ಮಿಲಿ ನರ್ಸಿಂಗ್ ತರಬೇತಿ ಪಡೆದು ಕೆನಡಾಗೆ ಹೋಗಲು ತಯಾರಿ ನಡೆಸುತ್ತಿರುವಾಗ, ಒಂದು ರಾತ್ರಿ ರೆಸ್ಟೋರೆಂಟ್‌ನ ಫ್ರೀಜರ್ ರೂಮಿನಲ್ಲಿ ಸಿಕ್ಕಿಬೀಳುತ್ತಾಳೆ. ಬದುಕುಳಿಯಲು ಹೋರಾಡುವ ಅವಳ ಸಾಹಸ ಮತ್ತು ಅವಳನ್ನು ಹುಡುಕುವ ಪೊಲೀಸರು ಮತ್ತು ಪ್ರೇಮಿಯ ಪ್ರಯತ್ನವೇ ಈ ಚಿತ್ರದ ಕಥಾವಸ್ತು.
-ವೀಣಾ ರಾವ್, ಕನ್ನಡಪ್ರಭ
ನಿರ್ದೇಶನ: ಮುತ್ತುಕುಟ್ಟಿ ಕ್ಸೇವಿಯರ್
ನಿರ್ಮಾಣ: ಬೋನಿ ಕಪೂರ್
ತಾರಾಗಣ: ಜಾನ್ವಿ ಕಪೂರ್. ಸನ್ನಿ ಕೌಶಲ್, ಮನೋಜ್ ಪಹ್ವಾ
ಬಿಡುಗಡೆಯಾದ ವರ್ಷ: 2022
ಓಟಿಟಿ: ನೆಟ್‌ಫ್ಲಿಕ್ಸ್
ಕೆಲವರಿಗೆ ಕೊಂಚ ಕಾಲ ಎಸಿಯಲ್ಲಿದ್ದರೆ ಮುಖ ಊದಿಕೊಳ್ಳುವುದು, ಕಣ್ಣು ಕೆಂಪಗಾಗುವುದು, ಉಸಿರಾಟಕ್ಕೆ ತೊಂದರೆಯಾಗುವುದು, ವ್ಹೀಜಿಂಗ್ ಬರುತ್ತದೆ. ಆದರೆ ಒಂದು ಇಡೀ ರಾತ್ರಿ ಎಸಿ ರೂಮಿಲ್ಲಿ ಅದರಲ್ಲೂ ವಾಣಿಜ್ಯ ದಾಸ್ತಾನು ಇಡುವ ಫ್ರೀಜರ್ ರೂಮಲ್ಲಿದ್ದರೆ ಏನಾಗಬಹುದು? ಇಡೀ ಚಿತ್ರ ಕುರ್ಚಿ ತುದಿಯಲ್ಲಿ ಕೂತು ನೋಡುವಂತೆ ಮಾಡುತ್ತದೆ. ಜಾನ್ವಿ ಕಪೂರ್ ಅವಳ ಬೆಸ್ಟ್ ಅಭಿನಯದಿಂದ ಮನಮುಟ್ಟುತ್ತಾಳೆ.
undefined
ಮಿಲಿ ನರ್ಸಿಂಗ್ ಟ್ರೀನಿಂಗ್ ಮುಗಿಸಿ ಕೆನಡಾಗೆ ನೌಕರಿಗಾಗಿ ಹೋಗಲು ಒಂದು ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುತ್ತಾಳೆ. ಹಾಗೆಯೇ ಒಂದು ಮಾಲ್ ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿರುತ್ತಾಳೆ. ತಾಯಿ ಇಲ್ಲದ ಅವಳಿಗೆ ತಂದೆಯೇ ಆಧಾರ. ತಂದೆ ನಿರಂಜನ್‌ಗೂ ಮಗಳೆಂದರೆ ಮಮಕಾರ. ಮಿಲಿಗೆ ಸಮೀರ್ ಎಂಬ ಪ್ರೇಮಿಯೂ ಇರುತ್ತಾನೆ. ಆದರೆ ಈ ವಿಷಯ ತಂದೆಗೆ ಗೊತ್ತಿಲ್ಲ. ತಂದೆಗೆ ಮಿಲಿಯನ್ನು ಕೆನಡಾಗೆ ಕಳಿಸಲು ಕೊಂಚವೂ ಇಷ್ಟವಿಲ್ಲ. ಅವಳ ಪ್ರೇಮಿಗೂ ಇಷ್ಟವಿಲ್ಲ.
