
ಆರ್. ಕೇಶವಮೂರ್ತಿ
ಹೆಸರಿನಲ್ಲಿ ಗ್ಯಾಂಗ್ ಇದ್ದ ಮಾತ್ರಕ್ಕೆ ಗ್ಯಾಂಗ್ ಸ್ಟೋರಿ ಆಗಲ್ಲ. ಇದು ಕಾಲೇಜು ಕತೆ. ಪ್ರೀತಿ, ಪ್ರೇಮ ಮತ್ತು ಸ್ನೇಹ, ಇದರ ನಡುವೆ ಒಂದು ಸಣ್ಣ ಟ್ವಿಸ್ಟ್. ಈ ತಿರುವಿನಿಂದಲೇ ಸಿನಿಮಾ ಕೊನೆಯ ತನಕ ಸಾಗುತ್ತದೆ ಎನ್ನುವಲ್ಲಿಗೆ ‘ಗಜಾನನ ಆಂಡ್ ಗ್ಯಾಂಗ್’ ಸಿನಿಮಾ ಮುಕ್ತಾಯ ಆಗುತ್ತದೆ. ನಟರಾಗಿ ತಮ್ಮನ್ನು ಸಾಬೀತು ಮಾಡಿಕೊಂಡಿರುವ ಅಭಿಷೇಕ್ ಶೆಟ್ಟಿ ಮೊದಲ ಬಾರಿಗೆ ನಟನೆ ಜತೆಗೆ ನಿರ್ದೇಶನ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಕಾಲೇಜು ಕಾರಿಡಾರ್ ಕತೆಗೆ ಕೈ ಹಾಕಿದ್ದು, ಸ್ನೇಹ ಮತ್ತು ಭಾವುಕತೆ ಈ ಎರಡೂ ಪಿಲ್ಲರ್‌ಗಳ ನೆರಳಿನಲ್ಲಿ ತಮ್ಮ ಕತೆಯನ್ನು ಹೇಳ ಹೊರಡುತ್ತಾರೆ. ಆ ಮೂಲಕ ತುಂಬಾ ದಿನಗಳ ನಂತರ ಕಾಲೇಜು- ಯುವ ಮನಸ್ಸುಗಳ ಕತೆಯನ್ನು ಈ ಸಿನಿಮಾ ಪ್ರೇಕ್ಷಕರ ಮುಂದಿಟ್ಟಿದೆ.
ಕಾಲೇಜು ಹುಡುಗರ ಕತೆ ಎಂದ ಮೇಲೆ ಏನೆಲ್ಲ ಇರಬೇಕೋ ಅದೆಲ್ಲವನ್ನೂ ನಿರ್ದೇಶಕರು ಅಲ್ಲಲ್ಲಿ ಜೋಡಿಸಿ ಹೇಳಿದ್ದಾರೆ. ಪೋಷಕರ ಕನಸುಗಳು, ಮಕ್ಕಳ ತರಲೆ- ತಾಪತ್ರೆಯಗಳು, ಸ್ನೇಹ-ಪ್ರೀತಿ, ರೌಡಿಗಳ ಎಂಟ್ರಿ, ಪ್ರಾಂಶುಪಾಲರಿಂದ ಶಿಕ್ಷೆ... ಇತ್ಯಾದಿ ಅಂಶಗಳ ಜತೆಗೆ ಸ್ನೇಹಿತರಲ್ಲೇ ಮೋಸ ಮಾಡುವ ಗುಣ ಇದ್ದರೆ ಏನಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ನೋಡಬಹುದು. ಅವರು ಐದು ಮಂದಿ ಸ್ನೇಹಿತರು. ಎಲ್ಲರಿಗೂ ಒಬ್ಬೊಬ್ಬ ಹುಡುಗಿ ಜತೆ ಪ್ರೀತಿ- ಸ್ನೇಹ ಇದೆ. ಆದರೆ, ಒಬ್ಬೊಬ್ಬರಿಗೆ ಒಂದೊಂದು ದಿನ ಪ್ರೀತಿ ಬ್ರೇಕ್ ಅಪ್ ಆಗುತ್ತಾ ಹೋಗುತ್ತದೆ. ಪ್ರೀತಿಸಿದವರು ದೂರ ಆಗುತ್ತಾರೆ. ಇದೆಲ್ಲದಕ್ಕೂ ಯಾರು ಕಾರಣ ಮತ್ತು ಯಾಕೆ ಎಂಬುದು ಚಿತ್ರದ ಕತೆ.
