ನಾನು ಮತ್ತು ಗುಂಡ 2 ಸಿನಿಮಾ ವಿಮರ್ಶೆ: ನಾಯಿ ನಿಯತ್ತು ಮತ್ತು ಮನುಷ್ಯ ಪ್ರೀತಿ

Published : Sep 06, 2025, 01:59 PM IST
ನಾನು ಮತ್ತು ಗುಂಡ 2 ಸಿನಿಮಾ ವಿಮರ್ಶೆ: ನಾಯಿ ನಿಯತ್ತು ಮತ್ತು ಮನುಷ್ಯ ಪ್ರೀತಿ

ಸಾರಾಂಶ

ಗುಂಡ ಹೆಸರಿನ ನಾಯಿ, ಅದನ್ನು ಹುಡುಕಿಕೊಂಡು ಹೋಗುವ ಶಂಕರ, ಗುಂಡನನ್ನೇ ಜಗತ್ತು ಮಾಡಿಕೊಂಡಿರುವ ನಾಯಕಿ, ಮಗನನ್ನು ಹುಡುಕುವ ಹೆತ್ತವರ ಸಂಕಷ್ಟ, ಸಾವು ಮತ್ತು ಪುನರ್ಜನ್ಮ, ನಾಯಿಯ ನಿಯತ್ತು, ಮನುಷ್ಯನ ಭಾವುಕತೆ.

ಆರ್‌. ಕೇಶವಮೂರ್ತಿ

ಮೊದಲ ಭಾಗದ ಸಕ್ಸಸ್‌ನಲ್ಲಿ ಹುಟ್ಟಿಕೊಂಡ ಎರಡನೇ ಕೂಸಿನ ಕತೆ ಇದು. ಬೆಲೆ ಕಟ್ಟಲಾಗದ ನಾಯಿ ಮತ್ತು ಮನುಷ್ಯರ ನಡುವಿನ ಪ್ರೀತಿ, ಬಾಂಧವ್ಯದ ನೆರಳಿನಲ್ಲಿ ಸಾಗುವ ‘ನಾನು ಮತ್ತು ಗುಂಡ 2’ ಚಿತ್ರದ ನಿಜವಾದ ಹೀರೋ ನಿರ್ದೇಶಕರ ತಂಡ ಮತ್ತು ಛಾಯಾಗ್ರಾಹಕ.

ಗುಂಡ ಹೆಸರಿನ ನಾಯಿ, ಅದನ್ನು ಹುಡುಕಿಕೊಂಡು ಹೋಗುವ ಶಂಕರ, ಗುಂಡನನ್ನೇ ಜಗತ್ತು ಮಾಡಿಕೊಂಡಿರುವ ನಾಯಕಿ, ಮಗನನ್ನು ಹುಡುಕುವ ಹೆತ್ತವರ ಸಂಕಷ್ಟ, ಸಾವು ಮತ್ತು ಪುನರ್ಜನ್ಮ, ನಾಯಿಯ ನಿಯತ್ತು, ಮನುಷ್ಯನ ಭಾವುಕತೆ.... ಹೀಗೆ ಒಂದಿಷ್ಟು ಅಂಶಗಳನ್ನು ಕತೆಯಾಗಿ ಹೇಳಿದ್ದಾರೆ ನಿರ್ದೇಶಕ ರಘು ಹಾಸನ್. ನಿರ್ದೇಶಕರು ಕಲಾವಿದರಿಗಿಂತ ಹೆಚ್ಚಾಗಿ ನಾಯಿಯನ್ನೇ ನಂಬಿ ಕತೆ ರೂಪಿಸಿದ್ದಾರೆ.

ಚಿತ್ರ : ನಾನು ಮತ್ತು ಗುಂಡ 2
ತಾರಾಗಣ: ರಾಕೇಶ್‌ ಅಡಿಗ, ರಚನಾ ಇಂದರ್‌, ಅವಿನಾಶ್‌, ಗೋವಿಂದೇಗೌಡ, ನಯನ, ಸಾಧು ಕೋಕಿಲ
ನಿರ್ದೇಶನ: ರಘು ಹಾಸನ್‌
ರೇಟಿಂಗ್‌: 3

ನಿರ್ದೇಶಕರ ಈ ಪ್ರಾಣಿ ಪ್ರೀತಿಗೆ ರಾಕೇಶ್‌ ಅಡಿಗ ಶಕ್ತಿಮೀರಿ ಜೀವ ತುಂಬಿದ್ದಾರೆ. ಸಾಧು ಕೋಕಿಲಾ ನಗಿಸೋ ಪ್ರಯತ್ನ ಮಾಡಿದ್ದಾರೆ. ಅವಿನಾಶ್‌ ಶ್ರೀಮಂತಿಕೆ ಹೆಚ್ಚಿಸಿದ್ದಾರೆ. ನಾಯಕಿ ರಚನಾ ಇಂದರ್‌ ಅದೇ ತುಂಟಾದ ಹುಡುಗಿ. ಸರಿ, ಪಾರ್ಟ್‌ 2 ಕತೆ ಹೇಗಿದೆ? ಎನ್ನುವ ಕುತೂಹಲ ಮೂಡುವುದು ಸಹಜ. ಅದಕ್ಕೆ ಸಿನಿಮಾ ನೋಡಬೇಕು ಎನ್ನುವುದು ಕಡ್ಡಾಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?
ಪ್ರೇಮವೋ, ದ್ವೇಷವೋ, ಥ್ರಿಲ್ಲರೋ?: ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