ಒಂದು ದಿನ ಮಿಲಿ ತನ್ನ ಪ್ರೇಮಿ ಸಮೀರನ ಜೊತೆ ಟೂ ವ್ಹೀಲರ್ ನಲ್ಲಿ ಹೋಗುತ್ತಿದ್ದಾಗ, ಪೊಲೀಸರು ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಇಬ್ಬರನ್ನೂ ಹಿಡಿಯುತ್ತಾರೆ. ಸಮೀರ್ ಕೊಂಚ ಕುಡಿದಿರುತ್ತಾನೆ. ಪೊಲೀಸಿನವರು ಇಬ್ಬರನ್ನೂ ಸ್ಟೇಷನ್‌ಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಮಿಲಿಯ ತಂದೆಯನ್ನು ಕರೆಸುತ್ತಾರೆ. ಅವರಿಗೆ ಮಗಳನ್ನು ಒಬ್ಬ ಪುರುಷನ ಜೊತೆ ನೋಡಿ ಶಾಕ್ ಆಗುತ್ತದೆ. ಆದರೂ ಮಗಳು, ಅವಳ ಪ್ರೇಮಿಯನ್ನು ಬಿಡಿಸಿಕೊಂಡು ಬರುತ್ತಾನೆ. ಆದರೆ ಅಂದಿನಿಂದ ಮಿಲಿಯನ್ನು ಮಾತನಾಡಿಸುವುದು ಬಿಟ್ಟು ಬಿಡುತ್ತಾನೆ. ಮಿಲಿಗೆ ದುಃಖವಾಗುತ್ತದೆ. ಅವಳೂ ನನ್ನ ತಂದೆ ಒಪ್ಪುವವರೆಗೂ ನಿನ್ನನ್ನು ಮಾತನಾಡುವುದಿಲ್ಲವೆಂದು, ಸಮೀರನಿಗೆ ಹೇಳಿ ಅವನೊಂದಿಗಿನ ಎಲ್ಲ ಸಂಪರ್ಕ ನಿಲ್ಲಿಸಿ ಬಿಡುತ್ತಾಳೆ. ಸಮೀರ್ ತನಗೆ ಇಷ್ಟವಿಲ್ಲದಿದ್ದರೂ ತನ್ನ ಹೊಸ ನೌಕರಿಗಾಗಿ ದೆಹಲಿಗೆ ಹೋಗಲು ತಯಾರಿ ನಡೆಸುತ್ತಾನೆ.
ಕೆಟ್ಟ ಸಂದೇಶ ಸಾರುವ ಬಹಳ ಒಳ್ಳೇ ಮೂವಿ ಲಕ್ಕಿ ಭಾಸ್ಕರ್
ಒಂದು ರಾತ್ರಿ ತನ್ನ ಕೆಲಸ ಮಾಡುವ ರೆಸ್ಟೋರೆಂಟಿನಿಂದ ಕೆಲಸ ಮುಗಿಸಿ ಹೊರಡುವಾಗ ಅವಳ ಸಹೋದ್ಯೋಗಿಗಳು ಕೆಲವು ಪೆಟ್ಟಿಗೆಗಳನ್ನು ಕೊಟ್ಟು ಅವುಗಳನ್ನು ಕೋಲ್ಡ್ ಸ್ಟೋರೇಜಿನ ಫ್ರೀಜರ್ ರೂಮಿನಲ್ಲಿಡಲು ಹೇಳುತ್ತಾರೆ. ಅವಳು ಒಳಗೆ ಹೋದಾಗ ರೆಸ್ಟೋರೆಂಟಿನ ಮ್ಯಾನೇಜರ್ ಎಲ್ಲರೂ ಹೊರಗೆ ಹೋದರೆಂದು ತಿಳಿದು ರೆಸ್ಟೋರೆಂಟ್ ಲಾಕ್ ಮಾಡಿ ಹೊರಟು ಬಿಡುತ್ತಾನೆ. 