ತಪಸ್ಸಿ ಸಿನಿಮಾ ವಿಮರ್ಶೆ: ಹಾದಿ ತಪ್ಪೋರಿಗೆ ಬುದ್ಧಿ ಹೇಳೋ ಪ್ರೊಫೆಸರ್

Kannadaprabha News   | Kannada Prabha
Published : Jul 05, 2025, 02:43 PM IST
Tapassi

ಸಾರಾಂಶ

ಫ್ಲ್ಯಾಶ್‌ಬ್ಯಾಕ್ ತಂತ್ರದಲ್ಲಿ ಸಾಗುವ ಈ ಚಿತ್ರದಲ್ಲಿ ರಿಪೀಟ್ ಆಗುವ ದೃಶ್ಯಗಳು ಸೇರಿದಂತೆ ಒಂದಿಷ್ಟು ಕೊರತೆಗಳು ಇದ್ದರೂ, ಕನಸು ನನಸು ಮಾಡಿಕೊಳ್ಳಲು ಅಡ್ಡದಾರಿ ಹಿಡಿದರೆ ಏನಾಗುತ್ತದೆ ಎನ್ನುವ ಸಂದೇಶವನ್ನು ಅಚ್ಚುಕಟ್ಟಾಗಿ ಹೇಳುವಲ್ಲಿ ಚಿತ್ರ ಯಶಸ್ವಿ ಆಗುತ್ತದೆ.

ಆರ್‌. ಕೇಶವಮೂರ್ತಿ

ಹಣ, ಜನಪ್ರಿಯತೆಯೇ ಮುಖ್ಯ ಎಂದುಕೊಂಡು ಹೊರಡುವ ರೂಪದರ್ಶಿಯೊಬ್ಬಳ ಬದುಕು ಯಾವ ಯಾವ ದಾರಿಗಳಲ್ಲಿ ಪಯಣಿಸುತ್ತದೆ ಮತ್ತು ಅದರಿಂದ ಉಂಟಾಗುವ ಪರಿಣಾಮಗಳೇನು ಎಂಬುದನ್ನು ಹೇಳುವ ಮೂಲಕ ಹದಿಹರೆಯದವರನ್ನು ಎಚ್ಚರಿಸುವಂತೆ ತಪಸ್ಸಿ ಸಿನಿಮಾ ಮೂಡಿ ಬಂದಿದೆ. ಚಿತ್ರದ್ದು ನೈಜ ಘಟನೆಗಳನ್ನಾಧರಿಸಿದ ಕತೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಹಾಗಂತ ಆ ರಿಯಲ್ ರೂಪದರ್ಶಿ ಯಾರೆಂಬುದನ್ನು ಚಿತ್ರತಂಡ ಹೇಳಿಲ್ಲ. ಆದರೆ ರಂಗುರಂಗಿನ ಜಗತ್ತಿನಲ್ಲಿ ಮೈ ಮರೆತು ಪ್ರಚಾರ, ಹಣದ ಹಿಂದೆ ಹೋಗುವ ಬಹುತೇಕರ ಬದುಕು ಹೀಗೆ ಆಗುತ್ತದೆ ಎಂಬುದನ್ನು ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಹೇಳಿದ್ದಾರೆ. ತುಂಬಾ ಕಡಿಮೆ ಪಾತ್ರಧಾರಿಗಳ ಮೂಲಕ ಸಿನಿಮಾ ಸಾಗುತ್ತದೆ.

ಫ್ಲ್ಯಾಶ್‌ಬ್ಯಾಕ್ ತಂತ್ರದಲ್ಲಿ ಸಾಗುವ ಈ ಚಿತ್ರದಲ್ಲಿ ರಿಪೀಟ್ ಆಗುವ ದೃಶ್ಯಗಳು ಸೇರಿದಂತೆ ಒಂದಿಷ್ಟು ಕೊರತೆಗಳು ಇದ್ದರೂ, ಕನಸು ನನಸು ಮಾಡಿಕೊಳ್ಳಲು ಅಡ್ಡದಾರಿ ಹಿಡಿದರೆ ಏನಾಗುತ್ತದೆ ಎನ್ನುವ ಸಂದೇಶವನ್ನು ಅಚ್ಚುಕಟ್ಟಾಗಿ ಹೇಳುವಲ್ಲಿ ಚಿತ್ರ ಯಶಸ್ವಿ ಆಗುತ್ತದೆ.

ಚಿತ್ರ: ತಪಸ್ಸಿ
ತಾರಾಗಣ: ರವಿಚಂದ್ರನ್, ಅಮಯ್ರಾ ಗೋಸ್ವಾಮಿ, ವಿನಯ ಪ್ರಸಾದ್, ಪ್ರಜ್ವಲ್, ಅನುಷಾ ಕಿಣಿ, ಸಚಿನ್, ಗುಬ್ಬಿ ನಟರಾಜ್
ನಿರ್ದೇಶನ: ಸ್ಪೆನ್ಸರ್ ಮ್ಯಾಥ್ಯೂ
ರೇಟಿಂಗ್: 3

ಮಾಡೆಲ್ ತಪಸ್ಸಿ ಪಾತ್ರಕ್ಕೆ ನಟಿ ಅಮಯ್ರಾ ಗೋಸ್ವಾಮಿ ಸೂಕ್ತ ಎನಿಸುತ್ತಾರೆ. ಬುದ್ಧಿವಾದ ಹೇಳಿ ಸರಿದಾರಿಗೆ ತರುವ ಪ್ರೊಫೆಸರ್ ಪಾತ್ರದಲ್ಲಿ ರವಿಚಂದ್ರನ್ ಅವರ ಪಾತ್ರಕ್ಕೆ ಹೆಚ್ಚು ಶ್ರಮ ಹಾಕುವ ಅಗತ್ಯ ಕೊಟ್ಟಿಲ್ಲ. ಚಿತ್ರದಲ್ಲಿ ಬರುವ ಪ್ರತಿ ಪಾತ್ರಧಾರಿಯೂ ನಿರ್ದೇಶಕನ ಸೂಚನೆಯಂತೆ ತೆರೆ ಮೇಲೆ ಬಂದು ಹೋಗುತ್ತಾರೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?
ಪ್ರೇಮವೋ, ದ್ವೇಷವೋ, ಥ್ರಿಲ್ಲರೋ?: ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