ಈ ಸಿನಿಮಾದ ನಾಯಕಿ ಜೀವಿತಾ. ಅವಳ ಪತಿ ರಾಘವೇಂದ್ರ. ಮಕ್ಕಳಿಲ್ಲದ ಈ ದಂಪತಿ ಅನ್ಯೋನ್ಯತೆಯಿಂದ ನೆಮ್ಮದಿಯ ಬಾಳ್ವೆ ಮಾಡುತ್ತಿರುವಾಗ ಅಪಘಾತ ಬರಸಿಡಿಲಿನಂತೆ ಬಂದೆರಗುತ್ತದೆ.
ಪ್ರಿಯಾ ಕೆರ್ವಾಶೆ
ಸ್ವಯಂ ಪ್ರಜ್ವಲಿಸುವ ಬೆಳಕಿನಂತೆ ತಾನೂ ಬೆಳಗುತ್ತಾ, ಆ ಬೆಳಕಲ್ಲಿ ಇತರರನ್ನೂ ಪೊರೆಯುವ ಹೆಣ್ಣು ಮಗಳ ಕತೆಯೇ ರಾಜಿ. 80ರ ದಶಕದಲ್ಲಿ ಕಾದಂಬರಿ ಆಧರಿತ ಚಿತ್ರಗಳೇ ಹೆಚ್ಚಾಗಿದ್ದವು. ಆದರೆ ಈಗ ಅಂಥಾ ಚಿತ್ರಗಳು ಬಲು ಅಪರೂಪ. ಈ ಹಿನ್ನೆಲೆಯಲ್ಲಿ ನೋಡಿದರೆ ಈ ಸಿನಿಮಾವೂ ಈ ಕಾಲದ ಇತರ ಚಿತ್ರಗಳಿಗಿಂತ ಭಿನ್ನವಾಗಿದೆ. ಹೆಣ್ಣುಮಗಳ ಒಳ್ಳೆಯತನ, ಅವಮಾನ, ನೋವನ್ನು ಸಹಿಸಿ ನಗುವ ಸ್ವಭಾವಕ್ಕೆ ಚಿತ್ರ ಕನ್ನಡಿ ಹಿಡಿಯುತ್ತದೆ. ಅವಳ ಬೆಂಬಲ ಜೊತೆಗಿದ್ದರೆ ವೈದ್ಯರು ಕೈಚೆಲ್ಲಿದ ಸಮಸ್ಯೆಗಳೂ ಸರಿಹೋಗಬಹುದು ಅನ್ನುವುದನ್ನು ಈ ಸಿನಿಮಾ ಹೇಳುತ್ತದೆ.
ಈ ಸಿನಿಮಾದ ನಾಯಕಿ ಜೀವಿತಾ. ಅವಳ ಪತಿ ರಾಘವೇಂದ್ರ. ಮಕ್ಕಳಿಲ್ಲದ ಈ ದಂಪತಿ ಅನ್ಯೋನ್ಯತೆಯಿಂದ ನೆಮ್ಮದಿಯ ಬಾಳ್ವೆ ಮಾಡುತ್ತಿರುವಾಗ ಅಪಘಾತ ಬರಸಿಡಿಲಿನಂತೆ ಬಂದೆರಗುತ್ತದೆ. ಸ್ನೇಹಿತರ ಜೊತೆಗೆ ಪಾರ್ಟಿಗೆ ಅಂತ ಹೋಗುವ ರಾಘಣ್ಣ ವಾಪಾಸ್ ಬರುವಾಗ ಆದ ಅಪಘಾತದಲ್ಲಿ ಅವರು ಜೀವನಪರ್ಯಂತ ಮಲಗಿದಲ್ಲಿಯೇ ಇರುವ ಪರಿಸ್ಥಿತಿ ಬರುತ್ತದೆ. ಮನೆಯಲ್ಲಿ ದುಡಿಯುವ ವ್ಯಕ್ತಿ ಅವರೊಬ್ಬರೇ ಆದ ಕಾರಣ ಬದುಕು ಬಲು ಕಷ್ಟವಾಗುತ್ತದೆ. ಈ ಹಂತದಲ್ಲಿ ಜೀವಿತಾ ಮನೆಯನ್ನು, ಪತಿಯ ಚಿಕಿತ್ಸೆಯನ್ನು ನಿಭಾಯಿಸಿ, ಅವಮಾನ, ನೋವನ್ನು ನುಂಗಿ ಹೇಗೆ ರಾಘಣ್ಣನ ಬದುಕಿಗೆ ಬೆಳಕಾಗುತ್ತಾಳೆ ಎನ್ನುವುದು ಚಿತ್ರದ ಕತೆ.