18 ಡಿಗ್ರಿ ಸೆಲ್ಷಿಯಸ್‌ನಲ್ಲಿ ಇಡೀ ರಾತ್ರಿ ಕಳೆಯಬೇಕು, ಮಾರನೇ ದಿನ ಅವರು ಬಂದು ಬಾಗಿಲು ತೆಗೆಯುವವರೆಗೂ ಅವಳ ಗತಿ? ಅವಳ ಬ್ಯಾಗಲ್ಲಿ ಮೊಬೈಲ್ ಇದೆ. ಬ್ಯಾಗ್ ಸಮೇತ ಅದು ಹೊರಗಿದೆ. ಸಮಯವಾಗುತ್ತಾ ಫ್ರೀಜರ್ ರೂಮಿನಲ್ಲಿ ಟೆಂಪರೇಚರ್ ಕಡಿಮೆಯಾಗುತ್ತಾ ಹೋಗುತ್ತದೆ. ಮಿಲಿಗೆ ನಡುಕ ಶುರುವಾಗುತ್ತದೆ. ಅಲ್ಲಿರುವ ಎಕ್ಸಾಸ್ಟ್ ಫ್ಯಾನನ್ನು ನಿಲ್ಲಿಸಲು ಹೋದಾಗ ಇವಳ ಕಾಲು ಸಿಕ್ಕಿಕೊಂಡು ಗಾಯವಾಗುತ್ತದೆ. ಕಾಲು ಕದಲಿಸಲಾಗದಂತೆ ಊದಿಕೊಳ್ಳುತ್ತದೆ.
ಮಿಲಿಯ ತಂದೆ ಮಾಮೂಲಿ ಸಮಯಕ್ಕೆ ಮಗಳು ಬರಲಿಲ್ಲವೆಂದು ಕೊಂಚ ಚಿಂತಿತನಾಗುತ್ತಾನೆ. ಪಕ್ಕದ ಮನೆಯವರ ಸಹಾಯದಿಂದ ಮಿಲಿಯನ್ನು ಹುಡುಕುತ್ತಾನೆ. ಮಿಲಿಯ ಸಹೋದ್ಯೋಗಿಗಳು ಕೆಲವರಿಗೆ ಫೋನ್ ಮಾಡಿ ಕೇಳುತ್ತಾನೆ. ಅವರು ಯಾರಿಗೂ ಏನೂ ಗೊತ್ತಿರುವುದಿಲ್ಲ. ಕೆಲವರು ಆಗಲೇ ಮಿಲಿ ಹೊರಟಳು ಎಂದು ಬಿಡುತ್ತಾರೆ. ಕೆಲವರು ಮಿಲಿಯನ್ನು ತಾವು ನೋಡಲಿಲ್ಲವೆನ್ನುತ್ತಾರೆ. ಈಗ ಮಿಲಿಯ ತಂದಗೆ ಗಾಬರಿಯಾಗುತ್ತದೆ. ಅವನು ಸಮೀರನಿಗೆ ಫೋನ್ ಮಾಡುತ್ತಾನೆ. ಸಮೀರ ದೆಹಲಿಗೆ ಹೋಗಲು ಬಸ್ ಹತ್ತಿರುತ್ತಾನೆ. ಮಿಲಿಯ ವಿಷಯ ಕೇಳಿದಾಕ್ಷಣ ತನ್ನ ಪ್ರಯಾಣ ಕ್ಯಾನ್ಸಲ್ ಮಾಡಿ ಮಿಲಿಯ ತಂದೆ ಜೊತೆಗೆ ನಿಂತು ಅವಳನ್ನು ಹುಡುಕಲು ಕೈ ಜೋಡಿಸುತ್ತಾನೆ. ಆದರೆ ಇವರು ಯಾರಿಗೂ ಮಿಲಿ ರೆಸ್ಟುರೆಂಟ್‍ನ ಕೋಲ್ದ್ ರೂಮಿನಲ್ಲಿ ಸಿಕ್ಕಿಕೊಂಡಿದ್ದಾಳೆಂದು ಗೊತ್ತಿಲ್ಲ. ಮಿಲಿ ಸಮೀರನ ಜೊತೆ ಇಲ್ಲವೆಂದು ಮಿಲಿಯ ತಂದಗೆ ದಿಗ್ಬ್ರಮೆಯಾಗುತ್ತದೆ. ಸಮೀರ ಮತ್ತು ನಿರಂಜನ್ ಇಬ್ಬರೂ ಮಿಲಿಯನ್ನು ಹುಡುಕಲು ಹೊರಡುತ್ತಾರೆ.
