ಕಾಲಾಪತ್ಥರ್ ಚಿತ್ರ ವಿಮರ್ಶೆ: ಅಹಂಕಾರದ ಅಂತರ್ಯದ್ಧದಲ್ಲಿ ದಡ ಸೇರಲು ಅಣ್ಣಾವ್ರೇ ದೇವ್ರು..!

By Shriram Bhat  |  First Published Sep 13, 2024, 6:32 PM IST

ರಜೆಯ ಮೇಲೆ ತವರೂರಿಗೆ ಬರುವ ಶಂಕರನಿಗೆ ಭರ್ಜರಿ ಸ್ವಾಗತ ಸಿಗುತ್ತದೆ ತನಗೆ ಗೊತ್ತಿದ್ದು ಗೊತ್ತಿಲ್ದ ರೀತಿಯಲ್ಲಿ ಆ ಕಪ್ಪು ಶಿಲೆಯಲ್ಲಿ ಕೆತ್ತಿದ ತನ್ನ ಪ್ರತಿಮೆಯ ಮೇಲೆ ಅತಿಯಾದ ಮೋಹ ಬರಲಾರಂಭಿಸುತ್ತದೆ, ತಾನೊಬ್ಬ ಸೈನಿಕ ಅನ್ನೋದನ್ನ ಮರೆತು ಅವನೇನು ಮಾಡುತ್ತಾನೆ? ನೋಡಿ.. 


ನಿರ್ದೇಶಕನಾಗಬೇಕು ಎಂಬ ಅಚಲವಾದ ಹಠದೊಂದಿಗೆ, ಸಿನಿ ಉದ್ಯಮಕ್ಕೆ ಕಾಲಿಟ್ಟ ವಿಕ್ಕಿ ವರುಣ್ ತನ್ನ ಅಭ್ಯಾಸ ಶುರು ಮಾಡಿದ್ದು ದುನಿಯಾ ಸೂರಿ ಜೊತೆಗೆ, ಸೂರಿ ಕೃಪೆಯಿಂದ ವಿಕ್ಕಿ ಕೆಂಡಸಂಪಿಗೆಯಾದ ನಂತರ ಕಾಲೇಜ್ ಕುಮಾರ ಆದ,
ನಿರ್ದೇಶನದ ಆ ಕಿಚ್ಚು ಆರಲು ಬಿಡದೆ,ವಿಕ್ಕಿ ವರುಣ್ ತಾನೇ ನಾಯಕ ನಟನಾಗಿ ನಟಿಸಿ ತಾನೇ ಆಕ್ಷನ್ ಕಟ್ ಹೇಳಿ ಮಾಡಿದ ಚಿತ್ರವೇ ಕಾಲಾಪತ್ಥರ್

ಶಂಕರ್ ( ವಿಕ್ಕಿ ವರುಣ್ ) ದೇಶವನ್ನು ಕಾಯೋ ಸೈನಿಕ, ಕೈಲಿ ರೈಫಲ್ ಬಂದುಕು ಹಿಡಿಯುವದರ ಜೊತೆಗೆ,ಅಡುಗೆ ಮಾಡುವುದರಲ್ಲೂ ನಿಪುಣ,ತಾನೇ ಅಡುಗೆ ಮಾಡಿ ಬಡಿಸಿ ತನ್ನ ಮೇಲಾಧಿಕಾರಿಗಳ ಹಾಗೂ ಸಹಚರರ ಪ್ರೀತಿಗೆ ಪಾತ್ರವಾಗಿರುತ್ತಾನೆ.

Latest Videos

undefined

ಅದೊಂದು ದಿನ ಕಾರ್ಗಿಲ್ ವಿಜಯ ದಿವಸ ಆಚರಣೆಯ ಸಂದರ್ಭ, ಭಾರತೀಯ ಸೈನಿಕರು ಇರುವ ಅಡುಗೆ ಮನೆಯ ಕೋಣೆಯಲ್ಲಿ ಅವಿತು ಕುಳಿತು ಸಂಚು ರೂಪಿಸುತ್ತಿದ್ದ ಉಗ್ರರ ಜೊತೆ ಕಾದಾಡಿ ಹೋರಾಡಿ ಅವರೆಲ್ಲರ ಪ್ರಾಣ ತೆಗೆಯುವ ಶಂಕರ್ ಇಡೀ ದೇಶಕ್ಕೆ ರಾತ್ರೋರಾತ್ರಿ ಹೀರೋ ಆಗುತ್ತಾನೆ..

