ಕಮಲ್‌ ಶ್ರೀದೇವಿ ವಿಮರ್ಶೆ: ಭಾವನಾತ್ಮಕ ಮರ್ಡರ್ ಮಿಸ್ಟರಿ, ನೋವಿನ ಕಥೆ ಹೇಳುವ ಸಿನಿಮಾ

Published : Sep 20, 2025, 11:48 AM IST
Kamal Sridevi

ಸಾರಾಂಶ

‘ಕಮಲ್‌ ಶ್ರೀದೇವಿ’ ಒಂದು ಭಾವನಾತ್ಮಕ ಮರ್ಡರ್‌ ಮಿಸ್ಟರಿ. ನಿರ್ದೇಶಕ ಸುನೀಲ್‌ ಕುಮಾರ್‌ ಹಗುರವಾಗಿ ಕಥೆ ಕೇಳುವ ಕ್ರಮವನ್ನು ಇಲ್ಲಿ ಅನುಸರಿಸಿದ್ದಾರೆ. ಸಾಮಾನ್ಯವಾಗಿ ಮರ್ಡರ್‌ ಮಿಸ್ಟರಿಗಳಲ್ಲಿರುವ ರೋಚಕತೆಗಿಂತಲೂ ಇಲ್ಲಿ ಭಾವನಾತ್ಮಕತೆಯೇ ಪ್ರಧಾನವಾಗುತ್ತದೆ.

ಪ್ರಿಯಾ

‘ಕಮಲ್‌ ಶ್ರೀದೇವಿ’ ಒಂದು ಭಾವನಾತ್ಮಕ ಮರ್ಡರ್‌ ಮಿಸ್ಟರಿ. ನಿರ್ದೇಶಕ ಸುನೀಲ್‌ ಕುಮಾರ್‌ ಹಗುರವಾಗಿ ಕಥೆ ಕೇಳುವ ಕ್ರಮವನ್ನು ಇಲ್ಲಿ ಅನುಸರಿಸಿದ್ದಾರೆ. ಸಾಮಾನ್ಯವಾಗಿ ಮರ್ಡರ್‌ ಮಿಸ್ಟರಿಗಳಲ್ಲಿರುವ ರೋಚಕತೆಗಿಂತಲೂ ಇಲ್ಲಿ ಭಾವನಾತ್ಮಕತೆಯೇ ಪ್ರಧಾನವಾಗುತ್ತದೆ. ಈ ಚಿತ್ರದ ಆಂತರ್ಯದಲ್ಲಿ ಹೆಣ್ಣೊಬ್ಬಳ ನೋವಿನ ಕಥೆ ಇದೆ. ಸಿನಿಮಾ ಮಾಡಿ ಸೋಲುವ ಹತಾಶ ನಿರ್ದೇಶಕನೊಬ್ಬ ನೋವನ್ನು ಹಂಚಿಕೊಳ್ಳುವ ಜೀವಕ್ಕಾಗಿ ಎದುರು ನೋಡುತ್ತಿರುತ್ತಾನೆ. ಆಗ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡವಳ ಪರಿಚಯವಾಗುತ್ತದೆ.

ಇತರರೆಲ್ಲ ಆಕೆಗೆ ದೇಹ ಸುಖಕ್ಕೆ ಹಣ ಕೊಟ್ಟರೆ, ಈ ನಿರ್ದೇಶಕ ಆಕೆಗೆ ದುಡ್ಡು ಕೊಡುವುದು ಅವನ ಗೋಳಿನ ಕತೆ ಕೇಳಲು. ಹಾಗೆ ಕಥೆ ಹೇಳುವವನಿಗೆ ಅವಳ ಕಥೆಯ ಬಗ್ಗೆ ಆಸಕ್ತಿ ಬೆಳೆದು ಸೆಕೆಂಡ್‌ ಹಾಫ್‌ನಲ್ಲಿ ಆಕೆಯ ಕಥೆಗೆ ವೇದಿಕೆ ತೆರೆದುಕೊಳ್ಳುತ್ತದೆ. ಅಲ್ಲಿಯವರೆಗೆ ನಿರ್ದೇಶಕನ ಕಥೆ ಕೇಳುವುದು ಪ್ರೇಕ್ಷಕನಿಗೆ ಅನಿವಾರ್ಯ. ಆಮೇಲೆ ತಾನ್ಯಾಕೆ ಏಕಾಏಕಿ ದೇಹ ಮಾರಿಕೊಳ್ಳಲು ಹೊರಟೆ ಎಂಬ ಕಥೆಯನ್ನು ಆ ಹೆಣ್ಣುಮಗಳು ಹೇಳುತ್ತಾಳೆ. ಫ್ಯಾಶ್‌ಬ್ಯಾಕ್‌ ಮತ್ತು ವಾಸ್ತವಗಳ ಜುಗಲ್‌ಬಂಧಿಯಲ್ಲಿ ಕಥೆ ಸಾಗುತ್ತದೆ. ಸಿನಿಮಾದ ಕೊನೆ ನಿರೀಕ್ಷೆಯಂತೆ ಸಾಗುತ್ತದೆ.

ಚಿತ್ರ : ಕಮಲ್‌ ಶ್ರೀದೇವಿ
ತಾರಾಗಣ: ಸಚಿನ್‌ ಚಲುವರಾಯಸ್ವಾಮಿ, ಸಂಗೀತಾ ಭಟ್‌, ಕಿಶೋರ್‌ ಕುಮಾರ್‌
ನಿರ್ದೇಶನ : ಸುನೀಲ್‌ ಕುಮಾರ್ ವಿ ಎ

ಸಂದರ್ಶನದಲ್ಲಿ ಸಚಿನ್‌ ಚಲುವರಾಯ ಸ್ವಾಮಿ ಅವರು ಇದು ಫ್ಯಾಮಿಲಿ ನೋಡಬಹುದಾದ ಸಿನಿಮಾ ಅಂತ ಹೇಳಿದ್ದರೂ, ಇದರಲ್ಲಿ ಅಡಲ್ಟ್‌ ಕಂಟೆಂಟ್‌ ಹೆಚ್ಚಿದೆ. ರಮೇಶ್‌ ಇಂದಿರಾ ಪಿಂಪ್‌ ಪಾತ್ರದಲ್ಲಿ ಸಕಲ ಗುಣಗಳನ್ನೂ ತೋರಿಸಿ ಪ್ರೇಕ್ಷಕನ ಗಮನ ಸೆಳೆಯುತ್ತಾರೆ. ನಿಷ್ಠ ಪೊಲೀಸ್‌ ಅಧಿಕಾರಿಯಾಗಿ ಕಿಶೋರ್‌ ನಟನೆಯೂ ಚೆನ್ನಾಗಿದೆ. ತಣ್ಣನೆಯ ನಟನೆಯಲ್ಲಿ ಸಚಿನ್‌ ಕಾಣಿಸಿಕೊಂಡಿದ್ದಾರೆ. ಸಂಗೀತಾ ಭಟ್‌ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?
ಪ್ರೇಮವೋ, ದ್ವೇಷವೋ, ಥ್ರಿಲ್ಲರೋ?: ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