಕರ್ನಾಟಕದ ಹಳ್ಳಿಯ ಚಿತ್ರಣ ಚೆನ್ನಾಗಿ ಬಂದಿದೆ. ಅನೂಪ್‌ ಸೀಳಿನ್‌ ಹಾಡುಗಳೂ ಸೊಗಸಾಗಿವೆ.

click me!