ಪ್ರೀತಿಯ ಕಥೆ ಅಂದುಕೊಂಡರೆ ಕೊನೆಯಲ್ಲಿ ಕಾದಿದೆ ದುರಂತ: ಶಶಿಕುಮಾರ್ ಪುತ್ರನ ಸಿನಿಮಾ ಹೇಗಿದೆ?

Published : Nov 15, 2026, 03:14 PM IST
Rashi Movie Review

ಸಾರಾಂಶ

‘ರಾಶಿ’ ಸಿನಿಮಾ ವಿಮರ್ಶೆ: ಆದಿತ್ಯ ಶಶಿಕುಮಾರ್, ಸಮೀಕ್ಷಾ ರಾಧ್ಯಾ ಅಭಿನಯದ ವಿಜಯ್ ಪಾಳೇಗಾರ್ ನಿರ್ದೇಶನದ ಈ ಪ್ರೇಮಕಥೆಯಲ್ಲಿ ಸ್ನೇಹ, ಪ್ರೀತಿ, ರಾಜಕೀಯ ಮತ್ತು ದುರಂತದ ತಿರುವುಗಳಿವೆ. ಚಿತ್ರಕ್ಕೆ ಎಷ್ಟು ರೇಟಿಂಗ್?

ಆರ್‌.ಕೆ

ದುರಂತ ಪ್ರೇಮ ಕತೆಗಳು ಚಿತ್ರರಂಗಕ್ಕೆ ಹೊಸದಲ್ಲ. ‘ರಾಶಿ’ ಚಿತ್ರ ಅದೇ ಸಾಲಿಗೆ ಸೇರಿದರೂ, ಇಲ್ಲಿ ಹೇಗೆ ಮತ್ತು ಯಾಕೆ ದುರಂತ ಸಂಭವಿಸುತ್ತದೆ ಎಂಬುದನ್ನು ಹೊಸದಾಗಿ ತೋರಿಸಿದ್ದಾರೆ. ಆ ಕಾರಣಕ್ಕೆ ಈ ಚಿತ್ರದ ನಿರ್ದೇಶಕ ವಿಜಯ್ ಪಾಳೇಗಾರ್‌ ಶ್ರಮವನ್ನು ಮೆಚ್ಚಿಕೊಳ್ಳಬೇಕು. ಹಳ್ಳಿಯ ಹಿನ್ನೆಲೆಯಿಂದ ಬಂದಿರುವ ಮಧ್ಯಮ ವರ್ಗದ ಕುಟುಂಬದ ನಾಯಕ, ಶ್ರೀಮಂತ ರಾಜಕೀಯ ಕುಟುಂಬದ ನಾಯಕಿ. ಈ ಇಬ್ಬರು ಕಾಲೇಜಿನಲ್ಲಿ ಸ್ನೇಹಿತರಾಗುತ್ತಾರೆ.

ಇವರ ಸ್ನೇಹ ಮುಂದೆ ಪ್ರೀತಿ-ಪ್ರೇಮದ ದಾರಿಯಲ್ಲಿ ಹೆಜ್ಜೆ ಇಡುತ್ತದೆ. ಇಬ್ಬರು ಲವ್‌ ಡ್ಯೂಯೇಟ್‌ ಹಾಡಿಕೊಳ್ಳುವಾಗ ನಾಯಕನ ತಾಯಿ, ತನ್ನ ಮಗ ಹಾದಿ ತಪ್ಪುತ್ತಿದ್ದಾನೆ ಎನಿಸಿ ಕಣ್ಣೀರು ಹಾಕುತ್ತಾಳೆ. ‘ನಾನು ಬದಲಾಗುತ್ತೇನೆ’ ಎನ್ನುವ ಮಗನ ಮಾತು ನಂಬುತ್ತಾಳೆ ತಾಯಿ. ಆದರೆ, ನಾಯಕಿಯೇ ನಾಯಕನನ್ನು ಹುಡುಕಿಕೊಂಡು ಹಳ್ಳಿಗೆ ಬರುತ್ತಾಳೆ. ಈಗ ಇಬ್ಬರ ಪ್ರೀತಿಯವನ್ನು ಹೀರೋ ಕುಟುಂಬ ಒಪ್ಪುತ್ತದೆ.

