C Kannada Movie Review: ಮಗಳ ಕಣ್ಣೋಟಕ್ಕೆ ಅಪ್ಪನ ಹೋರಾಟ

By Kannadaprabha News  |  First Published Aug 24, 2024, 10:43 PM IST

ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ವ್ಯಕ್ತಿಯೊಬ್ಬನ ಮಗಳ ಕಣ್ಣಿನ ಚಿಕಿತ್ಸೆಗೆ 15 ಲಕ್ಷ ಬೇಕಿದೆ. ಆತ ತನ್ನ ಸ್ನೇಹಿತ ಹೇಳಿದಂತೆ ತನ್ನನ್ನು ಮೆಡಿಕಲ್ ಪ್ರಯೋಗಕ್ಕೆ ಒಪ್ಪಿಸಿಕೊಳ್ಳುವುದಕ್ಕೆ ಮುಂದಾಗುತ್ತಾನೆ. 


ಕೇಶವ

ದೃಷ್ಟಿ ಕಳೆದುಕೊಂಡ ಮಗಳಿಗೆ ಮತ್ತೆ ದೃಷ್ಟಿ ಬರುವಂತೆ ಮಾಡಲು ತಂದೆಯೊಬ್ಬ ನಡೆಸುವ ಹೋರಾಟವೇ ‘ಸಿ’. ಎಮೋಷನ್‌ನಿಂದ ಕೂಡಿದ ಕತೆಗೆ ‘ಸಿ’ ಹೆಸರು ಯಾಕೆ ಎಂದರೆ ‘ಪ್ಲೀಸ್ ಸೀ ಮೂವೀ’ ಎಂದು ಹೇಳಬೇಕಾಗುತ್ತದೆ. ನಿರ್ದೇಶನ, ನಟನೆ ಎರಡೂ ವಿಭಾಗಗಳನ್ನು ಹೊತ್ತು ಸಾಗಿರುವ ಕಿರಣ್‌ ಸುಭ್ರಮಣಿ ಇಲ್ಲಿ ಎರಡು ಡಾರ್ಕ್‌ ಲೋಕವನ್ನು ತೆರೆದಿಡುತ್ತಾರೆ.

Tap to resize

Latest Videos

ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ವ್ಯಕ್ತಿಯೊಬ್ಬನ ಮಗಳ ಕಣ್ಣಿನ ಚಿಕಿತ್ಸೆಗೆ 15 ಲಕ್ಷ ಬೇಕಿದೆ. ಆತ ತನ್ನ ಸ್ನೇಹಿತ ಹೇಳಿದಂತೆ ತನ್ನನ್ನು ಮೆಡಿಕಲ್ ಪ್ರಯೋಗಕ್ಕೆ ಒಪ್ಪಿಸಿಕೊಳ್ಳುವುದಕ್ಕೆ ಮುಂದಾಗುತ್ತಾನೆ. ಇದರಿಂದ ಬರುವ ಹಣದಲ್ಲಿ ಮಗಳ ಕಣ್ಣಿನ ಚಿಕಿತ್ಸೆ ಮಾಡಿಸೋಣ ಎನ್ನುವುದು ಆತನ ಲೆಕ್ಕಾಚಾರ. ಆದರೆ, ನಿಗೂಢ ಮೆಡಿಕಲ್ ಪ್ರಯೋಗ ಮಾಡಿಸಿಕೊಳ್ಳುವ ಜಾಲಕ್ಕೆ ಹೋದ ಈತನಿಗೆ ಅಲ್ಲೊಂದು ಆಘಾತ ಎದುರಾಗುತ್ತದೆ. ಅದೇನು, ಆ ಕತ್ತಲ ಜಗತ್ತಿನಿಂದ ಬಡ ತಂದೆ ತಪ್ಪಿಸಿಕೊಳ್ಳುತ್ತಾನೋ-ಇಲ್ಲವೋ, ತನ್ನ ಮಗಳಿಗೆ ದೃಷ್ಟಿ ತರುತ್ತಾನೋ ಇಲ್ಲವೋ ಎಂಬುದು ಚಿತ್ರದ ಕತೆ.

ಚಿತ್ರ: ಸಿ
ತಾರಾಗಣ: ಕಿರಣ್ ಸುಬ್ರಮಣಿ, ಸಾನ್ವಿಕಾ, ಮಜಾಭಾರತ್ ಪಾಟೀಲ್, ಆರ್ಯ
ನಿರ್ದೇಶನ: ಕಿರಣ್ ಸುಬ್ರಮಣಿ
ರೇಟಿಂಗ್: 3

ಕತೆ ಚೆನ್ನಾಗಿದೆ. ತಂದೆ ಮತ್ತು ಮಗಳ ಭಾವುಕ ಸನ್ನಿವೇಶಗಳಿಂದ ಕೂಡಿದ ಚಿತ್ರ ನೋಡುತ್ತಾ ಕೂರುವ ಪ್ರೇಕ್ಷಕನನ್ನು ಇದ್ದಕ್ಕಿದ್ದಂತೆ ಎಚ್ಚರಿಸುವುದು ಇಲ್ಲಿ ಬರುವ ಕ್ರೈಮ್. ಸಿನಿಮಾ ಜಗತ್ತಿಗೆ ಇದು ಹೊಸ ಕ್ರೈಮ್‌ ಅಲ್ಲದೆ ಇರಬಹುದು. ಆದರೆ, ಅಸಹಾಯಕನೊಬ್ಬ ಈ ಕ್ರೈಮ್‌ ಜಗತ್ತಿಗೆ ಸಿಕ್ಕಿಕೊಂಡರೆ ಏನಾಗುತ್ತದೆ ಎಂಬುದನ್ನು ಯಾವುದೇ ಆಡಂಬರ, ವೈಭವ ಇಲ್ಲದೆ ನಿರ್ದೇಶಕರು ಕತೆಯನ್ನು ಸಾಧಾರಣ ದೃಶ್ಯಗಳ ಮೂಲಕ ನಿರೂಪಿಸಿದ್ದಾರೆ.

click me!