ಇದೊಂದು ಮರ್ಡರ್ ಮಿಸ್ಟ್ರಿ. ಒಂದು ಕೊಲೆ ನಡೆಯುತ್ತದೆ. ಅದರ ಬೆನ್ನು ಹತ್ತಿದಾಗ ಮತ್ತೊಂದಷ್ಟು ಕೊಲೆಗಳು. ಅಲ್ಲೆಲ್ಲೋ ಒಂದು ತಿರುವು ಮತ್ತಿನ್ನೆಲ್ಲೋ ಕರೆದೊಯುತ್ತದೆ. ಮರ್ಡರ್ ಮಿಸ್ಟ್ರಿಗೆ ಇರಬೇಕಾದ ಮೂಲಗುಣ ನಿಗೂಢತೆ ಮತ್ತು ಅನೂಹ್ಯತೆ.
ಆರ್.ಎಸ್.
ಒಂದು ಘಟನೆ ನಡೆಯುತ್ತದೆ. ಅದರ ಹಿಂದೆ ಆ ಘಟನೆಗೆ ಸಂಬಂಧಿಸಿದಂತೆ ಮತ್ತೊಂದಷ್ಟು ಘಟನೆಗಳು ಜರುಗಿ ಕುತೂಹಲ ಕೈಹಿಡಿದು ಕರೆದೊಯ್ಯುತ್ತದೆ. ಇಂತಹ ಬಿಗುವಾದ ಚಿತ್ರಕತೆ ಹೆಣೆಯುವ ಪ್ರಯತ್ನದ ಸಿನಿಮಾ ಇದು. ನಿರ್ದೇಶಕರು ಇಲ್ಲಿ ಪ್ರೇಕ್ಷಕನನ್ನು ಮುಂದೇನಾಗುತ್ತದೆ ಎಂದು ಕಾಯುವಂತೆ ಕತೆ ಹೆಣೆಯುವ ಮಾರ್ಗ ಹಿಡಿದ್ದಾರೆ. ಇದೊಂದು ಮರ್ಡರ್ ಮಿಸ್ಟ್ರಿ. ಒಂದು ಕೊಲೆ ನಡೆಯುತ್ತದೆ.
ಅದರ ಬೆನ್ನು ಹತ್ತಿದಾಗ ಮತ್ತೊಂದಷ್ಟು ಕೊಲೆಗಳು. ಅಲ್ಲೆಲ್ಲೋ ಒಂದು ತಿರುವು ಮತ್ತಿನ್ನೆಲ್ಲೋ ಕರೆದೊಯುತ್ತದೆ. ಮರ್ಡರ್ ಮಿಸ್ಟ್ರಿಗೆ ಇರಬೇಕಾದ ಮೂಲಗುಣ ನಿಗೂಢತೆ ಮತ್ತು ಅನೂಹ್ಯತೆ. ಯಾರು ಕೊಲೆ ಮಾಡಿದ್ದು ಮತ್ತು ಯಾಕೆ ಮಾಡಿದ್ದು ಎಂಬ ಅಂಶಗಳು ಮುಖ್ಯ. ಅವೆರಡೂ ಸರಿಯಾಗಿದ್ದರೆ ಸಿನಿಮಾ ಗಟ್ಟಿಯಾಗುತ್ತದೆ. ನಿರ್ದೇಶಕರು ಆ ನಿಟ್ಟಿನಲ್ಲಿ ಕಥಾ ಹೆಣಿಗೆ ಕಡೆಗೆ ಗಮನ ನೀಡಿದ್ದಾರೆ. ಒಂದೇ ಕತೆಗೆ ಬೇರೆ ಬೇರೆ ಆಯಾಮಗಳು, ಬೇರೆ ಬೇರೆ ದೃಷ್ಟಿಕೋನಗಳನ್ನು ನೀಡುವುದರ ಮೂಲಕ ಕತೆಯನ್ನು ಮುಂದೆ ಕರೆದೊಯ್ಯುತ್ತಾರೆ.
ಚಿತ್ರ: ಬ್ಯಾಡ್
ನಿರ್ದೇಶನ: ಪಿ.ಸಿ. ಶೇಖರ್
ತಾರಾಗಣ: ನಕುಲ್ ಗೌಡ, ಅಪೂರ್ವ ಭಾರದ್ವಾಜ್, ಮಾನ್ವಿತಾ ಹರೀಶ್, ಸಾಯಿಕೃಷ್ಣ
ರೇಟಿಂಗ್: 3
ಆ್ಯಕ್ಷನ್‌ಗಳು ಮತ್ತು ಸಂಗೀತ ಗಮನ ಸೆಳೆಯುತ್ತದೆ. ಅರ್ಜುನ್ ಜನ್ಯಾ ಎಂದಿನಂತೆ ತಮ್ಮ ಚಾತುರ್ಯ ಮೆರೆದಿದ್ದಾರೆ. ಮಾನ್ವಿತಾ ಹರೀಶ್ ಒಂದು ಪ್ರಮುಖ ಘಟ್ಟದಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ನಕುಲ್ ಗೌಡ ಪಾತ್ರಕ್ಕೆ ತಕ್ಕಂತೆ ಕಾಣಿಸಿಕೊಂಡಿದ್ದಾರೆ. ಅಪೂರ್ವ ಭಾರದ್ವಾಜ್ ಮೆಚ್ಚುಗೆಗೆ ಪಾತ್ರವಾಗುತ್ತಾರೆ. ಇದೊಂದು ಕುತೂಹಲವನ್ನು ಅಡಗಿಸಿಟ್ಟುಕೊಂಡಿರುವ, ಗಮನಾರ್ಹ ಮೇಕಿಂಗ್ ಇರುವ ಸಿನಿಮಾವಾಗಿ ಮೂಡಿಬಂದಿದೆ.