Buddies Film Review: ಕಾಲೇಜು ಕಾರಿಡಾರ್‌ನಲ್ಲಿ ಬಡ್ಡೀಸ್‌ ಆಟ-ಪಾಠ

By Govindaraj S  |  First Published Jun 25, 2022, 5:00 AM IST

ನಾಯಕ- ನಾಯಕಿ ನಡುವೆ ಪ್ರೇಮ ಕತೆ ಶುರುವಾಗುವ ಹೊತ್ತಿನಲ್ಲಿ ಕಾಲೇಜು ರಾಜಕೀಯವೂ ರಂಗೇರುತ್ತದೆ. ಈಗ ಹೀರೋ ವಿದೇಶಕ್ಕೆ ಹೊರಟು ನಿಂತಿದ್ದಾನೆ. ಆದರೆ, ಅನಾಥರಾಗಿ ಬಂದ ಸ್ನೇಹಿತರಿಗೆ ಹೀರೋ ವಿದೇಶಕ್ಕೆ ಹೋಗುವುದು ಇಷ್ಟವಿಲ್ಲ. ಒಂದು ಸಂಚು ರೂಪಿಸುತ್ತಾರೆ.


ಆರ್.ಕೇಶವಮೂರ್ತಿ

ನಂಬಿಕೆಯ ಗೂಡಿನಲ್ಲಿ ಮೋಸ ಮೊಟ್ಟೆಇಡುತ್ತದೆ. ಅದಕ್ಕೆ ಕಾವು ಕೊಟ್ಟು, ಮರಿ ಮಾಡುವ ಹೊತ್ತಿಗೆ ಅದೇ ಮೋಸದ ಮೊಟ್ಟೆಯ ಮುಂದೆ ಒಳ್ಳೆಯತನವೇ ಗೆಲ್ಲುತ್ತದೆ ಎನ್ನುವ ಸಂದೇಶವನ್ನು ಸಾರುವ ಸಿನಿಮಾ ‘ಬಡ್ಡೀಸ್‌’. ಸ್ನೇಹ, ಪ್ರೀತಿ, ಕಾಲೇಜು, ಶ್ರೀಮಂತ ಕುಟುಂಬ, ಅನಾಥ ಸ್ನೇಹಿತರ... ಇಷ್ಟು ಪಾತ್ರಗಳ ಸುತ್ತ ಇವತ್ತಿನ ಕಾಲೇಜು ಹುಡುಗ- ಹುಡುಗಿಯರಿಗೆ ಹೇಳಬೇಕಾದ ಕತೆಯನ್ನು ನಿರ್ದೇಶಕ ಗುರುತೇಜ್‌ ಶೆಟ್ಟಿ ಅವರು ಸಮರ್ಪಕವಾಗಿ ನಿರೂಪಿಸಿದ್ದಾರೆ.

ಕಿರುತೆರೆಯ ತಾರೆ ಕಿರಣ್‌ ರಾಜ್‌ ಅವರು ನಿರ್ದೇಶಕರ ಈ ಕನಸಿಗೆ ತಮ್ಮನ್ನು ಸಾಧ್ಯವಾದಷ್ಟು ಅರ್ಪಿಸಿಕೊಂಡಿದ್ದಾರೆ. ಕಾಲೇಜು ಹುಡುಗರ ಹಾಡು- ಪಾಡಿನ ಜತೆಗೆ ಒಂದು ಥ್ರಿಲ್ಲರ್‌ ಅಂಶ ಜತೆಯಾದರೆ ಹೇಗಿರುತ್ತದೆ ಎನ್ನುವ ಕತೆಯನ್ನು ಈ ಸಿನಿಮಾ ಹೇಳುತ್ತದೆ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಳ್ಳುವ ನಾಯಕನಿಗೆ ಒಂಟಿತನ ಎಂಬುದು ಮಾನಸಿಕ ಕಾಯಿಲೆ ಆಗಿ ಬೆಳೆಯುತ್ತದೆ. ಈತನ ಒಂಟಿತನ ದೂರ ಮಾಡಲು ಅನಾಥಾಶ್ರಮದಲ್ಲಿರುವ ನಾಲ್ಕು ಮಂದಿಯನ್ನು ನಾಯಕನ ತಂದೆ ಮನೆಗೆ ಕರೆತರುತ್ತಾರೆ. ನಾಯಕನಿಗೆ ಒಂಟಿತನ ದೂರ ಆಗಿದೆ. ಈ ನಡುವೆ ಕಾಲೇಜು ಕಾರಿಡಾರ್‌ನಲ್ಲಿ ಬಾಲ್ಯದ ಗೆಳತಿ ಸಿಕ್ಕಿದ್ದಾಳೆ. 

