
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ರಾಜ್ಯದಲ್ಲಿ ಒಟ್ಟು 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಚಿತ್ರದ ಬಗ್ಗೆ ನೆಟ್ಟಿಗರು ಟ್ಟಿಟರ್‌ನಲ್ಲಿ ವಿಮರ್ಶೆ ಮಾಡಿದ್ದಾರೆ. ಇಂದು ಬೆಳಗ್ಗೆ 6 ಗಂಟೆ ಶೋ ವೀಕ್ಷಿಸಿದ ಪವರ್ ಫ್ಯಾನ್ಸ್ ಚಿತ್ರದ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?
ಯುವರತ್ನದಲ್ಲಿದೆ ಯೂತ್‌ಗೆ ಇಷ್ಟವಾಗೋ ಬಹಳಷ್ಟು ವಿಚಾರ..! ಅಪ್ಪು ಹೇಳಿದ್ದಿಷ್ಟು
ಎರಡು ವರ್ಷಗಳ ಬಳಿಕ ಪುನೀತ್ ರಾಜ್‌ಕುಮಾರ್ ಸಿನಿಮಾ ಬಿಡುಗಡೆ ಆಗಿರುವುದರಿಂದ 'ಕಿಂಗ್ ಈಸ್ ಬ್ಯಾಕ್' ಎಂಬುದಾಗಿ ಬಹುತೇಕರು ಹೇಳಿದ್ದಾರೆ. 'ಫಸ್ಟ್ ಹಾಫ್ ವೆರಿ ಗುಡ್, ಬ್ರ್ಯಾಕ್‌ಗ್ರೌಂಡ್ ಸ್ಕೋರ್ ಬೆಂಕಿ', 'ಮೊದಲ ಭಾಗ ಭರಪೂರ ಮನರಂಜನೆ ಇದೆ. ಸಸ್ಪೆನ್ಸ್ ಎಲಿಮೆಂಟ್ ಚೆನ್ನಾಗಿ ಕ್ಯಾರಿ ಮಾಡಿದ್ದಾರೆ. ಧನಂಜಯ್ ಹಾಗೂ ಪ್ರಕಾಶ್ ರಾಜ್ ಆ್ಯಕ್ಟಿಂಗ್ ಸೂಪರ್ ಆಗಿದೆ', 'ವೇಗವಾಗಿ ಚಿತ್ರಕತೆ ಸಾಗುತ್ತದೆ. ಚಿತ್ರದಲ್ಲಿರುವ ಬಿಜಿಎಂ ರೂಫ್ ಕಿತ್ಕೊಂಡು ಹೋಗುತ್ತೆ. ಸಿನಿಮಾನ ಎಲ್ಲರೂ ಎಂಜಾಯ್ ಮಾಡುತ್ತಾರೆ,' ಎಂದು ನೆಟ್ಟಿಗರು ಟ್ಟೀಟ್ ಮಾಡಿದ್ದಾರೆ.
ಚಿತ್ರಕತೆ ಮತ್ತು ನಿರ್ದೇಶನ ಮಾಡಿರುವ ಸಂತೋಷ್ ಆನಂದ್‌ರಾಮ್ ಹಾಗೂ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಚಿತ್ರಕ್ಕೆ ಬಂಡವಾಳ ಹಾಕಿರುವ ವಿಜಯ್ ಕಿರಗಂದೂರ್‌ರವರಿಗೆ ಅಭಿಮಾನಿಗಳು ಹ್ಯಾಟ್ಸ್ ಆಫ್ ಎಂದಿದ್ದಾರೆ. ಮಾರ್ಚ್.31ರಂದು ವಿದೇಶಗಳಲ್ಲಿಯೂ ಸಿನಿಮಾ ಬಿಡುಗಡೆಯಾಗಿದ್ದು, ಅಲ್ಲಿಂದಲೂ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ರಿಲೀಸ್‌ಗೂ ಮುನ್ನವೇ ಹಾಡುಗಳು ವೈರಲ್ ಆಗಿದ್ದು, ದೊಡ್ಡ ಪರದೆ ಮೇಲೆ ಪುನೀತ್ ಡ್ಯಾನ್ಸ್‌ಗೆ ವಿಸಲ್ ಹಾಗೂ ಚಪ್ಪಾಳೆ ಸುರಿದು ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.