ಶ್ರೀ ಮಹಾದೇವ್, ರಂಗಾಯಣ ರಘು, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ಪ್ರಣತಿ, ಯಶಿಕಾ ಗೌಡ, ಗೋವಿಂದೇಗೌಡ, ಪ್ರಕಾಶ್ ತುಮಿನಾಡ್ ನಟನೆಯ ಜಸ್ಟ್ ಪಾಸ್ ಸಿನಿಮಾ ರಿಲೀಸ್ ಆಗಿದೆ.
ಆರ್.ಕೆ
ಒಂದು ಕಾಲೇಜು. ಅದರ ಒಳಗೆ ಮತ್ತು ಹೊರಗಿನ ಚಟುವಟಿಕೆಗಳ ಸುತ್ತ ನಡೆಯುವ ಒಂದು ಸಂದೇಶಭರಿತ ಡ್ರಾಮಾ ಕತೆಯೇ ‘ಜಸ್ಟ್ ಪಾಸ್’. ಈ ಡ್ರಾಮಾದ ಮುಖ್ಯ ಪಾತ್ರಧಾರಿ ಕಾಲೇಜಿನ ಪ್ರಿನ್ಸಿಪಾಲ್ ದಳವಾಯಿ. ಉಳಿದಂತೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇವರ ಜತೆಗೆ ಹೊರಗಿನ ಪಾತ್ರಧಾರಿಗಳಾಗಿ ಶಿಕ್ಷಣ ಸಚಿವ, ಪೊಲೀಸ್, ಮಾಫಿಯಾ ಮಂದಿ ಇದ್ದಾರೆ. ಅವರೆಲ್ಲರನ್ನೂ ಒಟ್ಟು ಮಾಡಿಕೊಂಡು ನಿರ್ದೇಶಕ ಕೆ ಎಂ ರಘು ಶಿಕ್ಷಣ ಕುರಿತ ವಸ್ತುವನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ.
ಚಿತ್ರದ ಕತೆ ಹೆಸರಿನಲ್ಲೇ ಅಡಗಿಕೊಂಡಿದೆ. ಮೂರಕ್ಕಿಳಿಯದ, ಆರಕ್ಕೇರದ ಜಸ್ಟ್ ಪಾಸ್ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಕಾಲೇಜು. ಈ ಕಾಲೇಜಿನಲ್ಲಿ ಓದಿಗಿಂತ ಇನ್ನಿತರೆ ಚಟುವಟಿಕೆಗಳೇ ಹೆಚ್ಚು. ಹೀಗೆ ಹಾದಿ ತಪ್ಪಿರುವ ವಿದ್ಯಾರ್ಥಿಗಳನ್ನು ಸರಿ ಮಾಡುವುದು ಹೇಗೆ ಎಂಬುದು ಒಂದು ಕಡೆಯಾದರೆ, ಏನಾದರೂ ಮಾಡಿ ಈ ಕಾಲೇಜು ಮುಚ್ಚಿಸಬೇಕೆಂದು ಸಾಹಸ ಮಾಡುತ್ತಿರುವ ವ್ಯವಸ್ಥೆ ಮತ್ತೊಂದು ಕಡೆ. ಈ ಎರಡರ ಮಧ್ಯೆ ಶಿಕ್ಷಣ ವ್ಯವಸ್ಥೆ, ಪಠ್ಯೇತರ ಆಸಕ್ತಿಗಳು, ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬದುಕಿನ ಸುತ್ತ ಕತೆ ಸಾಗುತ್ತಿರುತ್ತದೆ.
ONDU SARALA PREMA KATHE REVIEW ಆಹ್ಲಾದಕರ ಅನುಭವ ಉಳಿಸುವ ಪ್ರೀತಿ ಕತೆ
ತಾರಾಗಣ: ಶ್ರೀ ಮಹಾದೇವ್, ರಂಗಾಯಣ ರಘು, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ಪ್ರಣತಿ, ಯಶಿಕಾ ಗೌಡ, ಗೋವಿಂದೇಗೌಡ, ಪ್ರಕಾಶ್ ತುಮಿನಾಡ್
ನಿರ್ದೇಶನ: ಕೆ.ಎಂ. ರಘು
ರೇಟಿಂಗ್: 3
Maaye and Company Review ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮದ ಅರಿವು ಮೂಡಿಸುವ ಚಿತ್ರ
ಶ್ರೀ ಮಹಾದೇವ್, ರಂಗಾಯಣ ರಘು, ಸಾಧುಕೋಕಿಲ, ಪ್ರಕಾಶ್ ತುಮಿನಾಡ್ ಅವರಂತಹ ಪ್ರತಿಭಾವಂತರು ಇಲ್ಲಿದ್ದಾರೆ ಎಂಬುದು ಚಿತ್ರದ ಹೈಲೈಟ್. ಒಂದು ಹಾಡು ಸೊಗಸಾಗಿದೆ. ಫೈಟ್‌ಗಳು ಕತೆಯ ಹಿನ್ನೆಲೆಗಿಂತ ತುಸು ದೂರ ನಿಲ್ಲುತ್ತವೆ. ಅದರ ಹೊರತಾಗಿ ಶಿಕ್ಷಣ ಕುರಿತ ವಸ್ತು ಮತ್ತು ಸ್ಫೂರ್ತಿದಾಯಕ ಸಂದೇಶ ಈ ಚಿತ್ರದ ಕೇಂದ್ರ. ಅದರಿಂದಲೇ ಈ ಚಿತ್ರಕ್ಕೆ ಮಹತ್ವ ಬಂದಿದೆ.