ಅನಾಮಧೇಯ ಅಶೋಕ್ ಕುಮಾರ್ ಚಿತ್ರ ವಿಮರ್ಶೆ: ತಂತ್ರ ಪ್ರತಿ ತಂತ್ರದ ಕುತೂಹಲಕರ ಥ್ರಿಲ್ಲರ್

Published : Feb 08, 2025, 11:45 AM IST
ಅನಾಮಧೇಯ ಅಶೋಕ್ ಕುಮಾರ್ ಚಿತ್ರ ವಿಮರ್ಶೆ: ತಂತ್ರ ಪ್ರತಿ ತಂತ್ರದ ಕುತೂಹಲಕರ ಥ್ರಿಲ್ಲರ್

ಸಾರಾಂಶ

ಈ ಎರಡು ಸಾವುಗಳ ಹಿಂದೆ ಏನಾಗಿರುತ್ತದೆ ಎನ್ನುವ ರಹಸ್ಯಗಳು ಈಗ ತೆರೆದುಕೊಳ್ಳುತ್ತದೆ. ಒಂದು ಕೊಲೆಗೆ ಆರೋಪಿ, ಮತ್ತೊಂದು ಕೊಲೆಗೆ ಸಾಕ್ಷಿ ಆಗಿರುವ ಪ್ರವೀಣ್‌ನನ್ನು ತನಿಖೆ ಮಾಡುವಾಗ ಈ ‘ಅನಾಮಧೇಯ ಅಶೋಕ್‍ ಕುಮಾರ್’ ಯಾರು ಎನ್ನುವ ಕುತೂಹಲ ಹುಟ್ಟಿಕೊಳ್ಳುತ್ತದೆ. 

ಆರ್.ಕೆ.

ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆ ತನಕ ನಡೆಯುವ ಕತೆ ಇದು. ಈ 12 ಗಂಟೆಗಳ ಅವಧಿಯಲ್ಲಿ ಏನೆಲ್ಲಾ ಸಂಭವಿಸುತ್ತದೆ ಎಂಬುದು ಚಿತ್ರದ ಕತೆ. ಪ್ರಜ್ಞೆ ತಪ್ಪಿಬಿದ್ದಿದ್ದ ಪತ್ರಕರ್ತ ಪ್ರವೀಣ್ ರಾಜಶೇಖರ್ ಅವರಿಗೆ ಪ್ರಜ್ಞೆ ಬಂದಾಗ ತಾನು ಸಂದರ್ಶನ ಮಾಡುವುದಕ್ಕೆ ಬಂದಿದ್ದ ಪ್ರಖ್ಯಾತ ಕ್ರಿಮಿನಲ್‍ ಲಾಯರ್ ಆನಂದ್‍ ಭಟ್‍ ಕೊಲೆ ಆಗಿರುತ್ತದೆ. ಈ ನಡುವೆ ಅದೇ ಜಾಗದಲ್ಲಿ ತನ್ನ ಆತ್ಮ ರಕ್ಷಣೆಗಾಗಿ ಒಬ್ಬನನ್ನು ಕೊಲೆ ಮಾಡುತ್ತಾನೆ. ಪ್ರವೀಣ್‌ನಿಂದ ಕೊಲೆಯಾದವ ಮಾಜಿ ಪೊಲೀಸ್ ಕಮಿಷನರ್. 

ಈ ಎರಡು ಸಾವುಗಳ ಹಿಂದೆ ಏನಾಗಿರುತ್ತದೆ ಎನ್ನುವ ರಹಸ್ಯಗಳು ಈಗ ತೆರೆದುಕೊಳ್ಳುತ್ತದೆ. ಒಂದು ಕೊಲೆಗೆ ಆರೋಪಿ, ಮತ್ತೊಂದು ಕೊಲೆಗೆ ಸಾಕ್ಷಿ ಆಗಿರುವ ಪ್ರವೀಣ್‌ನನ್ನು ತನಿಖೆ ಮಾಡುವಾಗ ಈ ‘ಅನಾಮಧೇಯ ಅಶೋಕ್‍ ಕುಮಾರ್’ ಯಾರು ಎನ್ನುವ ಕುತೂಹಲ ಹುಟ್ಟಿಕೊಳ್ಳುತ್ತದೆ. ಇದು ಗೊತ್ತಾಗಬೇಕಾದರೆ ನೀವು ಚಿತ್ರ ನೋಡಬೇಕು. ನಿರ್ದೇಶಕ ಸಾಗರ್ ಕುಮಾರ್ ಮೊದಲ ಪ್ರಯತ್ನದಲ್ಲೇ ತಂತ್ರ- ಪ್ರತಿತಂತ್ರದ ಕತೆಯನ್ನು ಕಟ್ಟಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಆಗಾಗ ನಿಧಾನ ಎನಿಸಿದರೂ ಸಂಭಾಷಣೆ, ಸನ್ನಿವೇಶ ಹಾಗೂ ಇರುವ ಕೆಲವೇ ಪಾತ್ರಗಳನ್ನು ತಮ್ಮ ಕತೆಗೆ ಅಗತ್ಯಕ್ಕೆ ತಕ್ಕಷ್ಟು ಬಳಸಿಕೊಂಡಿರುವುದು ಚಿತ್ರದ ಪ್ಲಸ್ ಪಾಯಿಂಟ್.

ಚಿತ್ರ: ಅನಾಮಧೇಯ ಅಶೋಕ್ ಕುಮಾರ್
ತಾರಾಗಣ: ಕಿಶೋರ್, ಸುಧೀಂದ್ರನ್ ನಾಯರ್, ಹರ್ಷಿಲ್ ಕೌಶಿಕ್
ನಿರ್ದೇಶನ: ಸಾಗರ್ ಕುಮಾರ್
ರೇಟಿಂಗ್: 3

ಪ್ರವೀಣ್ ರಾಜಶೇಖರ್ ಪಾತ್ರಧಾರಿ ದುನಿಯಾ ಕಿಶೋರ್ ಹಾಗೂ ತನಿಖಾಧಿಕಾರಿ ಪಾತ್ರಧಾರಿ ಹರ್ಷಿಲ್‍ ಕೌಶಿಕ್‍ ಈ ಇಬ್ಬರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅದ್ಭುತ ಚಿತ್ರವಲ್ಲದಿದ್ದರೂ, ನೋಡಿಸಿಕೊಳ್ಳುವ ಗುಣವಂತೂ ಇದೆ. ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗೆ ಚಿತ್ರ ಮಜಾ ಕೊಡುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?