Tagaru Palya Review: ಭಾಷೆ ಸೊಗಸು, ದೃಶ್ಯ ಚಂದ, ಕಥನ ವಿಶಿಷ್ಟ

Published : Oct 28, 2023, 08:23 PM ISTUpdated : Oct 30, 2023, 10:48 AM IST
Tagaru Palya Review: ಭಾಷೆ ಸೊಗಸು, ದೃಶ್ಯ ಚಂದ, ಕಥನ ವಿಶಿಷ್ಟ

ಸಾರಾಂಶ

ಹಳ್ಳಿಯ ಆಚರಣೆಗಳಿಂದ ದೂರ ಹೋಗುತ್ತಿರುವ ಜನ, ಹಳ್ಳಿ ತರುಣರಿಗೆ ಮದುವೆಗೆ ಹೆಣ್ಣು ಸಿಗದಿರುವುದು, ಮಹಾನಗರದ ಮೇಲಿನ ವ್ಯಾಮೋಹ, ಒಡೆದು ಹೋಗುತ್ತಿರುವ ಕುಟುಂಬ, ಹೆಣ್ಣು ಹೆತ್ತವರ ಸಂಕಟ, ಇನ್ನೂ ಬೇಕೆಂಬ ದುರಾಸೆ ಇವೆಲ್ಲವನ್ನೂ ತಮಾಷೆಯ ಜೊತೆಗೆ ಸುತ್ತಿಕೊಟ್ಟಿದ್ದಾರೆ ನಿರ್ದೇಶಕರು. ಭಾವನೆಗಳಿಗೆ ಇಲ್ಲಿ ಹೆಚ್ಚು ಮಹತ್ವ. ಅದರಿಂದಲೇ ಈ ಸಿನಿಮಾ ವಿಭಿನ್ನ ವಿಶಿಷ್ಟ.  

ರಾಜೇಶ್ ಶೆಟ್ಟಿ

1. ನಾಡಿನುದ್ದಕ್ಕೂ ಹಲವು ಕನ್ನಡಗಳಿವೆ. ಒಂದೊಂದು ಭಾಗಕ್ಕೆ ಒಂದೊಂದು ಕನ್ನಡ. ಈ ಸಿನಿಮಾದಲ್ಲಿ ಇರುವುದು ಚಾಮರಾಜ ನಗರ ಭಾಗದ ಕನ್ನಡ. ಸೊಗಸಾದ ಕನ್ನಡ. ಇಂಪಾದ ಕನ್ನಡ.

2. ಸಿನಿಮಾ ಇರುವುದು ಸೂಕ್ಷ್ಮದಲ್ಲಿ. ನಿರ್ದೇಶಕರು ಒಂದು ಭಾಗದ ಆಚರಣೆ, ಸಂಪ್ರದಾಯವನ್ನು ಬಹಳ ಹತ್ತಿರದಿಂದ ಕಂಡಿದ್ದಾರೆ ಅನ್ನುವುದಕ್ಕೆ ಈ ಸಿನಿಮಾ ಪುರಾವೆ. ಅದನ್ನು ತಾಕುವ ಹಾಗೆ ಕಟ್ಟಿಕೊಟ್ಟಿದ್ದು ಹೆಗ್ಗಳಿಕೆ.

3. ಕಥನದ ಜೊತೆ ಕಣ್ಣು, ಮನಸ್ಸು ತುಂಬುವ ದೃಶ್ಯ ಮುಖ್ಯ. ಭರಚುಕ್ಕಿಯಲ್ಲಿ ಧುಮ್ಮಿಕ್ಕುವ ಕಾವೇರಿ ದಡದಲ್ಲಿ ಚಂದ ಸೆಟ್ ಹಾಕಿರುವ ಮನಮೋಹಕ ಚಿತ್ರಾವಳಿ ಚಿತ್ರದ ಪ್ಲಸ್ಸು.