ಮೊದಲು ಪೊಲೀಸ್ ಠಾಣೆಗೆ ಫೋನ್ ಮಾಡಿದಾಗ ಫೋನ್ ತೆಗೆದುಕೊಳ್ಳುವ ಸಿಬ್ಬಂದಿ ಬಹಳ ಹಗುರವಾಗಿ ಮಾತನಾಡುತ್ತಾನೆ. ನಿನ್ನ ಮಗಳು ಅವಳ ಬಾಯ್ ಫ್ರೆಂಡ್ ಜೊತೆ ಓಡಿ ಹೋಗಿರಬಹುದು ಎನ್ನುತ್ತಾನೆ. ಕೊನೆಗೆ ಮಿಲಿ ಕಾಣೆಯಾಗಿದ್ದಾಳೆಂದು ದೂರು ಕೊಡಲು ಮಿಲಿ ಮತ್ತು ಸಮೀರ್ ನನ್ನು ಹಿಡಿದ ಪೊಲೀಸ್ ಠಾಣೆಗೇ ಹೋಗಲು ನಿರ್ಧರಿಸುತ್ತಾರೆ. ಆದರೆ ಅಲ್ಲೂ ಪೊಲೀಸ್ ಇನ್ಸ್‌ಪೆಕ್ಟರ್ ರಾವತ್ ಸಮೀರನನ್ನೇ ಸಂಶಯಿಸುತ್ತಾನೆ. ಸಮೀರನೇ ಮಿಲಿಯನ್ನು ಎಲ್ಲೋ ಬಚ್ಚಿಟ್ಟಿದ್ದಾನೆನ್ನುತ್ತಾನೆ. ಸಮೀರನನ್ನು ತನ್ನ ಪ್ರಶ್ನೆಗಳಿಂದ ಹಿಂಸಿಸುತ್ತಾನೆ. ನಿರಂಜನ್ ಮತ್ತು ಸಮೀರ್ ರಾವತ್‌ಗೆ ಏನೇ ಹೇಳಿದರೂ ಪೊಲೀಸರು ನಂಬುವುದಿಲ್ಲ. ಕೊನೆಗೆ ರಾವತ್ ಬಾಸ್ ರವಿಪ್ರಸಾದ್ ಅಚಾನಕ್ ಆ ಪೊಲಿಸ್ ಠಾಣೆಗೆ ಬರುತ್ತಾರೆ. ಅವರು ರಾವತ್ ನನ್ನು ಹಿಗ್ಗಾಮಗ್ಗಾ ಬೈಯ್ದು ಮಿಲಿಯನ್ನು ಹುಡುಕಲು ಆಜ್ಞೆ ಮಾಡುತ್ತಾರೆ, ಹಾಗೂ ಮಿಲಿಯನ್ನು ಹುಡುಕುವ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುತ್ತಾರೆ.
