Koliesru Review ಹೆಣ್ಣಿನ ದಿಟ್ಟತನದ ಸಶಕ್ತ ಅಭಿವ್ಯಕ್ತಿ

By Kannadaprabha News  |  First Published Jan 27, 2024, 12:34 PM IST

ಅಕ್ಷತಾ ಪಾಂಡವಪುರ, ಪ್ರಕಾಶ್‌ ಶೆಟ್ಟಿ, ಅಪೇಕ್ಷಾ, ನಟನ ಮಂಜು ನಟನೆಯ ಸಿನಿಮಾ ರಿಲೀಸ್ ಆಗಿದೆ. ಹೇಗಿದೆ ಕೇಳಿಎಸ್ರು 


ನಿತ್ತಿಲೆ

ಅದ್ದೂರಿ ಕಮರ್ಷಿಯಲ್ ಸಿನಿಮಾಗಳ ಅಬ್ಬರ ನಡುವೆ ಕಾಡಿನ ನಡುವೆ ಹರಿವ ತೊರೆಯಷ್ಟೇ ಸಹಜವಾಗಿ ಮನಸ್ಸಿನಲ್ಲಿ ಉಳಿಯುವ ಸಿನಿಮಾ ಕೋಳಿ ಎಸ್ರು. ಸಣ್ಣಕಥೆಯ ಎಳೆಯೊಂದನ್ನು ಆತ್ಮವಾಗಿಸಿ ಚಾಮರಾಜನಗರದ ಪರಿಸರ, ಅಲ್ಲಿನ ಭಾಷೆಯನ್ನು ರಕ್ತಮಾಂಸದಂತೆ ತುಂಬಿಕೊಂಡು ಪ್ರೇಕ್ಷಕನಿಗೆ ಹತ್ತಿರವಾಗುವ ಚಿತ್ರವಿದು.ಹೇಳಿಕೇಳಿ ಇದು ಕಲಾತ್ಮಕ ಚಿತ್ರ. ಸಾವಧಾನತೆ ಇಂಥಾ ಚಿತ್ರಗಳ ಜೀವಂತಿಕೆ. ಎಷ್ಟೋ ಸಮಯದ ಬಳಿಕವೂ ಅಚ್ಚಳಿಯದ ಹಾಗೆ ಮನಸ್ಸಿನಲ್ಲುಳಿಯುವುದೇ ಇಂಥಾ ಸಿನಿಮಾಗಳ ಶಕ್ತಿ.

Tap to resize

Latest Videos

ತಾರಾಗಣ: ಅಕ್ಷತಾ ಪಾಂಡವಪುರ, ಪ್ರಕಾಶ್‌ ಶೆಟ್ಟಿ, ಅಪೇಕ್ಷಾ, ನಟನ ಮಂಜು

ನಿರ್ದೇಶನ: ಚಂಪಾ ಶೆಟ್ಟಿ

Hadinelentu Review ಸಾಮಾಜಿಕ ಸ್ತರಗಳಿಗೆ ವಾಸ್ತವದ ಕನ್ನಡಿ

ಈ ಸಿನಿಮಾದಲ್ಲಿ ಹುಚ್ಚೀರಿ ಎಂಬ ಹರೆಯದ ಹೆಣ್ಣುಮಗಳು ಮತ್ತವಳ ಮಗಳ ಕಥೆ ಇದೆ. ತಾಯಿಗೆ ಮಗಳೆಂದರೆ ಜೀವ, ಮಗಳಿಗೆ ಕೋಳಿ ಎಸ್ರಿನ ಮೇಲೆ ಆಸೆ. ತನ್ನೆಲ್ಲ ಪ್ರತಿಭೆಯನ್ನು ಪಣಕ್ಕಿಟ್ಟು ಮಗಳಿಗೆ ಕೋಳಿ ಎಸ್ರು ಒದಗಿಸಲು ಸರ್ಕಸ್ ಮಾಡುವ ಹುಚ್ಚೀರಿ ದಶಕದ ಹಿಂದಿನ ಹಳ್ಳಿ ಹೆಣ್ಣುಮಕ್ಕಳನ್ನು ಪ್ರತಿಬಿಂಬಿಸುತ್ತಾಳೆ. ತನಗೆ ಎದುರಾಗುವ ಕಷ್ಟವನ್ನು ಬುದ್ಧಿವಂತಿಕೆಯಿಂದ ನಿಭಾಯಿಸುವ ಪರಿ, ದಿಟ್ಟತನದಿಂದ ಸವಾಲನ್ನು ಎದುರುಗೊಳ್ಳುವ ಛಾತಿ ಇವೆಲ್ಲ ಈ ಪಾತ್ರದ ಸಹಜತೆಗೆ ಸಾಕ್ಷಿಯಾಗುತ್ತವೆ. ಕುಡುಕ ಗಂಡ, ನಕ್ಷತ್ರಿಕನಂತೆ ಕಾಡುವ ಗೆಂಡೆಕಾಳ, ಕೊನೆ ದಿನ ಎಣಿಸುವ ಮುದುಕಿ .. ಇವರು ಹುಚ್ಚೀರಿಯ ಸುತ್ತ ಸುತ್ತುವ ದುಷ್ಟಗ್ರಹಗಳು. ಇಂಥಾ ಗ್ರಹಗಳಿಂದ ಅವಳು ಪಾರಾಗುತ್ತಾಳ? ಈ ಪಾತ್ರದ ಮೂಲಕ ನಿರ್ದೇಶಕಿ ಏನನ್ನು ಹೇಳಲು ಹೊರಟಿದ್ದಾರೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.

Bachelor Party Review ದ್ರೋಹವೂ ಇಲ್ಲಿ ತಮಾಷೆಯ ಬೆನ್ನೇರಿದೆ!

ಎಂಥಾ ಪಾತ್ರವನ್ನೂ ನಿಭಾಯಿಸಬಲ್ಲ ಅದ್ಭುತ ಪ್ರತಿಭೆ ಅಕ್ಷತಾ ಪಾಂಡವಪುರ ಇಲ್ಲಿ ಹುಚ್ಚೀರಿ ಪಾತ್ರವನ್ನು ಅಕ್ಷರಶಃ ಜೀವಿಸಿದ್ದಾರೆ. ಅಚ್ಚರಿಯಂತೆ ಎದುರಾಗುವ ಮತ್ತೆರಡು ಪ್ರತಿಭೆಗಳು ಹುಚ್ಚೀರಿ ಮಗಳ ಪಾತ್ರ ಮಾಡಿದ ಅಪೇಕ್ಷಾ, ಕುಡುಕ ಗಂಡನಾಗಿ ಕಾಡುವ ಪ್ರಕಾಶ್ ಶೆಟ್ಟಿ. ಉಳಿದ ಕಲಾವಿದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಿರ್ದೇಶಕಿ ಚಂಪಾ ಶೆಟ್ಟಿ ಸಿನಿಮಾವನ್ನು ಸಶಕ್ತವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವೊಂದು ಸಣ್ಣಪುಟ್ಟ ಕೊರತೆಗಳ ನಡುವೆಯೂ ಮನಸ್ಸಲ್ಲುಳಿಯುವ ಸಿನಿಮಾ ಕೋಳಿಎಸ್ರು.

click me!