ಚಿತ್ರ ವಿಮರ್ಶೆ: ಲಡ್ಡು

By Kannadaprabha News  |  First Published Jan 23, 2021, 9:10 AM IST

ಒಂದು ಹುಡುಗಿ, ನಾಲ್ಕು ಜನ ಹುಡುಗರು, ಅವರ ಹಿಂದೆ ಮತ್ತಿಬ್ಬರು, ಜೊತೆಗೆ ಪೊಲೀಸ್‌, ಕೋಟ್ಯಂತರ ಬೆಲೆಯ ಹರಳಿರುವ ಗಣೇಶ ಕಿರೀಟದ ಸುತ್ತ ಇವರೆಲ್ಲರ ರೇಸ್‌. ಮಹಾ ಕಿಲಾಡಿ ಗಣೇಶ ಇವ್ರಿಗೆ ಹೇಗೆಲ್ಲ ಲಡ್ಡು ತಿನ್ನಿಸ್ತಾನೆ ಅನ್ನೋದು ‘ಲಡ್ಡು’ ಕತೆಯ ವನ್‌ಲೈನ್‌. 


ಪ್ರಿಯಾ ಕೆರ್ವಾಶೆ

ಇಡೀ ಕಥೆಯನ್ನು ಗಣೇಶನ ವಾಹನ ಮೂಷ್‌ ಅರ್ಥಾತ್‌ ಮೂಷಿಕ ವಾಹನ ಬಹಳ ಡೀಟೈಲಾಗಿ ಎರಡೂವರೆ ಗಂಟೆ ಕಾಲ ಈ ಕಥೆ ಹೇಳ್ತಾನೆ. ಈ ಮೂಷ್‌ಗೆ ನಾಲ್ಕು ಮತ್ತೊಂದು ಕಿಲಾಡಿ ಹುಡುಗ್ರನ್ನು ಕಂಡರೆ ಅದೇನ್‌ ವ್ಯಾಮೋಹವೋ ಗೊತ್ತಿಲ್ಲ. ಫಸ್ಟ್‌ ಹಾಫ್‌ನಲ್ಲಿ ಅದ್ಯಾವ ಲೆವೆಲ್‌ಗೆ ಇವರ ಕತೆ ಹೇಳ್ತಾನೆ ಅಂದ್ರೆ ನೀವು ಅತ್ತಿತ್ತ ನೋಡಿ, ಆಕಳಿಸಿ, ಸಣ್ಣ ನಿದ್ದೆ ತೆಗೆದು ಸ್ಕ್ರೀನ್‌ ನೋಡಿದರೂ ಕತೆ ಅಲ್ಲೇ ಇರುತ್ತದೆ.

Tap to resize

Latest Videos

ತಾರಾಗಣ: ಪವಿತ್ರಾ ನಾಯಕ್‌, ಬಿಂದುಶ್ರೀ, ಹರ್ಷಿತ್‌, ನವೀನ್‌, ಸಮೀರ್‌, ಮಧು, ವಿಶಾಲ…

ನಿರ್ದೇಶನ: ರಮಾನಂದ ಆರ್‌

ಛಾಯಾಗ್ರಹಣ: ಪುರುಷೋತ್ತಮ್‌

ನಿರ್ಮಾಣ: ಮೇಘನಾ ವಿ.

ಮಲೆನಾಡಿನ ಚಿಕ್ಕ ಊರು, ಅಲ್ಲಿರುವ ಐವರು ಪಡ್ಡೆ ಹೈಕಳು. ಆ ಊರಿಗೆ ಹೊಸದಾಗಿ ಬರೋ ಹುಡುಗಿ ಸನಾಳನ್ನು ಪಟಾಯಿಸೋಕೆ ಅವರ ಪ್ಲಾನ್‌. ಅವ್ರು ಒಬ್ಬೊಬ್ಬರಾಗಿ ಹಾರ್ಟ್‌ಶೇಪ್‌ ಕನ್ನಡಕ ತೊಟ್ಟು ಹುಡುಗಿಗಾಗಿ ಏನೆಲ್ಲ ಸರ್ಕಸ್‌ ಮಾಡಿದ್ರು ಅನ್ನೋದ್ರಲ್ಲಿ ಫಸ್ಟ್‌ ಹಾಫ್‌ ಮುಗಿಯುತ್ತೆ. ಕೊನೆಗೂ ಹುಡುಗಿ ಒಬ್ಬನ್ನ ಒಪ್ಕೊಂಡ್ಲು ಅನ್ನುವಾಗ ಸ್ಟೋರಿಲಿ ಟ್ವಿಸ್ಟ್‌. ಸೆಕೆಂಡ್‌ ಹಾಫ್‌ ಫುಲ್‌ ಟ್ವಿಸ್ಟ್‌ ಗಳ ಮೇಲೆ ಟ್ವಿಸ್ಟ್‌. ಅಲ್ಲಲ್ಲಿ ಕಾಮಿಡಿ, ಕೆಲವೆಡೆ ಸಸ್ಪೆನ್ಸ್‌. ಇಲ್ಲಿ ಪಡ್ಡೆಗಳಲ್ಲೊಬ್ಬ ಧನುವಿಗೆ ಹಂಬಲಿಸೋ ಪ್ರಾಮಾಣಿಕ ಹುಡುಗಿಯಾಗಿ ಬಿಂದುಶ್ರೀ ಕಾಣಿಸಿಕೊಂಡಿದ್ದಾರೆ. ಹೊಸ ಹುಡುಗಿಗೆ ಕಾಳು ಹಾಕೋ ಧನು ಈಕೆಯನ್ನ ಒಪ್ಕೋತಾನಾ, ಕೊನೆಗೂ ಕಿರೀಟ ಯಾರ ಕೈ ಸೇರುತ್ತೆ ಅನ್ನೋದು ಸಸ್ಪೆನ್ಸ್‌.

ಚಿತ್ರ ವಿಮರ್ಶೆ: ಅಮೃತವಾಹಿನಿ 

ಪವಿತ್ರಾ ನಾಯಕ್‌ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಬಿಂದುಶ್ರೀ ಅಭಿನಯವೂ ಚೆನ್ನಾಗಿದೆ. ಐವರು ಪಡ್ಡೆಗಳು ಶುರುವಲ್ಲಿ ಕೊಂಚ ಡೌನ್‌ ಆದ್ರು ಅನಿಸಿದ್ರೂ ಸೆಕೆಂಡ್‌ ಹಾಫ್‌ನಲ್ಲಿ ಪಿಕ್‌ಅಪ್‌ ಆಗ್ತಾರೆ. ನಿರ್ದೇಶಕ ರಮಾನಂದ ಆರ್‌ ಚಿತ್ರದ ವೇಗವನ್ನು ಬ್ಯಾಲೆನ್ಸ್‌ ಮಾಡಿದ್ದರೆ ಚೆನ್ನಾಗಿತ್ತು. ಚಿತ್ರದಲ್ಲಿರುವ ಮೂರು ಹಾಡುಗಳಲ್ಲಿ ಎರಡು ಹಾಡು, ಸಿನಿಮಟೋಗ್ರಫಿ ಚೆನ್ನಾಗಿದೆ.

click me!