ಪೈಥಾಣಿ: ಒಂದು ತಾಯಿ ಮಗಳ ಭಾವನಾತ್ಮಕ ಕಥೆ
ಇಲ್ಲಿ ಮಿಲಿ ಫ್ರೀಜರ್ ಕೋಣೆಯಲ್ಲಿ ಬಂದಿಯಾಗಿ ಸಾಕಷ್ಟು ಸಂಕಟ ಹಾಗೂ ಅಪಾಯ ಎದುರಿಸುತ್ತಿತುತ್ತಾಳೆ. ಗಾಯವಾದ್ದರಿಂದ ಕಾಲು ಅಲ್ಲಾಡಿಸಲು ಆಗುವುದಿಲ್ಲ. ಥಂಡಿಗೆ ಕೈಕಾಲೆಲ್ಲ ಸೆಡೆದುಕೊಂಡು ಹೋಗಿರುತ್ತದೆ. ಆಚೆ ಕಡೆ ಇದ್ದ ಅವಳ ಫೋನ್ ಒಂದೇ ಸಮ ಹೊಡೆದುಕೊಳ್ಳುತ್ತಿರುತ್ತದೆ. ಮಿಲಿ ಥಂಡಿಗೆ ಬರು ಬರುತ್ತಾ ನಿಶ್ಯಕ್ತಳಾಗುತ್ತಿರುತ್ತಾಳೆ. ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಲ್ಲಿರುವ ಸಾಮಗ್ರಿಗಳಿಂದಲೇ ಏನೇನೆಲ್ಲಾ ಪ್ರಯತ್ನ ಮಾಡುತ್ತಾಳೆ. ಅಲ್ಲಿರುವ ಸಾಮಗ್ರಿಗಳ ರಟ್ಟಿನ ಪೆಟ್ಟಿಗೆಗಳಿಂದ ತನ್ನನ್ನು ತಾನು ಕವರ್ ಮಾಡಿಕೊಳ್ಲುತ್ತಾಳೆ. ಒಂದು ಇಲಿಯೂ ಅವಳ ಜೊತೆ ಇರುತ್ತದೆ. ಆ ಇಲಿ ಸಾಯಬಾರದೆಂದು ಅವಳೆಷ್ಟೇ ರಕ್ಷಣೆ ಕೊಟ್ಟರೂ ಚಳಿ ತಾಳಲಾರದೆ ಆ ಇಲಿ ಸತ್ತು ಹೋಗುತ್ತದೆ. ಮಿಲಿಗೆ ಚಳಿ ತಾಳಲಾರದೆ ಮುಖ ತುಟಿಯೆಲ್ಲ ನೀಲಿಯಾಗ ತೊಡಗುತ್ತದೆ. ಇಲಿಯಂತೆ ತಾನೂ ಸತ್ತು ಹೋಗಬಹುದು ಎನಿಸುತ್ತದೆ. ಬಹಳ ಅಳು ಬರುತ್ತದೆ. ಆದರೂ ಹೋರಾಟ ನಿಲ್ಲಿಸುವುದಿಲ್ಲ. ಪ್ರಾಣ ಉಳಿಸಿಕೊಳ್ಳಲು ಏನೇನು ಸಾಧ್ಯವೋ ಎಲ್ಲವನ್ನೂ ಮಾಡುತ್ತಾಳೆ.
ಇತ್ತ ಪೊಲೀಸ್ ಅಧಿಕಾರಿ ರಾವತ್‌ಗೆ ಮಿಲಿಯನ್ನು ಹುಡುಕುವ ಆಸಕ್ತಿ ಇರುವುದಿಲ್ಲ. ಆದರೆ ತನ್ನ ಅಧಿಕಾರಿಗಾಗಿ ಹುಡುಕಲು ಯತ್ನಿಸುತ್ತಾನೆ. ಮಿಲಿಯ ಫೋನಿನ ಕೊನೆಯ ಲೊಕೇಶನ್ ಸೈಬರ್‌ನವರು ರಾವತ್ ಗೆ ಕೊಡುತ್ತಾರೆ. ಅದು ಮಾಲ್ ಒಳಗೇ ಇರುತ್ತದೆ. ಆದರೆ ಅವನು ಅದನ್ನು ತನ್ನ ಮೇಲಧಿಕಾರಿ ರವಿಪ್ರಸಾದ್ ಗೆ ಹೇಳುವುದಿಲ್ಲ. ರಾವತ್ ಒಂಥರಾ ಸ್ಯಾಡಿಸ್ಟ್.
