‘ಮದ್ಯದ ಸಾವಾಸ ಹೆಂಡತಿ ಮಕ್ಕಳು ಉಪವಾಸ’ ಎನ್ನುವ ಮಾತನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿರುವ ಕತೆಗಾರರು, ಮದ್ಯದ ನಂಟಿನಿಂದ ಆಗುವ ಸನ್ನಿವೇಶಗಳನ್ನು ಮಧ್ಯಂತರವರೆಗೂ ಹೇಳುತ್ತಾರೆ.
ಆರ್.ಕೆ
ನಾಲ್ಕು ಮಂದಿ ಸ್ನೇಹಿತರ ‘ಸಂ’ಸಾರಗಳ ಕತೆ ಹೇಳುವ ಸಿನಿಮಾ ‘ವಿಕಾಸ ಪರ್ವ’. ಸಂತೋಷ, ನಗು, ಸ್ನೇಹ ಮತ್ತು ಸಾವು ಇತ್ಯಾದಿ ಅಂಶಗಳನ್ನು ಆಧರಿಸಿರುವ ಈ ಚಿತ್ರಕ್ಕೆ ಕತೆ, ಚಿತ್ರಕಥೆ ಬರೆದಿರುವುದು ವಿಶ್ರುತ್ ನಾಯಕ್ . ‘ಮದ್ಯದ ಸಾವಾಸ ಹೆಂಡತಿ ಮಕ್ಕಳು ಉಪವಾಸ’ ಎನ್ನುವ ಮಾತನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿರುವ ಕತೆಗಾರರು, ಮದ್ಯದ ನಂಟಿನಿಂದ ಆಗುವ ಸನ್ನಿವೇಶಗಳನ್ನು ಮಧ್ಯಂತರವರೆಗೂ ಹೇಳುತ್ತಾರೆ.
undefined
ಆ ನಂತರ ಮದ್ಯದ ಸಾರಂಶವನ್ನು ಸಾದರ ಪಡಿಸುತ್ತಾರೆ. ಅರ್ಥಾತ್ ಕುಡಿತ ಚಟ, ಏನೆಲ್ಲ ಅನಾಹುತಗಳನ್ನು ತರಬಹುದು ಎಂಬ ಕಾಳಜಿಯನ್ನು ಸಿನಿಮಾ ಪ್ರದರ್ಶಿಸುತ್ತದೆ. ಸ್ನೇಹವೇ ಮುಖ್ಯ ಎಂದುಕೊಂಡಿರುವ ಮಧ್ಯ ವಯಸ್ಸಿನ ನಾಲ್ಕು ಮಂದಿ ಸ್ನೇಹಿತರು. ಆದರೆ, ಇವರ ಕುಡಿತ ಚಟಕ್ಕೆ ರೋಸಿ ಹೋಗಿರುವ ಅವರ ಪತ್ನಿಯರು. ಈ ಪೈಕಿ ಏನಾದರೂ ಮಾಡಿ ತನ್ನ ಗಂಡನ ಕುಡಿತದ ಚಟ ಬಿಡಿಸಬೇಕು ಎಂದುಕೊಳ್ಳುವ ಗೃಹಿಣಿ, ಗಂಡನನ್ನು ಕಳೆದುಕೊಳ್ಳುತ್ತಾಳೆ.
ಚಿತ್ರ: ವಿಕಾಸ ಪರ್ವ
ತಾರಾಗಣ: ರೋಹಿತ್ ನಾಗೇಶ್, ಸ್ವಾತಿ, ನಿಶಿತಾ ಗೌಡ, ಅಶ್ವಿನ್ ಹಾಸನ್, ಕುರಿ ರಂಗ, ಬಲರಾಜವಾಡಿ
ನಿರ್ದೇಶನ: ಅನ್ಬು ಅರಸ್
ಮತ್ತೊಬ್ಬರು ಸಾವು ಬದುಕಿನ ದರ್ಶನದಿಂದ ಆಚೆ ಬರುತ್ತಾರೆ. ಬಿಡಿ ಬಿಡಿಯಾಗಿ ಕುಡಿತದ ಅನಾಹುತಗಳನ್ನು ಆಯಾ ಪಾತ್ರಧಾರಿಗಳ ಮೂಲಕ ಹೇಳಲಾಗಿದೆ. ಹೀಗೆ ಮಧ್ಯಮ ವರ್ಗದವರ ಮದ್ಯ ವ್ಯಸನದ ವ್ಯಥೆಗಳನ್ನು ಹೇಳುತ್ತಾ ಹೋಗುವ ‘ವಿಕಾಸ ಪರ್ವ’, ಪರಿವರ್ತನೆ ಹಾದಿಯನ್ನೂ ತೋರುವುದು ಸಕರಾತ್ಮಕ ನಡೆ. ರೋಹಿತ್ ನಾಗೇಶ್, ಕುರಿ ರಂಗ, ಅಶ್ವಿನ್ ಹಾಸನ್ ಅವರು ಕತೆಗೆ ಪೂರಕವಾಗಿ ಮತ್ತು ನಿರ್ದೇಶಕರು ಹೇಳಿದಂತೆ ನಟಿಸಿದ್ದಾರೆ.