ಕಪ್ಪು ಕಲ್ಲಿನ ಕಥೆ, ಸಿನಿಮಾ ಹೀರೋ ಸೈನಿಕ.. ವಿಕ್ಕಿ ವರುಣ್‌ ನಟನೆಯ ಥ್ರಿಲ್ಲರ್‌ ಚಿತ್ರ ಕಾಲಾಪತ್ಥರ್‌

ಈ ಸುದ್ದಿಯನ್ನು ಶಂಕರ್ ಊರಿನ ಜನ ಕೇಳಿ ಸಂಭ್ರಮಿಸುತ್ತಾರೆ ಆತನ ತಂದೆ ತಾಯಿಗೆ ಹೆಮ್ಮೆ ಆಗುತ್ತದೆ. ಮತ್ತೊಂದು ಕಡೆ ಶಂಕರನನ್ನ ಪ್ರೀತಿಸುವ ಗಂಗಾಗು - ಶಾಲಾ ಶಿಕ್ಷಕಿ ( ಧನ್ಯ ) ಸಂಭ್ರಮ.. ತಮ್ಮೂರಿನ ಹುಡುಗ ಶಂಕರ್ ಇಂತಹ ಮಹಾನ್ ಕೆಲಸ ಮಾಡಿದ್ದಕ್ಕಾಗಿ ಊರಿನ ಗೌಡರು ( ಟಿ ಎಸ್ ನಾಗಭರಣ ) ಸೇರಿ ಊರಿನ ಜನರೇ ಚರ್ಚಿಸಿ ನಿರ್ಧಾರ ಮಾಡಿ ಆತನನ್ನೇ ಹೋಲುವ ಎತ್ತರದ ಪ್ರತಿಮೆಯನ್ನು, ಕೆತ್ತಿಸಲು ಮುಂದಾಗುತ್ತಾರೆ. 

ಅವರ ಊರಿನ ಬಳಿಯೇ ಇರುವಂತಹ ದೊಡ್ಡದಾದ ಕಪ್ಪು ಕಲ್ಲನ್ನು ತಂದು ( ಕಾಲಾಪತ್ಥರ್)ಶಂಕರನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ, ಸ್ಥಳೀಯ ಎಂಎಲ್ಎ ( ರಾಜೇಶ್ ನಟರಂಗ ) ಕಡೆಯಿಂದ ಉದ್ಘಾಟನೆಯಾಗುತ್ತದೆ, ಒಲ್ಲದ ಮನಸ್ಸಲ್ಲೆ ಆತ ಆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾನೆ.. ಅದೆಲ್ಲವನ್ನೂ ಸಿನಿಪ್ರೇಕ್ಷಕರು ಗಮನಿಸುವಂತಾಗುತ್ತದೆ. 

ಇದಾದ ಕೆಲವು ದಿನಗಳ ನಂತರ ರಜೆಯ ಮೇಲೆ ತವರೂರಿಗೆ ಬರುವ ಶಂಕರನಿಗೆ ಭರ್ಜರಿ ಸ್ವಾಗತ ಸಿಗುತ್ತದೆ ತನಗೆ ಗೊತ್ತಿದ್ದು ಗೊತ್ತಿಲ್ದ ರೀತಿಯಲ್ಲಿ ಆ ಕಪ್ಪು ಶಿಲೆಯಲ್ಲಿ ಕೆತ್ತಿದ ತನ್ನ ಪ್ರತಿಮೆಯ ಮೇಲೆ ಅತಿಯಾದ ಮೋಹ ಬರಲಾರಂಭಿಸುತ್ತದೆ, ತಾನೊಬ್ಬ ಸೈನಿಕ ಅನ್ನೋದನ್ನ ಮರೆತು ದಿನದ 24 ಗಂಟೆ ಅದೇ ಶಿಲೆಯದ್ದೇ ಚಿಂತೆ ಆತನಿಗೆ ಆಗುತ್ತದೆ..

ರಿಷಬ್ ಶೆಟ್ಟಿ ಕಾಂತಾರ-ಪ್ರೀಕ್ವೆಲ್‌ನಲ್ಲಿ ತೆಲುಗು ಸ್ಟಾರ್ ಜೂ. ಎನ್‌ಟಿಆರ್ ನಟಿಸ್ತಾರಾ?

ಆ ಶಿಲೆಗೆ ಏನಾದರೂ ಆದರೆ ಅದು ಶಂಕರನಿಗೂ ಆಗುತ್ತಿರುತ್ತದೆ, ಇದು ಯಾಕೆ ಎನ್ನುವುದು ಕ್ಲೈಮ್ಯಾಕ್ಸ್ ನಲ್ಲಿ ಗೊತ್ತಾಗುತ್ತದೆ. 
ಇದರ ಮಧ್ಯೆ ಪ್ರೀತಿಸಿದ ಹುಡುಗಿಗೆ ಮತ್ತೊಬ್ಬ ಹುಡುಗನ ಜೊತೆ ಆಗುವ ನಿಶ್ಚಿತಾರ್ಥ, ನಮ್ಮ ಹೀರೋ ನಮ್ಮ ಹೀರೋ ಎಂದು ಜೊತೆಗಿದ್ದವರೇ ದೂರವಾಗುವುದು, ಕೊನೆಗೆ ಅಪ್ಪ ಅಮ್ಮನಿಗೂ ಶಂಕರ್ ಬೋರ್ ಆಗುವುದು,ಇವೆಲ್ಲವೂ ಕಥೆಗೆ ಮತ್ತಷ್ಟು ಟ್ವಿಸ್ಟ್ ಕೊಡುತ್ತ ಹೋಗುತ್ತವೆ..

