Genius Mutta Movie Review: ಊಹೆಗೆ ನಿಲುಕುವ ಸಿಂಪಲ್‌ ಕಥೆ, ಸರಳ ನಿರೂಪಣೆ, ಸೋಲಿಗರ ಹುಡುಗ ಮುತ್ತ

By Kannadaprabha News  |  First Published Aug 10, 2024, 4:54 PM IST

ಹಿರಿಯ ವೈದ್ಯೆ ಮುತ್ತನಿಗೆ ಬಾಲ್ಯದಿಂದಲೇ ವೈದ್ಯ ಜಗತ್ತಿನ ಸೂಕ್ಷ್ಮಗಳನ್ನು ತಿಳಿಸಿರುತ್ತಾಳೆ. ರೋಗಲಕ್ಷಣ, ಅದಕ್ಕೆ ನೀಡುವ ಔಷಧ ಇತ್ಯಾದಿಗಳನ್ನು ಕರತಲಾಮಲಕ ಮಾಡಿಕೊಳ್ಳುವ ಮುತ್ತ ತನ್ನ ಚುರುಕು ಬುದ್ಧಿಮತ್ತೆಯಿಂದ ಬೆಳೆಯುತ್ತಾನೆ.


ಪ್ರಿಯಾ ಕೆರ್ವಾಶೆ

‘ಜೀನಿಯಸ್‌ ಮುತ್ತ’ ಎಂಬ ಟೈಟಲ್ಲೇ ಸಿನಿಮಾದ ಆಂತರ್ಯವನ್ನು ಬಿಟ್ಟುಕೊಡುತ್ತೆ. ಸಿನಿಮಾ ಎಕ್ಸ್ರಾಆರ್ಡಿನರಿಯಾಗಿ ಏನನ್ನೋ ಹೇಳಲ್ಲ. ಆದರೆ ಕಥೆಯನ್ನು ನೀಟಾಗಿ, ಗೊಂದಲವಿಲ್ಲದೇ ನಿರೂಪಿಸಲು ನಿರ್ದೇಶಕಿ ನಾಗಿಣಿ ಭರಣ ಪ್ರಯತ್ನಿಸಿದ್ದಾರೆ. ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಹುಡುಗ ಮುತ್ತ. ಆತನ ತಾಯಿ ನೀಲಮ್ಮ. ಇಲ್ಲಿನ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಸೇವೆ ಸಲ್ಲಿಸುವ ಹಿರಿಯ ವೈದ್ಯೆಯೊಬ್ಬರಿಗೆ ನೀಲಮ್ಮ ಸಹಾಯಕಿ.

Tap to resize

Latest Videos

undefined

ಆ ಹಿರಿಯ ವೈದ್ಯೆ ಮುತ್ತನಿಗೆ ಬಾಲ್ಯದಿಂದಲೇ ವೈದ್ಯ ಜಗತ್ತಿನ ಸೂಕ್ಷ್ಮಗಳನ್ನು ತಿಳಿಸಿರುತ್ತಾಳೆ. ರೋಗಲಕ್ಷಣ, ಅದಕ್ಕೆ ನೀಡುವ ಔಷಧ ಇತ್ಯಾದಿಗಳನ್ನು ಕರತಲಾಮಲಕ ಮಾಡಿಕೊಳ್ಳುವ ಮುತ್ತ ತನ್ನ ಚುರುಕು ಬುದ್ಧಿಮತ್ತೆಯಿಂದ ಬೆಳೆಯುತ್ತಾನೆ. ಈ ಹೊತ್ತಿಗೆ ಈತನ ತಾಯಿಗೆ ಬಲು ಅಪರೂಪದ ಆರೋಗ್ಯ ಸಮಸ್ಯೆ ಬರುತ್ತದೆ. ಹೆಚ್ಚಿನ ಚಿಕಿತ್ಸೆ ಆತ ಬೆಂಗಳೂರಿಗೆ ಹೋಗಬೇಕಾಗುತ್ತದೆ.

ಅಲ್ಲಿ ಅಮ್ಮನಿಗೆ ಚಿಕಿತ್ಸೆ ಸಿಕ್ಕಿತಾ? ಮುತ್ತ ಎದುರಿಸಿದ ಸವಾಲುಗಳೇನು? ಡಾ ಆದರ್ಶ ಕಥೆ ಏನು? ಅನ್ನೋದೆಲ್ಲ ಮನ ಮಿಡಿಯುವಂತೆ ಚಿತ್ರಿತವಾಗಿದೆ. ಆದರೆ ಕೆಲವೊಂದು ಕಡೆ ಲಾಜಿಕ್‌ ಮಿಸ್‌ ಆಗಿದೆ. ನೀವು ನಿಸರ್ಗಪ್ರಿಯರಾಗಿದ್ದರೆ ಬಿಳಿಗಿರಿರಂಗನ ಬೆಟ್ಟದ ಮನೋಹರ ಪ್ರಕೃತಿಯ ದರ್ಶನವನ್ನು ಈ ಸಿನಿಮಾದಲ್ಲಿ ಪಡೆಯಬಹುದು. ಪರಮೇಶ್‌ ಅವರ ಸಿನಿಮಾಟೋಗ್ರಫಿ ಚೆನ್ನಾಗಿದೆ. ಸೋಲಿಗರ ಹಾಡೊಂದು ಇಂಪಾಗಿ ಮೂಡಿಬಂದಿದೆ. 

ಚಿತ್ರ: ಜೀನಿಯಸ್‌ ಮುತ್ತ
ತಾರಾಗಣ: ಶ್ರೇಯಸ್‌ ಜೈಪ್ರಕಾಶ್‌, ಪ್ರಿಯಾ ಷಟಮರ್ಶನ, ವಿಜಯ ರಾಘವೇಂದ್ರ
ನಿರ್ದೇಶನ : ನಾಗಿನಿಭರಣ
ರೇಟಿಂಗ್‌ : 3

ಆದರೆ ಇದನ್ನು ಸೋಲಿಗರ ಹೆಣ್ಮಗಳಿಂದಲೇ ಹಾಡಿಸಿದ್ದರೆ ಸಹಜವಾಗಿಯೂ ಇರುತ್ತಿತ್ತು. ಶ್ರೇಯಸ್‌ ನಟನೆಗೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರೆ. ಪ್ರಿಯಾ ಷಟಮರ್ಶನ ನಟನೆ ಗಮನಸೆಳೆಯುತ್ತದೆ. ವಿಜಯ ರಾಘವೇಂದ್ರ ಸೊಗಸಾಗಿ ನಟಿಸಿದ್ದಾರೆ. ಇಲ್ಲಿ ರಂಗಭೂಮಿ ಕಲಾವಿದರು ಹೆಚ್ಚಿರುವ ಕಾರಣ ನಾಟಕೀಯತೆಯನ್ನೂ ತಂದಿದ್ದಾರೆ. ಆದರೆ ಕೆಲವು ಕಡೆ ಅದು ಸಿನಿಮಾದ ಚೌಕಟ್ಟು ಮೀರಿ ಹೋಗುತ್ತದೆ. ಉಳಿದಂತೆ ಸರಳ ಕಥಾಹಂದರದ ಈ ಸಿನಿಮಾ ದಶಕಗಳ ಹಿಂದಿನ ಮಕ್ಕಳ ಸಿನಿಮಾವನ್ನು ನೆನಪಿಸುತ್ತದೆ.

click me!