ರಾಜೇಶ್ ಧ್ರುವ, ರವಿ ಸಾಲಿಯಾನ್, ರಾಧಿಕಾ ಅಚ್ಯುತ್‌ರಾವ್, ಸಂಪತ್ ಜೆ ರಾಮ…, ನಕುಲ್ ಶರ್ಮ, ರಕ್ಷಿತ್ ಮತ್ತು ರವಿ ಮೂರೂರು ಅಭಿನಯಿಸಿರುವ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ಬಿಡುಗಡೆಯಾಗಿದೆ.
ಚಿತ್ರದ ಹೆಸರಿಗೆ ತಕ್ಕಂತೆ ಫೋಟೋಗಳನ್ನು ತೆಗೆಯುವವನ ಕತೆ ಹೇಳುವ ಸಿನಿಮಾ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’. ಫೋಟೋ, ಅದರ ಹಿಂದಿನ ಸಂಕಷ್ಟಗಳು, ಜತೆಗೊಂದು ಪ್ರೀತಿ ಕತೆ, ಇದರ ನಡುವೆ ಹೆಣ್ಣು ಹುಡುಕುವ ಸಮಸ್ಯೆಗಳು, ಭೂಮಾಲೀಕನ ಗೌರವ ಮತ್ತು ಪ್ರತಿಷ್ಠೆ... ಇವಿಷ್ಟುಅಂಶಗಳನ್ನು ಇಟ್ಟುಕೊಂಡು ರಾಜೇಶ್ ಧ್ರುವ ಅವರು ಈ ಫೋಟೋ ಸ್ಟುಡಿಯೋ ಕತೆ ಕಟ್ಟಿದ್ದು, ತಾನೇ ನಾಯಕನಾಗಿಯೂ ನಟಿಸಿದ್ದಾರೆ. ಹೆಚ್ಚು ಪಾತ್ರಗಳು ಇಲ್ಲ, ಅದ್ದೂರಿ ಮೇಕಿಂಗ್ ಇಲ್ಲ, ವಾವ್‌್ಹ ಎನಿಸುವಂತಹ ಲೋಕೇಶನ್‌ಗಳೇನು ಇಲ್ಲ. ತೀರಾ ಸೀಮಿತ ಪ್ರದೇಶ ಹಾಗೂ ಪಾತ್ರಗಳ ನಡುವೆ ಕ್ಯಾಮೆರಾ ಕತೆ ತೆರೆದುಕೊಳ್ಳುತ್ತದೆ.
ತಾರಾಗಣ: ರಾಜೇಶ್ ಧ್ರುವ, ರವಿ ಸಾಲಿಯಾನ್, ರಾಧಿಕಾ ಅಚ್ಯುತ್‌ರಾವ್, ಸಂಪತ್ ಜೆ ರಾಮ…, ನಕುಲ್ ಶರ್ಮ, ರಕ್ಷಿತ್, ರವಿ ಮೂರೂರು
ನಿರ್ದೇಶನ: ರಾಜೇಶ್ ಧ್ರುವ
ರೇಟಿಂಗ್: 2
ಒಂದು ಚಿಕ್ಕ ಊರಿನಲ್ಲಿ ತನ್ನ ತಂದೆಯ ಫೋಟೋ ಸ್ಟುಡಿಯೋವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ನಾಯಕ. ಆತನಿಗೆ ನಗರದಲ್ಲಿ ಹೋಗಿ ದೊಡ್ಡ ಸ್ಟುಡಿಯೋ ಮಾಡುವ ಆಸೆ. ಇದಕ್ಕೆ ಬ್ಯಾಂಕಿನಲ್ಲಿ ಸಾಲ ಮಾಡಲು ಹೋಗುತ್ತಾನೆ. ಆದರೆ, ಫೋಟೋ ಸ್ಟುಡಿಯೋ ಜಾಗ ನಾಯಕನ ತಂದೆ ಆ ಊರಿನ ಭೂಮಾಲೀಕನ ಬಳಿ ಅಡ ಇಟ್ಟಿದ್ದಾನೆ. ತನ್ನ ಸ್ನೇಹಿತ ಮದುವೆ ಆಗುತ್ತಿರುವುದು ಇದೇ ಭೂಮಾಲೀಕನ ತಂಗಿಯನ್ನ. ಈಗ ನಾಯಕ, ತನ್ನ ಸ್ನೇಹಿತನ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡುತ್ತಾನೆ. ಈ ಹಂತದಲ್ಲಿ ಒಂದು ದುರಂತ ನಡೆಯುತ್ತದೆ. ಅದೇನು ಎಂಬುದು ವಿರಾಮದ ಟ್ವಿಸ್ಟ್. ವಿರಾಮದ ನಂತರ ಸತ್ತವಳು ಬದುಕಿದ್ದಾಳೆ ಎನ್ನುವ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಅದನ್ನು ನೀವು ತೆರೆ ಮೇಲೆ ನೋಡಬೇಕು.
