Vasanthi Nalidaga Review ಸಿಂಪಲ್ ಲವ್‌ಸ್ಟೋರಿ ಮತ್ತು ಜೀವನಪಾಠ

By Kannadaprabha News  |  First Published Dec 3, 2022, 10:47 AM IST

ರೋಹಿತ್‌ ಶ್ರೀಧರ್‌, ಭಾವನಾ ಶ್ರೀನಿವಾಸ್‌, ಸಾಯಿ ಕುಮಾರ್‌, ಸುಧಾರಾಣಿ ಮತ್ತು ಜೀವಿತಾ ವಸಿಷ್ಠ ನಟಿಸಿರುವೆ ವಾಸಂತಿ ನಲಿದಾಗ ಸಿನಿಮಾ ರಿಲೀಸ್ ಆಗಿದೆ.


ಪೀಕೆ

ನಾವೆಲ್ಲ ಬಹಳ ಸಲ ನೋಡಿರುವ ಸಿಂಪಲ್‌ ಲವ್‌ಸ್ಟೋರಿಯನ್ನೇ ಹೊಸತನದ ನಿರೀಕ್ಷೆಯಿಲ್ಲದೇ ಹೇಳಿರುವ ಚಿತ್ರ ‘ವಾಸಂತಿ ನಲಿದಾಗ’. ಕಾಲೇಜ್‌ ಲೈಫು, ಹುಡುಗ ಹುಡುಗಿ ಆಕರ್ಷಣೆ, ಹೊಡೆದಾಟ, ನಿಜ ಪ್ರೇಮ, ನೈಜ ಜೀವನದ ದರ್ಶನ ಈ ಅಂಶಗಳನ್ನಿಟ್ಟು ಮಾಡಿರುವ ಚಿತ್ರವಿದು. ಈ ಸಿನಿಮಾದ ಓಪನಿಂಗ್‌ ಸೀನ್‌ ಕೊಂಚ ಭಿನ್ನವಾಗಿದೆ. ರಾತ್ರಿ, ಧಾರಾಕಾರ ಮಳೆ, ಸರ್ಕಾರಿ ಆಸ್ಪತ್ರೆಯ ದೃಶ್ಯ ಸಿನಿಮಾ ಬಗ್ಗೆ ಕುತೂಹಲ ಮೂಡಿಸುತ್ತದೆ. ಮುಂದಿನ ಕ್ಷಣದಲ್ಲೇ ಈ ಯೋಚನೆಗೆ ಬ್ರೇಕ್‌ ಬೀಳುತ್ತದೆ. ಹೆಂಡತಿಗೆ ಹೆರಿಗೆಯಾದಾಗ ಔಷಧ ತರಲೂ ಹಣವಿಲ್ಲದ ಗಂಡನಿಗೆ ಮಗ ಅದೃಷ್ಟತರುತ್ತಾನೆ. ತನ್ನ ಬದುಕಿಗೆ ಲಕ್‌ ತಂದ ಮಗನಿಗೆ ಕೊರತೆಯೇ ಆಗದಂತೆ ತಂದೆ ಬೆಳೆಸುತ್ತಾನೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ, ಪ್ರೀತಿ, ಹಣದ ಬೆಲೆ, ಜವಾಬ್ದಾರಿ ಗೊತ್ತಿಲ್ಲದ ಮಗ ಹೇಗೆ ಜೀವನ ಪಾಠ ಕಲಿಯುತ್ತಾನೆ, ಆತನಿಗೆ ಕೊನೆಗೂ ನಿಜ ಪ್ರೀತಿ ಸಿಗುತ್ತಾ ಅನ್ನೋದು ಸಿನಿಮಾದಲ್ಲಿದೆ.

Latest Videos

undefined

ತಾರಾಗಣ: ರೋಹಿತ್‌ ಶ್ರೀಧರ್‌, ಭಾವನಾ ಶ್ರೀನಿವಾಸ್‌, ಸಾಯಿ ಕುಮಾರ್‌, ಸುಧಾರಾಣಿ, ಜೀವಿತಾ ವಸಿಷ್ಠ

ನಿರ್ದೇಶನ: ರವೀಂದ್ರ ವೆಂಶಿ

ರೇಟಿಂಗ್‌: 2

ಮೊದಲೇ ಹೇಳಿದಂತೆ ಹೊಸತನದ ನಿರೀಕ್ಷೆಯಲ್ಲಿ ಹೋದರೆ ನಿರಾಸೆ ಆಗಬಹುದು. ಒಂದು ಕಾಲೇಜ್‌ ಪ್ರೇಮಕಥೆಯನ್ನು ಸಿಂಪಲ್ಲಾಗಿ ನೋಡಿದರೆ ಸಾಕು ಅನ್ನೋರು ಸಿನಿಮಾ ನೋಡಬಹುದು. ಕಮರ್ಷಿಯಲ್‌ ಸಿನಿಮಾ ಅಂತ ಮೊದಲೇ ಹೇಳಿರೋ ಕಾರಣ ನೈಜತೆಯ ಹುಡುಕಾಟ ವ್ಯರ್ಥ ಪ್ರಯತ್ನ. ವಾಸಂತಿ ನಲಿದಾಗ ಹಾಡು ಚೆನ್ನಾಗಿದೆ. ರೋಹಿತ್‌ ನಟನೆ ಭರವಸೆ ಮೂಡಿಸುತ್ತದೆ. ಸುಧಾರಾಣಿ ನಟನೆ ಗಮನ ಸೆಳೆಯುತ್ತದೆ. ಭಾವನಾ ಮುಗ್ಧತೆ ಚೆನ್ನಾಗಿ ಬಂದರೂ ಡೈಲಾಗ್‌ ಡೆಲಿವರಿಯಲ್ಲಿ ಸುಧಾರಿಸಬೇಕು. ‘ಅಪ್ಪ ಅಮ್ಮನಿಗೆ ನಾನು ಅದೃಷ್ಟತಂದಿದ್ದಲ್ಲ, ಅವರ ಪ್ರೀತಿ ಒಂದಾದಾಗ ಅದುವೇ ಅದೃಷ್ಟವಾಗಿ ಬದಲಾದದ್ದು’ ಎನ್ನುವ ರೀತಿಯ ಡೈಲಾಗ್‌ ಚೆನ್ನಾಗಿವೆ.

DHARANI MANDALA MADHYADOLAGE REVIEW ಧರಣಿ ಮಂಡಲದಲ್ಲಿ ಪಾಪ, ಪುಣ್ಯಕೋಟಿಯ ಸಂಗಮ

ಸಾಮಾನ್ಯರೂ ಕಥೆ ಹೀಗೆಯೇ ಆಗಬಹುದು ಅಂತ ನಿರೀಕ್ಷಿಸಬಹುದು. ನಿರ್ದೇಶಕರು ಅನಿರೀಕ್ಷಿತ ತಿರುವು ತಂದು ಪ್ರೇಕ್ಷಕರಿಗೆ ಕಷ್ಟಕೊಡುವುದಿಲ್ಲ. ಮೊದಲ ಭಾಗದಲ್ಲಿ ಕಷ್ಟಪಟ್ಟು ಕೂರಬೇಕು, ಇಂಟರ್‌ವಲ್‌ ನಂತರ ಕಥೆ ಇದ್ದಂತೆ ಭಾಸವಾಗುತ್ತದೆ.

click me!