Tap to resize

Latest Videos

ಚಿತ್ರ: ಬಡ್ಡೀಸ್‌

ತಾರಾಗಣ: ಕಿರಣ್‌ ರಾಜ್‌, ಸಿರಿ ಪ್ರಹ್ಲಾದ್‌, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್‌ ಬೋಳಾರ್‌, ರೋಹನ್‌ ಸಾಯಿ, ವಿನಯ್‌ ಸಂಕೇತ್‌, ಗಿರೀಶ್‌ ಹೆಗ್ಡೆ

ನಿರ್ದೇಶನ: ಗುರುತೇಜ್‌ ಶೆಟ್ಟಿ

ನಿರ್ಮಾಣ: ಭಾರತಿ ಶೆಟ್ಟಿ

ರೇಟಿಂಗ್‌: 3

ನಾಯಕ- ನಾಯಕಿ ನಡುವೆ ಪ್ರೇಮ ಕತೆ ಶುರುವಾಗುವ ಹೊತ್ತಿನಲ್ಲಿ ಕಾಲೇಜು ರಾಜಕೀಯವೂ ರಂಗೇರುತ್ತದೆ. ಈಗ ಹೀರೋ ವಿದೇಶಕ್ಕೆ ಹೊರಟು ನಿಂತಿದ್ದಾನೆ. ಆದರೆ, ಅನಾಥರಾಗಿ ಬಂದ ಸ್ನೇಹಿತರಿಗೆ ಹೀರೋ ವಿದೇಶಕ್ಕೆ ಹೋಗುವುದು ಇಷ್ಟವಿಲ್ಲ. ಒಂದು ಸಂಚು ರೂಪಿಸುತ್ತಾರೆ. ಆ ಸಂಚಿಗೆ ನಾಯಕ ಹೇಗೆ ಬಂಧಿ ಆಗುತ್ತಾನೆ ಅನ್ನೋದು ಕತೆಯ ಸಾರಾಂಶ. ಚಿತ್ರದ ಮೊದಲ ಭಾಗ ಖುಷಿ ಖುಷಿಯಿಂದಲೇ ಅನಾವರಣಗೊಂಡರೆ, ವಿರಾಮದ ನಂತರ ಥ್ರಿಲ್ಲರ್‌ ನೆರಳಿಗೆ ಕತೆ ಪ್ರವೇಶ ಆಗುತ್ತದೆ. ಅಲ್ಲಿಂದ ನಾಯಕ, ಪೊಲೀಸ್‌ ಹಾಗೂ ಕ್ರಿಮಿನಲ್‌ಗಳ ಆಟ ಶುರುವಾಗುತ್ತದೆ. 

Harikathe Alla Girikathe Film Review: ನವಿಲುಗರಿಯಂತಿರುವ ನವಿರಾದ ಸಿನಿಮಾ

ಇದು ಹೇಗೆ ಕೊನೆ ಆಗುತ್ತದೆ ಎಂಬುದನ್ನು ಸಿನಿಮಾ ನೋಡಬೇಕು. ಏನೇ ಆದರೂ ‘ಸ್ನೇಹಕ್ಕೆ ಸಾವಿಲ್ಲ’ ಎಂಬುದನ್ನು ಈ ಚಿತ್ರ ಸಾಬೀತು ಮಾಡುತ್ತದೆ. ನಾಯಕನಾಗಿ ಕಿರಣ್‌ ರಾಜ್‌ ಅವರು ಡ್ಯಾನ್ಸ್‌ ಫೈಟ್‌ನಲ್ಲಿ ಸೂಪರ್‌. ಜ್ಯೂಡಾ ಸ್ಯಾಂಡಿ ಹಿನ್ನೆಲೆ ಸಂಗೀತ ನಾಯಕನ ಪಾತ್ರವನ್ನು ಮತ್ತಷ್ಟುಲಿಫ್ಟ್‌ ಮಾಡುತ್ತದೆ. ಗೋಪಾಲಕೃಷ್ಣ ದೇಶಪಾಂಡೆ ಅವರ ಪಾತ್ರ ಚಿತ್ರ ಮುಗಿದ ಮೇಲೂ ನೆನಪಿನಲ್ಲಿ ಉಳಿಯುತ್ತದೆ. ಒಮ್ಮೆ ನೋಡಲು ಅಡ್ಡಿ ಇಲ್ಲದ ಚಿತ್ರವನ್ನು ಭಾರತಿ ಶೆಟ್ಟಿ ನಿರ್ಮಿಸಿದ್ದಾರೆ.

click me!