ಉಸಿರು ಸಿನಿಮಾ ವಿಮರ್ಶೆ: ಸೈಕೋ ಥ್ರಿಲ್ಲರ್ ಚಿತ್ರದಲ್ಲಿ ಗರ್ಭಿಣಿಯರು ಕಾಣೆಯಾಗುತ್ತಾರೆ!

Published : Aug 30, 2025, 05:43 PM IST
Usiru

ಸಾರಾಂಶ

ತನ್ನ ತಾಯಿಯನ್ನು ಕಳೆದುಕೊಂಡಿರುವ ವ್ಯಕ್ತಿ ಅಮ್ಮನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆಯೇ ಎನ್ನುವುದರ ಜೊತೆಗೆ ಅಪಾಯದಲ್ಲಿರುವ ತನ್ನ ಪತ್ನಿಯನ್ನು ಪೊಲೀಸ್ ಅಧಿಕಾರಿ ಹೇಗೆ ರಕ್ಷಿಸಿಕೊಳ್ಳುತ್ತಾನೆ ಎನ್ನುವುದು ಕತೆಯ ಸಣ್ಣ ತಿರುಳು.

ಆರ್‌. ಕೇಶವಮೂರ್ತಿ

ಆತ ಬೇಜವಾಬ್ದಾರಿ ಪೊಲೀಸ್‌. ತನ್ನ ಗರ್ಭಿಣಿ ಪತ್ನಿಗೆ ಅನಾಮಿಕನೊಬ್ಬನಿಂದ ಪ್ರಾಣಕ್ಕೆ ಅಪಾಯ ಇದೆ ಎನ್ನುವ ಮಾಹಿತಿ ಗೊತ್ತಾದ ಮೇಲೆ ಆ ಬೇಜವಾಬ್ದಾರಿ ಪೊಲೀಸ್‌ ಅಧಿಕಾರಿಯ ಮುಂದಿನ ನಡೆ ಏನು ಎಂಬುದನ್ನು ಹೇಳುತ್ತಲೇ ಒಂದು ಸೈಕೋ ಥ್ರಿಲ್ಲರ್‌ ಕತೆಯನ್ನು ಪ್ರೇಕ್ಷಕರ ಮುಂದಿಡುತ್ತದೆ ‘ಉಸಿರು’ ಸಿನಿಮಾ. ಥ್ರಿಲ್ಲರ್ ಚಿತ್ರಕ್ಕೂ ಚಿತ್ರದ ಹೆಸರಿಗೂ ಏನು ಸಂಬಂಧ ಎಂದರೆ ಚಿತ್ರದಲ್ಲಿ ತಾಯಿಯ ಪ್ರೀತಿ ಇದೆ. ಇಡೀ ಕತೆ ಮಡಿಕೇರಿ ಪರಿಸರದ ಹಿನ್ನೆಲೆಯಲ್ಲಿ ಸಾಗುವುದರಿಂದ ಚಿತ್ರಕ್ಕೆ ಒಂದಿಷ್ಟು ರೋಚಕತೆ ಹಾಗೂ ಕುತೂಹಲ ನೆರಳು ಆವರಿಸಿಕೊಳ್ಳುತ್ತದೆ.

ತನ್ನ ತಾಯಿಯನ್ನು ಕಳೆದುಕೊಂಡಿರುವ ವ್ಯಕ್ತಿ ಅಮ್ಮನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆಯೇ ಎನ್ನುವುದರ ಜೊತೆಗೆ ಅಪಾಯದಲ್ಲಿರುವ ತನ್ನ ಪತ್ನಿಯನ್ನು ಪೊಲೀಸ್ ಅಧಿಕಾರಿ ಹೇಗೆ ರಕ್ಷಿಸಿಕೊಳ್ಳುತ್ತಾನೆ ಎನ್ನುವುದು ಕತೆಯ ಸಣ್ಣ ತಿರುಳು. ಇಲ್ಲಿ ಪೊಲೀಸ್‌ ಅಧಿಕಾರಿಯೊಬ್ಬನ ಬೇಜವಾಬ್ದಾರಿಯನ್ನು ಹೇಳುತ್ತಲೇ, ಅದೇ ಪೊಲೀಸ್‌ ಅಧಿಕಾರಿ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದನ್ನೂ ಕೂಡ ತೋರಿಸಿರುವುದು ಚಿತ್ರದ ಪ್ಲಸ್ ಪಾಯಿಂಟ್.

ಚಿತ್ರ: ಉಸಿರು
ತಾರಾಗಣ: ತಿಲಕ್, ಪ್ರಿಯಾ ಹೆಗ್ಡೆ, ಸಂತೋಷ್‌, ಅರುಣ್‌, ಅಪೂರ್ವ, ರಘು ರಮಣಕೊಪ್ಪ
ನಿರ್ದೇಶನ: ಪನೇಮ್ ಪ್ರಭಾಕರ್
ರೇಟಿಂಗ್: 3

ಇದರ ಜೊತೆಗೆ ತಾಯಿಯನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿ ಕ್ರೈಮ್ ಮಾಡಲು ಮುಂದಾದರೆ ಏನಾಗುತ್ತದೆ ಎನ್ನುವ ಎಳೆಯೂ ಇಲ್ಲಿದೆ. ರಾಜೀವ್‌ ಮುತ್ತಣ್ಣ ಪಾತ್ರದಲ್ಲಿ ತಿಲಕ್‌, ಸೂರ್ಯ ಪಾತ್ರದಲ್ಲಿ ಸಂತೋಷ್‌ ಅವರು ಕಾಣಿಸಿಕೊಂಡಿದ್ದು ಈ ಇಬ್ಬರ ಮುಖಾಮುಖಿಯೇ ಚಿತ್ರದ ಹೈಲೈಟ್. ಹಿನ್ನೆಲೆ ಸಂಗೀತ ಮತ್ತು ಲೊಕೇಶನ್‌ಗಳು ಚಿತ್ರದ ಮತ್ತೊಂದು ಹೈಲೈಟ್‌. ಗರ್ಭಿಣಿ ಪಾತ್ರದಲ್ಲಿ ಪ್ರಿಯಾ ಹೆಗ್ಡೆ ಅವರದ್ದು ಕತೆಗೆ ಪೂರಕವಾದ ನಟನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?
ಪ್ರೇಮವೋ, ದ್ವೇಷವೋ, ಥ್ರಿಲ್ಲರೋ?: ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