ಸಡನ್ ಆಗಿ ಸಮೀರ್‌ಗೆ ಒಮ್ಮೆ ಮಿಲಿಯನ್ನು ಮಾಲ್ ಎದುರು ಇರುವ ಆಟೋ ಚಾಲಕರು ಪೀಡಿಸಿದ್ದು ನೆನಪಾಗುತ್ತದೆ. ಅವರೇ ಮತ್ತೆ ಏನಾದರೂ ಮಿಲಿಗೆ ತೊಂದರೆ ಕೊಟ್ಟಿರಬಹುದೆಂದು ಪೊಲೀಸರಿಗೆ ಹೇಳುತ್ತಾನೆ. ಪೊಲೀಸಿನವರು ಮಾಲ್ ಬಳಿ ಬಂದು ಎಲ್ಲ ಆಟೋ ಚಾಲಕರನ್ನೂ ವಿಚಾರಿಸುತ್ತಾರೆ. ಆದರೆ ಅವರು ಯಾರೂ ಆದಿನ ತಾವು ಮಿಲಿಯನ್ನು ನೋಡಿಯೇ ಇಲ್ಲ ಎಂದು ಹೇಳುತ್ತಾರೆ. ಕೊನೆಗೆ ರವಿಪ್ರಸಾದ್ ಮಾಲ್ ಸೆಕ್ಯುರಿಟಿಯನ್ನು ಕೇಳುತ್ತಾನೆ. ಅವನು ತಾನು ಮಿಲಿ ಹೊರಗೆ ಹೋಗಿದ್ದು ನೋಡಿಯೇ ಇಲ್ಲ ಎಂದು ಹೇಳುತ್ತಾನೆ. ಇನ್ ಇದೆ ಔಟ್ ಇಲ್ಲ ಎನ್ನುತ್ತಾನೆ. ಆಗ ರವಿಪ್ರಸಾದ್‌ಗೆ ಮಿಲಿ ಮಾಲ್ ಒಳಗೆಯೇ ಸಿಕ್ಕಿ ಕೊಂಡಿರಬಹುದು ಎನಿಸುತ್ತದೆ. ತಕ಼ಣ ಮಿಲಿಯನ್ನು ಕೂಗುತ್ತಾ ಮಾಲ್ ಒಳಗೆ ಓಡಾಡುತ್ತಾರೆ. ಸಮೀರ್‌ಗೆ ಮಿಲಿ ಸಹೋದ್ಯೋಗಿಗಳು ಆ ಮಧ್ಯರಾತ್ರಿಯಲ್ಲಿ ಒಂದು ಗೂಡಂಗಡಿ ಮುಂದೆ ಟೀ ಕುಡಿಯುತ್ತ ಕಾಣಿಸುತ್ತಾರೆ. ಅವನು ಅವರನ್ನು ತೀವ್ರವಾಗಿ ಪ್ರಶ್ನಿಸುತ್ತಾನೆ ಮಿಲಿಯ ಬಗ್ಗೆ. ಮಿಲಿ ಕೆಲವು ಬಾಕ್ಸ್ ಇಡಲು ಫ್ರೀಜರ್ ರೂಮಿಗೆ ಹೋದಳು ಎನ್ನುತ್ತಾರೆ. ಸಮೀರ್ ಓಡಿ ಬರುತ್ತಾನೆ ಮಾಲ್ ಬಳಿ. ಎಲ್ಲರೂ ಅಲ್ಲಿ ಮಿಲಿಯನ್ನು ಹುಡುಕಲು ಪ್ರಾರಂಭಿಸುತ್ತಾರೆ.
ಇತ್ತ ಪೊಲೀಸ್ ಠಾಣೆಯಲ್ಲಿ ಒಬ್ಬ ಪೊಲೀಸ್ ಪೇದೆಗೆ ಮಿಲಿ ಬಗ್ಗೆ ಮರುಕ ಹಾಗೂ ಕಾಳಜಿ ಇರುತ್ತದೆ. ರಾವತ್ ತನ್ನ ಡ್ಯೂಟಿ ಸರಿಯಾಗಿ ಮಾಡುತ್ತಿಲ್ಲವೆಂದು ಅವನಿಗೆ ಕೋಪ. ಆದರೆ ತೋರಿಸಿಕೊಳ್ಳುವ ಹಾಗಿಲ್ಲ. ರಾವತ್ ಆರಾಮಾಗಿ ಟೀ ಕುಡಿಯುತ್ತ ಮೊಬೈಲ್ ನೋಡುತ್ತಿರುತ್ತಾನೆ. ಪೊಲೀಸ್ ಪೇದೆಯ ಟೆನ್ಷನ್ ನೋಡಿದ ಅಲ್ಲೇ ಸೆಲ್ ಒಳಗೆ ಇರುವ ಖೈದಿ ಸುಖಾ ಸುಮ್ಮನೆ ರೊಚ್ಚಿಗೇಳುತ್ತಾನೆ. (ಆ ಖೈದಿಯ ಪಾತ್ರ 1980-90 ರ ಒಬ್ಬ ಪ್ರಸಿದ್ಧ ಆ್ಯಕ್ಷನ್ ಹೀರೋ ಮಾಡಿದ್ದಾರೆ.) ರಾವತ್ ಎದ್ದು ಸೆಲ್ ಒಳಗೆ ಹೋಗುತ್ತಾನೆ ಆಗ ಈ ಪೊಲೀಸ್ ಪೇದೆ ರಾವತ್ ಫೋನಿನಿಂದ ರವಿಪ್ರಸಾದ್‌ಗೆ ಮಿಲಿಯ ಕೊನೆ ಲೊಕೇಷನ್ ಕಳಿಸಿ ಏನೂ ತಿಳಿಯದವನಂತೆ ಸುಮ್ಮನೆ ಕೂಡುತ್ತಾನೆ.