ಆಗಾಗ ಶಂಕರ್ ತನ್ನ ಆರಾಧ್ಯ ದೈವ ಡಾಕ್ಟರ್ ರಾಜಕುಮಾರ್ ಅವರ ಹಾಡನ್ನು ಹಾಡುತ್ತ ಅವರ ಮಾತುಗಳನ್ನು ಕೇಳುವ ಬಾಂಧವ್ಯವನ್ನ ಹೊಂದಿದ್ದ ಕಾರಣ, ತನ್ನ ಮತ್ತು ಕಪ್ಪು ಶಿಲೆಯ ಮದ್ಯದ ದೊಡ್ಡದಾದ ಕನ್ಫ್ಯೂಷನ್ ವಿಚಾರಕ್ಕೆ ದುಃಖ ಪಡುವ ಸಂದರ್ಭದಲ್ಲಿ, ಅಣ್ಣಾವ್ರ ಕೆಲವು ಮಾತುಗಳು ಶಂಕರನಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತವೆ.. ಇದರ ನಂತರ ಶಂಕರನ ಕಥೆ ಏನಾಯ್ತು, ಶಂಕರನ ತರಹ ಇದ್ದ ಶಿಲೆ ಕಥೆ ಏನಾಯ್ತು, ಇದೇ ಕಾಲಾಪತ್ಥರ್
ಚಿತ್ರದ ಅಸಲಿ ಪವರ್ ಫುಲ್ ಲೈನ್.. 

ಒಟ್ಟಾರೆಯಾಗಿ ಹೇಳುವುದಾದರೆ ಕಾಲಾಪತ್ಥರ್ ಸಿನಿಮಾ ನೋಡಿದಾಗ ನನಗೆ ಅನಿಸಿದ್ದು, ನಮ್ಮ ಅಹಂ, ನಮ್ಮ ಭ್ರಮೆ, ನಮ್ಮ ಬದುಕಿನ ದಿಕ್ಕನ್ನು ಹೇಗೆ ತಪ್ಪಿಸುತ್ತದೆ ಅನ್ನೋದು ಒಂದು ಕಡೆಯಾದರೆ, ಮತ್ತೊಂದು ಕಡೆ ಅಣ್ಣಾವ್ರಂತಹ ದೇವತಾ ಮನುಷ್ಯನ ಆಗಮನ ಚಿತ್ರದ ಬದಲಾವಣೆಗೆ ಹೇಗೆಲ್ಲ, ನಾಂದಿಯಾಗುತ್ತದೆ ಅನ್ನೋದೇ ಕಾಲಾಪತ್ಥರ್ ನ ಮೇಜರ್ ಹೈಲೈಟ್.

ಏ ಬ್ರೋ.., ಆ್ಯಕ್ಚುವಲಿ ಸೋನಲ್ ಯಾವತ್ತೂ ನಂಗೆ ಹುಡ್ಗಿ ಅಂತ ಅನ್ನಿಸ್ಲೇ ಇಲ್ಲ; ನಟ ದರ್ಶನ್!

ತಾನೆ ನಟಿಸಿ ನಿರ್ದೇಶನ ಮಾಡಿದ ವಿಕ್ಕಿ ವರುಣ್ ಕೆಲಸ ಎಕ್ಸಲೆನ್ಸ್, ಧನ್ಯ ರಾಮ್ ಕುಮಾರ್ ಸಿಂಪ್ಲಿ ಸೂಪರ್ಬ್ ಇನ್ನು ಟಿ ಎಸ್ ನಾಗಭರಣ ರಾಜೇಶ್ ನಟರಂಗ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡ ಅಚ್ಯುತ್ ರಾವ್, ಗಿಲ್ಲಿ ನಟ, ಸಂಪತ್ ಮೈತ್ರೆಯ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ..  

ರಾಗನಿಧಿ ಅನುಪ್ ಸೀಳಿನ್ ಸಂಗೀತಕ್ಕೆ ಪ್ರೇಕ್ಷಕರು ತಲೆದೋಗುತ್ತಾರೆ ಕ್ಯಾಮೆರಾ ಕೈಚಳಕ ಅದ್ಭುತ, ಲ್ಯಾಗ್ ಇಲ್ಲದ ಎಡಿಟಿಂಗ್, ಅಚ್ಚುಕಟ್ಟಾದ ಸಂಭಾಷಣೆ, ಸತ್ಯ ಪ್ರಕಾಶರ ಬ್ರಿಲಿಯಂಟ್ ಕಥೆ, ಕಾಲ ಚಿತ್ರವನ್ನು ಅಲುಗಾಡದಂತೆ ಹಿಡಿದು ಕೂಡಿಸುತ್ತೆ.. I ಈ ಮೂಲಕ ಕನ್ನಡಕ್ಕೆ ವಿಕ್ಕಿ ವರುಣ್ ಮೂಲಕ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ಸಿಕ್ಕಂತಾಗಿದೆ. ಆಲ್ ದಿ ಬೆಸ್ಟ್ ವಿಕ್ಕಿ ಅಂತಿದಾರೆ ಸ್ಯಾಂಡಲ್‌ವುಡ್ ಪ್ರೇಕ್ಷಕರು!

click me!