
ಆರ್. ಕೇಶವಮೂರ್ತಿ
ನಟ ಧರ್ಮ ಕೀರ್ತಿರಾಜ್ ನಟನೆಯ ಮತ್ತೊಂದು ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಈ ಬಾರಿಯೂ ಅವರು ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ‘ರೋನಿ’ ಸಿನಿಮಾ ರೋಚಕತೆಯ ತಿರುವುಗಳಲ್ಲಿ ನೋಡುಗರಿಗೆ ಅಚ್ಚರಿ ಮೂಡಿಸುತ್ತಾ ಸಾಗುತ್ತದೆ. ಕತೆಗಾರ ಕಿರಣ್ ಆರ್ ಕೆ ಮೊದಲಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಒಂದು ದರೋಡೆ ಕತೆಯನ್ನು ಹೇಳಿದ್ದಾರೆ. ಮೂವತ್ತು ಕೋಟಿ ರಾಬರಿ ಪ್ರಕರಣದಲ್ಲಿ ರೋನಿ ಯಾರು ಎಂಬುದೇ ಚಿತ್ರದ ದೊಡ್ಡ ಕುತೂಹಲಕಾರಿ ಅಂಶ.
ಚಿತ್ರದ ಕತೆ ಏನು ಎಂದರೆ ಒಬ್ಬ ಶ್ರೀಮಂತ ಹುಡುಗಿ ಇದ್ದಾಳೆ. ಆಕೆಯ ಮನೆಯಲ್ಲಿ ಮೂವತ್ತು ಕೋಟಿ ನಾಪತ್ತೆ ಆಗಿದೆ. ಇಷ್ಟು ದೊಡ್ಡ ಮೊತ್ತ ಹಣ ದರೋಡೆ ಮಾಡಿದ್ದು ಯಾರು, ಇಷ್ಟಕ್ಕೂ ಹಣ ದರೋಡೆ ಆಗಿದಿಯೋ ಇಲ್ಲವೋ ಎನ್ನುವ ಸಸ್ಪೆನ್ಸ್ ಒಂದು ಕಡೆಯಾದರೆ, ಮತ್ತೊಂದು ಕಡೆ ಎರಡು ಕೊಲೆಗಳು ಸಂಭವಿಸುತ್ತವೆ. ಈ ಎರಡೂ ಕೊಲೆ ಪ್ರಕರಣದಲ್ಲೂ ಒಂದು ಕಾಮನ್ ಪಾಯಿಂಟ್ ಇದೆ. ಅದು ಏನು ಎಂಬುದಕ್ಕೆ ಸಿನಿಮಾ ನೋಡಬೇಕು.
ಚಿತ್ರ: ರೋನಿ
ತಾರಾಗಣ: ಧರ್ಮ ಕೀರ್ತಿರಾಜ್, ರುತ್ವಿ ಪಟೇಲ್, ರಘು ಪಾಂಡೇಶ್ವರ್
ನಿರ್ದೇಶನ: ಕಿರಣ್ ಆರ್ ಕೆ
ಚಿತ್ರದ ಮೊದಲ ಭಾಗ ಪ್ರಶ್ನೆಗಳ ಸರಮಾಲೆಯನ್ನು ಕಟ್ಟಿ ವಿರಾಮದ ನಂತರ ಕತೆ ಈ ಎಲ್ಲಾ ಪ್ರಶ್ನೆಗಳ ತಿರುವುಗಳಲ್ಲಿ ಸಂಚರಿಸುತ್ತಾ ಪ್ರೇಕ್ಷಕನಿಗೆ ರಿಲ್ಯಾಕ್ಸ್ ಕೊಡುತ್ತದೆ. ಒಂದು ಸಸ್ಪೆನ್ಸ್, ಕ್ರೈಮ್ ಹಾಗೂ ರಾಬರಿ ಜಾನರ್ ಚಿತ್ರಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಮೆಚ್ಚುಗೆ ಆಗುವ ಕತೆ ಇಲ್ಲಿದೆ. ನಟ ಧರ್ಮ ಕೀರ್ತಿರಾಜ್ ಈ ಚಿತ್ರದ ಮೂಲಕ ಆ್ಯಕ್ಷನ್ ಹೀರೋ ಆಗುವ ಸಾಹಸ ಮಾಡಿದ್ದಾರೆ. ತಿಲಕ್ ಅವರದ್ದು ವಿಶೇಷ ಪಾತ್ರ. ಅಕಾಶ್ಹಿ ಪರ್ವ ಹಿನ್ನೆಲೆ ಸಂಗೀತ ಹಾಗೂ ವೀನಸ್ ನಾಗರಾಜಮೂರ್ತಿ ಛಾಯಾಗ್ರಾಹಕಣ ಚಿತ್ರಕ್ಕೆ ತಾಂತ್ರಿಕ ಶಕ್ತಿ ತುಂಬಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.