ರೈಲಿನಲ್ಲಿ ರಕ್ತಸಿಕ್ತ ಹೋರಾಟ: 'ಕಿಲ್' ಚಿತ್ರ ವಿಮರ್ಶೆ
ಅಂತೂ ಕೊನೆಗೆ ಮಾಲ್‌ನ ರೆಸ್ಟೋರೆಂಟಿನ ಕಿಚನ್ ಫ್ರೀಜರ್ ರೂಮಿನಲ್ಲಿ ಮಿಲಿ ಬಂದಿಯಾಗಿದ್ದಾಳೆ ಎನ್ನುವ ವಿಷಯ ಗೊತ್ತಾಗುತ್ತದೆ. ತಕ್ಷಣ ರೆಸ್ಟೋರೆಂಟಿನ ಮ್ಯಾನೇಜರ್ ಕರೆಸಿ ಓಪನ್ ಮಾಡಿಸುತ್ತಾರೆ. ಫ್ರೀಜರ್ ರೂಮಿನಲ್ಲಿ ಮಿಲಿ ಎಚ್ಚರ ತಪ್ಪಿ ಬಿದ್ದಿರುತ್ತಾಳೆ. ಮೈ ಮುಖವೆಲ್ಲ ನೀಲಿಯಾಗಿ, ಮೂಗಿಂದ ರಕ್ತ ಸುರಿದು ಭಯಂಕರ ಫಜೀತಿಯಾಗಿರುತ್ತದೆ. ತಕ್ಷಣ ಆಸ್ಪತ್ರೆಗೆ ಸೇರಿಸುತ್ತಾರೆ. ಮಿಲಿ ಚೇತರಿಸಿಕೊಳ್ಳುವ ಜೊತೆಗೆ ಸಮೀರನ ಜೊತೆಗೆ ಮಿಲಿಯ ಮದುವೆಗೆ ಮಿಲಿಯ ಅಪ್ಪ ಒಪ್ಪುತ್ತಾನೆ ಎಂಬಲ್ಲಿಗೆ ಮಿಲಿಯ ಕಥೆ ಸುಖಾಂತ್ಯವಾಗುತ್ತದೆ.
ಆದರೆ ಚಿತ್ರದ ಉದ್ದಕ್ಕೂ ಮಿಲಿಯ ಹೋರಾಟ ನಮಗೆ ಬೆವರುವಂತೆ ಮಾಡುತ್ತದೆ. ಪೊಲೀಸ್ ನೆರವು ಸಕಾಲಕ್ಕೆ ಸಿಗದಿದ್ದರೆ ಏನು ಗತಿ ಎಂಬ ಭಯವೂ ಕಾಡುತ್ತದೆ. ಮಿಲಿ ಮತ್ತು ಅವಳ ತಂದೆಯ ಅನುಬಂಧ ನಮ್ಮ ಹೃದಯಕ್ಕೆ ಆಪ್ತವಾಗುತ್ತದೆ. ವಿಕ್ಕಿ ಕೌಶಲ್ ತಮ್ಮ ಸನ್ನಿ ಕೌಶಲ್ ಸಮೀರನಾಗಿ ಒಳ್ಳೆಯ ಅಭಿನಯ ನೀಡಿದ್ದಾನೆ. ಜಾನ್ವಿ ಕಪೂರ್ ತನ್ನ ಚೆಂದದ ಅಭಿನಯದಿಂದ ಮನ ಗೆಲ್ಲುತ್ತಾಳೆ.