ಒಂದು ಸಾವು, ಅದರ ಸುತ್ತ ನಡೆಯುವ ತನಿಖೆ, ಈ ವಿಚಾರಣೆಯಿಂದ ಹೊರ ಬರುವ ಸಂಗತಿಗಳು ಮತ್ತು ಪಾತ್ರಗಳನ್ನು ಒಳಗೊಂಡ ಕತೆಗಳು ತೀರಾ ಹೊಸದಲ್ಲ. ಇಂಥ ಜಾನರ್ ಕತೆಗಳು ಆಯಾ ಕಾಲಕ್ಕೆ ಸಿನಿಮಾಗಳಾಗಿ ತೆರೆ ಮೇಲೆ ರಾರಾಜಿಸಿವೆ. ಇದೇ ಸಾಲಿಗೆ ಸೇರುವ ಸಿನಿಮಾ ‘ಮುಂದುವರೆದ ಅಧ್ಯಾಯ’.
ಚಿತ್ರದ ಹೆಸರಿಗೆ ತಕ್ಕಂತೆ ಇಲ್ಲಿ ಹತ್ತಾರು ಅಧ್ಯಾಯಗಳಿವೆ. ಪ್ರತಿ ಅಧ್ಯಾಯದಲ್ಲೂ ಸಸ್ಪೆನ್ಸ್, ಥ್ರಿಲ್ಲರ್ ಸೇರಿಕೊಂಡಿದೆ. ಇನ್ನೇನು ಸಿನಿಮಾ ಮುಕ್ತಾಯದ ಹಂತಕ್ಕೆ ಬಂದಿದೆ ಎನ್ನುವಾಗ ನಿರ್ದೇಶಕರು ಕತೆ ಹೇಳುವುದಕ್ಕೆ ಹೊರಡುತ್ತಾರೆ. ಇದೇ ಕಾರಣಕ್ಕೆ ಅಧ್ಯಾಯ ಮುಂದುವರೆಯದೆ ನಿಂತಲ್ಲೇ ನಿಂತಿದೆ ಎನ್ನುವ ಭಾವನೆ ಮೂಡಿಸುತ್ತದೆ.
'ಮುಂದುವರಿದ ಅಧ್ಯಾಯ' ನನಗೆ ಇದು ಸಪ್ರೈಸ್ ಸಿನಿಮಾ: ಅದಿತ್ಯ
ಒಂದು ಕಡೆ ಶಿವರಾತ್ರಿಯ ಹಬ್ಬದ ಸಡಗರ. ಮತ್ತೊಂದು ಕಡೆ ಕತ್ತಲ ಜಗತ್ತಿನ ಕಳ್ಳಾಟಗಳ ಅನಾವರಣ. ವೈದ್ಯೆಯೊಬ್ಬಳು ಮರುದಿನ ನಡೆಯುವ ಮೆಡಿಕಲ್ ಕ್ಯಾಂಪ್‌ಗೆ ತಯಾರಿ ಮಾಡಿಕೊಳ್ಳುತ್ತಿದ್ದಾಳೆ, ಪತ್ರಕರ್ತೆಯೊಬ್ಬಳು ಡ್ರಗ್ ಮಾಫಿಯಾ ಮಾಹಿತಿ ಸಂಗ್ರಹಿಸುತ್ತ ಅದೇ ವೈದ್ಯೆಗೆ ಕನೆಕ್ಟ್ ಆಗುತ್ತಾರೆ. ಇತ್ತ ಪತ್ರಕರ್ತೆಯ ಗೆಳೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ವೈದ್ಯೆಯನ್ನು ಪ್ರೀತಿಸುತ್ತಿದ್ದ ಹುಡುಗ ತನ್ನವಳಿಗಾಗಿ ಕಾಯುತ್ತಿದ್ದಾನೆ. ಪತ್ರಕರ್ತೆ ಹಾಗೂ ವೈದ್ಯೆ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾರೆ. ಈ ಇಬ್ಬರು ಎಲ್ಲಿ ಹೋದರು, ಮರುದಿನ ನಡೆಯಬೇಕಿದ್ದ ಮೆಡಿಕಲ್ ಕ್ಯಾಂಪ್ ರದ್ದಾಗಿದ್ದು ಯಾಕೆ, ಗುತ್ತಿಗೆದಾರನನ್ನು ಕೊಲೆ ಮಾಡಿದ್ದು ಯಾರು ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡು ಇದಕ್ಕೆ ಉತ್ತರ ಕಂಡುಕೊಳ್ಳುವುದಕ್ಕೆ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಆಗಮಿಸುತ್ತಾರೆ. ಮುಂದೇನು ಎಂಬುದು ತೆರೆ ಮೇಲೆ ನೋಡಬೇಕಾದ ವಿಚಾರ.
'ಮುಂದುವರಿದ ಅಧ್ಯಾಯ' ನನಗೆ ಇದು ಸಪ್ರೈಸ್ ಸಿನಿಮಾ: ಅದಿತ್ಯ
ಇಡೀ ಚಿತ್ರಕಥೆ ತನಿಖೆಯ ಕತ್ತಿಯಂಚಿನಲ್ಲೇ ಸಾಗುತ್ತದೆ. ಹೀಗಾಗಿ ಥ್ರಿಲ್ಲಿಂಗ್ ಅನುಭವಕ್ಕೆ ಕೊರತೆ ಆಗಲ್ಲ. ಆದರೆ, ಪ್ರತಿ ದೃಶ್ಯಕ್ಕೂ ನಿರ್ದೇಶಕರು ಸ್ಪೀಡ್ ಬ್ರೇಕ್ ಅಳವಡಿಸಿದ್ದಾರೆ ಅನಿಸುತ್ತದೆ. ಒಳ್ಳೆಯ ಶಾಸಕನ ಸುತ್ತ ನಡೆದಿರುವ ಸಂಚು, ಇದಕ್ಕೆ ಬಲಿಯಾಗುವ ವೈದ್ಯೆ, ಡ್ರಗ್ಸ್ ಸರಬರಾಜು ಮಾಡುವವರ ನೆರಳು ಬಯಲಾಗುತ್ತದೆ. ತೀರಾ ಸರಳವಾದ ಕತೆಯನ್ನು ಹೇಳಲು ನಿರ್ದೇಶಕರು ಹರಸಾಹಸ ಪಟ್ಟಿರುವುದು ಎದ್ದು ಕಾಣುತ್ತದೆ. ನಿರ್ದೇಶಕರ ಈ ಶ್ರಮವನ್ನು ಕೊಂಚ ಮಟ್ಟಿಗಾದರೂ ರಿಲೀಪ್ ಮಾಡುವುದು ಪೊಲೀಸ್ ಪಾತ್ರಧಾರಿ ಆದಿತ್ಯ, ಛಾಯಾಗ್ರಾಹಕ ದಿಲೀಪ್ ಚಕ್ರವರ್ತಿ ಅವರ ಕ್ಯಾಮೆರಾ ಕಣ್ಣು, ಅನೂಪ್ ಸಿಳೀನ್ ಅವರ ಹಿನ್ನೆಲೆ ಸಂಗೀತ. ಆಶಿಕಾ ಸೋಮಶೇಖರ್, ಆದಿತ್ಯ, ಸಂದೀಪ್ ಕುಮಾರ್ ಅವರ ಪಾತ್ರಗಳು ನೆನಪಿನಲ್ಲಿ