ಚಿತ್ರ: ರಾಜಿ
ತಾರಾಗಣ: ಪ್ರೀತಿ ಎಸ್ ಬಾಬು, ರಾಘವೇಂದ್ರ ರಾಜ್‌ಕುಮಾರ್
ನಿರ್ದೇಶನ: ಪ್ರೀತಿ ಎಸ್ ಬಾಬು
ರೇಟಿಂಗ್: 3
ಕಿರುಚಿತ್ರದಲ್ಲಿ ಹೇಳಬಹುದಾದ್ದನ್ನು ಫೀಚರ್ ಫಿಲಂ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸಿದರೂ, ಇದರಲ್ಲಿ ಎಚ್‌ಎಸ್‌ವಿ ಅವರು ಬರೆದ ಹಾಡುಗಳು ಏಕತಾನತೆ ನೀಗುತ್ತವೆ. ಉಪಾಸನಾ ಮೋಹನ್ ಸಂಯೋಜನೆಯ ಹಾಡುಗಳು ಚಿತ್ರಗೀತೆಗಿಂತ ಭಾವಗೀತೆ ಅಂತಲೇ ಅನಿಸಿದರೂ ಅದು ಕತೆಯಿಂದ ಭಿನ್ನವಾಗಿಯೇನೂ ನಿಲ್ಲುವುದಿಲ್ಲ. ಇಂಪಾಗಿ ಕತೆಗೆ ಪೂರಕವಾಗಿ ಬರುತ್ತದೆ. ಪ್ರೀತಿ ಅವರದು ಅಚ್ಚುಕಟ್ಟಾದ ಲವಲವಿಕೆಯ ಅಭಿನಯ. ಕೆಲವೊಂದು ಕೊಂಚ ಅತಿಯಾಯಿತೇನೋ ಅಂತನಿಸುತ್ತದೆ. ಆದರೆ ರಾಘಣ್ಣ ಅವರ ನಟನೆಯಲ್ಲಿ ಮಾತುಗಳೇ ಪ್ರಧಾನವಾದಾಗ ಇವರ ಭಾವ ಪ್ರಧಾನತೆ ಹೆಚ್ಚು ಕಿರಿಕಿರಿ ತರಿಸುವುದಿಲ್ಲ. ನಿರ್ದೇಶಕಿಯಾಗಿ ಇದು ಪ್ರೀತಿ ಅವರಿಗೆ ಮೊದಲ ಸಿನಿಮಾವಾದ ಕಾರಣ ಅವರು ಪಕ್ವತೆಯೆಡೆಗೆ ಸಾಗಬಹುದು ಎಂಬ ಆಶಾವಾದ ಈ ಚಿತ್ರದಲ್ಲಿ ಸಿಗುತ್ತದೆ.
Home Minister Film Review: ಸಣ್ಣ ಕುಟುಂಬದ ಕಥೆ ವ್ಯಥೆ
ನಾನು ಇಪ್ಪತ್ತೈದು ವರ್ಷಗಳಿಂದ ಪೋಷಕ ಕಲಾವಿದೆಯಾಗಿ ಚಿತ್ರರಂಗದಲ್ಲಿದ್ದೀನಿ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೀನಿ. ರಾಘಣ್ಣ ಅವರೊಂದಿಗೆ ಮುಖ್ಯಪಾತ್ರದಲ್ಲೂ ನಟಿಸಿದ್ದೀನಿ. ಪಿ.ವಿ.ಆರ್ ಸ್ವಾಮಿ ಅವರ ಮೂಲಕ ರಾಘಣ್ಣ ಅವರ ಪರಿಚಯವಾಯಿತು. ಮೊದಲು ಅವರ ಬಳಿ ಕಥೆ ಹೇಳಲು ಭಯವಾಯಿತು. ನಂತರ ಅವರ ಮಾತಿನ ಶೈಲಿ ನೋಡಿ ಭಯವೆಲ್ಲಾ ದೂರವಾಯಿತು. ಅವರ ಮೇಲಿನ ಗೌರವ ಇಮ್ಮಡಿಯಾಯಿತು. ಅಂತಹ ಸರಳ ವ್ಯಕ್ತಿ ನಮ್ಮ ರಾಘಣ್ಣ. ದಾಂಪತ್ಯದ ಮಹತ್ವ ಸಾರುವ ಕಥೆ ಇದು. 'ರಾಜಿ' ಅಂದರೆ ರಾ ಎಂದರೆ ರಾಘವೇಂದ್ರ ರಾಜಕುಮಾರ್, ಜಿ ಎಂದರೆ ಜೀವಿತ ಎಂದು. ಬಸವರಾಜು ಮೈಸೂರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಏಳು ಹಾಡುಗಳಿದೆ. ಎಲ್ಲಾ ಹಾಡುಗಳನ್ನು ಡಾ. ಹೆಚ್ ಎಸ್ ವೆಂಕಟೇಶ್ ಮೂರ್ತಿ ಅವರೆ ಬರೆದಿದ್ದಾರೆ.