ಎಲ್ಲವೂ ಚೆನ್ನಾಗಿದೆಯಲ್ಲ ಎಂದುಕೊಳ್ಳುವಾಗಲೇ ನಾಯಕಿ ಕುಟುಂಬದ ಹಿನ್ನೆಲೆ ತೆರೆದುಕೊಳ್ಳುತ್ತದೆ. ಮುಂದೇನು ಎಂಬುದು ಅವರವರ ಊಹೆಗೆ ಬಿಟ್ಟಿದ್ದು. ನಾಯಕನ ತಂದೆಯ ಸಾವು, ಹೀರೋ ಹಿಂದೆ ಬೀಳುವ ರೌಡಿಗಳು, ನಾಯಕಿ ಹಿಂದೆ ಬರುವ ಶಾಸಕನ ಮಗ... ಹೀಗೆ ವಿವಿಧ ದಾರಿಗಳು ಕತೆಯಲ್ಲಿ ತೆರೆದುಕೊಂಡು ಕೊನೆಗೊಂದು ‘ಮುಕ್ತಾಯ’ಕ್ಕೆ ಬರುವ ಹೊತ್ತಿಗೆ ಸುಂದರ ಪ್ರೇಮ ಕತೆಯಲ್ಲಿ ದುರಂತ ರಾಗ ತಣ್ಣಗೆ ಕೊರೆಯುತ್ತದೆ.

ಚಿತ್ರ: ರಾಶಿ

ತಾರಾಗಣ: ಆದಿತ್ಯ ಶಶಿಕುಮಾರ್‌, ಸಮೀಕ್ಷಾ ರಾಧ್ಯಾ, ಮಂಜು ಪಾವಗಡ, ತಬಲ ನಾಣಿ, ವೀಣಾ ಸುಂದರ್‌, ರಮೇಶ್‌ ಇಂದಿರಾ

ನಿರ್ದೇಶನ: ವಿಜಯ್‌ ಪಾಳೇಗಾರ್‌

ರೇಟಿಂಗ್‌: 3

ಆ ದುರಂತ ಏನೆಂಬುದು ಚಿತ್ರದ ಕೊನೆಯಲ್ಲೇ ರಿವಿಲ್‌ ಆಗುವುದರಿಂದ ಸಿನಿಮಾ ನೋಡಿಯೇ ತಿಳಿಯಬೇಕು. ಆದಿತ್ಯ ಶಶಿಕುಮಾರ್‌, ಸಮೀಕ್ಷಾ ರಾಧ್ಯಾ, ಮಂಜು ಪಾವಗಡ, ತಬಲ ನಾಣಿ, ಕರಿಸುಬ್ಬು, ವೀಣಾ ಸುಂದರ್‌, ಹುಲಿ ಕಾರ್ತಿಕ್, ವಿನೋದ್‌ ಗೊಬ್ಬರಗಾಲ, ಉಗ್ರಂ ರವಿ, ಭಜರಂಗಿ ಪ್ರಸನ, ರಮೇಶ್‌ ಇಂದಿರಾ, ಸಂಗೀತಾ ಶೆಟ್ಟಿ... ಈ ಎಲ್ಲ ಪಾತ್ರಧಾರಿಗಳನ್ನು ದುಡಿಸಿಕೊಳ್ಳಲು ನಿರ್ದೇಶಕರ ಪ್ರಯತ್ನಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಲಂಬೋದರ 2.0 ಸಿನಿಮಾ ವಿಮರ್ಶೆ: ನಗಿಸುತ್ತಲೇ ಡಿಜಿಟಲ್ ಜಗತ್ತಿನ ಕರಾಳ ಮುಖ ತೆರೆದಿಟ್ಟ ಸಿಂಪಲ್ ಸುನಿ!
IFFI: ಭಾರತೀಯ ಸಿನಿಮಾಗಳದ್ದೇ ಕಾರಭಾರು; BRICSನಲ್ಲಿ ರಾಮಾಯಣ, ಪನೋರಮಾದಲ್ಲಿ ಧುರಂಧರ್‍‌ಗೆ ಮನ್ನಣೆ