ಚಿತ್ರ: ಟಗರು ಪಲ್ಯ
ನಿರ್ದೇಶನ: ಉಮೇಶ್ ಕೆ. ಕೃಪ
ತಾರಾಗಣ: ನಾಗಭೂಷಣ, ಅಮೃತಾ ಪ್ರೀತಮ್, ರಂಗಾಯಣ ರಘು, ತಾರಾ, ಹುಲಿ ಕಾರ್ತಿಕ್, ವೃಜನಾಥ ಬಿರಾದಾರ್
ರೇಟಿಂಗ್: 3

ಈ ಮೂರು ವಿಷಯಗಳು ಈ ಚಿತ್ರವನ್ನು ಒಂದು ಕೈ ಹೆಚ್ಚು ಹತ್ತಿರವಾಗಿಸುತ್ತವೆ. ಇಲ್ಲಿ ನಿರ್ದೇಶಕರು ಒಂದು ಸರಳವಾಗಿ ಕಾಣಿಸುವ ಕತೆ ಹೇಳಿದ್ದಾರೆ. ಅಷ್ಟೇ ಸರಳ ಚಿತ್ರಕತೆ. ಆದರೆ ಸರಳವಾದುದರ ಆಳವನ್ನು ಹುಡುಕುತ್ತಾ ಹೋದರೆ ಬೇರೆ ಬೇರೆ ಪದರಗಳು ತೆರೆದುಕೊಳ್ಳುತ್ತವೆ.

ಹಳ್ಳಿಯ ಆಚರಣೆಗಳಿಂದ ದೂರ ಹೋಗುತ್ತಿರುವ ಜನ, ಹಳ್ಳಿ ತರುಣರಿಗೆ ಮದುವೆಗೆ ಹೆಣ್ಣು ಸಿಗದಿರುವುದು, ಮಹಾನಗರದ ಮೇಲಿನ ವ್ಯಾಮೋಹ, ಒಡೆದು ಹೋಗುತ್ತಿರುವ ಕುಟುಂಬ, ಹೆಣ್ಣು ಹೆತ್ತವರ ಸಂಕಟ, ಇನ್ನೂ ಬೇಕೆಂಬ ದುರಾಸೆ ಇವೆಲ್ಲವನ್ನೂ ತಮಾಷೆಯ ಜೊತೆಗೆ ಸುತ್ತಿಕೊಟ್ಟಿದ್ದಾರೆ ನಿರ್ದೇಶಕರು. ಭಾವನೆಗಳಿಗೆ ಇಲ್ಲಿ ಹೆಚ್ಚು ಮಹತ್ವ. ಅದರಿಂದಲೇ ಈ ಸಿನಿಮಾ ವಿಭಿನ್ನ ವಿಶಿಷ್ಟ.

Shivanna Ghost Review: ಮುಗಿಯದ ಕತೆಯ ಮೊದಲ ರೋಚಕ ಅಧ್ಯಾಯ!

ಹಿರಿಯ ಕಲಾವಿದರು ಈ ಚಿತ್ರದ ಆಧಾರಗಳು. ನಾಯಕ ನಾಗಭೂಷಣ್ ಕುಟುಂಬವನ್ನೂ ಸಿನಿಮಾವನ್ನೂ ಹೆಗಲಲ್ಲಿ ಹೊತ್ತು ಸಾಗಿದ್ದಾರೆ. ನಾಯಕಿ ಅಮೃತಾ ಪ್ರೇಮ್ ಕ್ಲೈಮ್ಯಾಕ್ಸಿನಲ್ಲಿ ಹೆಣ್ಣು ಹೆತ್ತವರ ಕಣ್ಣಲ್ಲಿ ನೀರು ತರಿಸುವುದಂತೂ ನಿಶ್ಚಿತ. ಭಾವಗಳೇ ಮೇಲುಗೈ ಸಾಧಿಸಿರುವ ಈ ಸಿನಿಮಾದ ಅಂತ್ಯಕ್ಕೆ ಜೋರು ಮಳೆ ಸುರಿಯುತ್ತದೆ. ಆ ಮಳೆ ಪ್ರೇಕ್ಷಕನ ಹೃದಯಕ್ಕೂ ರಾಚುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?