SPOOKY COLLEGE REVIEW ಸ್ಮಶಾನದಂತಹ ಕಾಲೇಜಿನಲ್ಲಿ ಸಾವಿನ ಪ್ರೇಮ ಕಲೆ
ಚಿತ್ರವು ಮನರಂಜನೆಯ ಹಾದಿಯಲ್ಲಿ ಸಾಗಬೇಕಾ, ಭಾವುಕತೆ ನೆರಳಿನಲ್ಲಿಡಬೇಕಾ ಎನ್ನುವ ಗೊಂದಲದಲ್ಲೇ ಇಡೀ ಚಿತ್ರವನ್ನು ಹೇಳಿ ಮುಗಿಸುವ ಸಾಹಸ ಮಾಡಲಾಗಿದೆ. ಕಿರುಚಿತ್ರ ಆಗಬಹುದಾದ ಸರಕನ್ನು ಎರಡು ಗಂಟೆ ಸಿನಿಮಾ ಮಾಡಲಾಗಿದೆ. ಪ್ರೇಕ್ಷಕನಿಗೆ ಸಿನಿಮಾ ಅಂತ್ಯವೇನು ಎಂಬುದು ವಿರಾಮದಲ್ಲೇ ಗೊತ್ತಾಗುತ್ತದೆ. ಅಲ್ಲದೆ ವಿರಾಮದಲ್ಲಿ ಮುಚ್ಚಿಟ್ಟತಿರುವಿನ ಗುಟ್ಟು ಕೂಡ ರಟ್ಟಾಗುತ್ತದೆ. ಆದರೂ ನಿರ್ದೇಶಕ ಕತೆಯನ್ನು ಬಲವಂತವಾಗಿ ಎಳೆಯುತ್ತಾರೆ. ಅನಗತ್ಯವಾದ ದೃಶ್ಯಗಳು ಬಂದು ಹೋಗುತ್ತವೆ. ಪಾತ್ರಧಾರಿಗಳ ನಟನೆ ವಿಚಾರಕ್ಕೆ ಬಂದರೆ ಭೂಮಾಲೀಕನ ಪಾತ್ರಧಾರಿ ನೆನಪಿನಲ್ಲಿ ಉಳಿಯುತ್ತಾರೆ. ತಾಂತ್ರಿಕವಾಗಿ ಹಿನ್ನೆಲೆ ಸಂಗೀತ ಹಾಗೂ ಛಾಯಾಗ್ರಾಹಣ ತೀರಾ ಸವಕಲು ಅನಿಸುತ್ತದೆ. ಎಲ್ಲರ ನೆನಪುಗಳನ್ನು ಶಾಶ್ವತವಾಗಿ ದಾಖಲಿಸುವ ಛಾಯಾಗ್ರಾಹಕನ ಕುರಿತು ಸಿನಿಮಾ ಮಾಡಬೇಕು ಎನ್ನುವ ಒಳ್ಳೆಯ ಆಲೋಚನೆ ತೆರೆ ಮೇಲೆ ಪರಿಣಾಕಾರಿಯಾಗಿ ಮೂಡಿ ಬಂದಿಲ್ಲ.