ಚಿತ್ರ: ಗಜಾನನ ಆಂಡ್ ಗ್ಯಾಂಗ್
ತಾರಾಗಣ: ಶ್ರೀಮಹದೇವ್, ಅದಿತಿ ಪ್ರಭುದೇವ, ಅಭಿಷೇಕ್ ಶೆಟ್ಟಿ, ವಿಜಯ್ ಚೆಂಡೂರ್, ರಘು ಗೌಡ, ಚೇತನ್ ದುರ್ಗ, ನ್ಯಾಟ್ಯರಂಗ, ಅಶ್ವಿನ್ ಹಾಸನ್, ಶಮಂತ್ ಬ್ರೋ ಗೌಡ.
ನಿರ್ದೇಶನ: ಅಭಿಷೇಕ್ ಶೆಟ್ಟಿ
ರೇಟಿಂಗ್: 3
ಚಿತ್ರದ ಮೊದಲರ್ಧ ತರಲೆ, ತಂಟೆಗಳಿಂದ ಕತೆ ಮುಗಿದರೆ, ವಿರಾಮದ ನಂತರ ಆ್ಯಕ್ಷನ್ ಜತೆಯಾಗುತ್ತದೆ. ದೂರವಾದ ಪ್ರೀತಿಯನ್ನು ಮತ್ತೆ ಸೇರಿಸಿಕೊಳ್ಳುವ ಎಮೋಷನಲ್ ತಿರುವುಗಳು ಜತೆಗೂಡುತ್ತದೆ. ಅಷ್ಟೊತ್ತಿಗೆ ಅನಾಹುತ ನಡೆದು ಹೋಗಿರುತ್ತದೆ. ಕಾಲೇಜು ಕಾರಿಡಾರ್ ಪ್ರೀತಿಯಲ್ಲಿ ಹುಳಿ ಹಿಂಡುವ ಪಾತ್ರ ಮತ್ತಷ್ಟು ಸಸ್ಪೆನ್ಸ್‌ನಿಂದ ಕೂಡಿರಬೇಕಿತ್ತು. ಇಡೀ ಕತೆ ಕಾಲೇಜು ಆವರಣಕ್ಕೆ ಸೀಮಿತ ಆಗಿರುವುದು ಚಿತ್ರದ ಮೈನಸ್ ಪಾಯಿಂಟ್. ಇದರ ನಡುವೆಯೂ ಕತೆ ತೀರಾ ಸರಳವಾಗಿದೆ. ಅದ್ಭುತ ಮೇಕಿಂಗ್, ಅದ್ದೂರಿ ವೆಚ್ಚದ ಚಿತ್ರ ಎಂದು ನಿರೀಕ್ಷೆ ಮಾಡದೆ ನೋಡಬೇಕು. ಅಭಿಷೇಕ್ ಶೆಟ್ಟಿ ನಿರ್ದೇಶನವನ್ನು ಗಂಭೀರವಾಗಿ ಆಯ್ಕೆ ಮಾಡಿಕೊಳ್ಳಬಹುದು.
Kaneyadavara Bagge Prakatane Film Review: ಹಿರಿಯರ ಬದುಕಿನ ಉಲ್ಲಾಸಪೂರ್ಣ ಚಿತ್ರ
ಪಕ್ಕಾ ಹಾಸ್ಯ ಪ್ರಧಾನ ಮತ್ತು ಯುವಪೀಳಿಗೆ ಸುತ್ತ ಗಿರಕಿ ಹೊಡೆಯುವ ಕಥೆ 'ಗಜಾನನ ಅಂಡ್ ಗ್ಯಾಂಗ್' ಚಿತ್ರದಲ್ಲಿದ್ದು, ಚಿತ್ರದ ನಿರ್ದೇಶಕ ಅಭಿಷೇಕ್ ಚಿತ್ರದ ಪ್ರಮುಖ ಘಟ್ಟದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಇರುತ್ತದೆ. ಕ್ಯೂಟ್, ಚಾಕಲೇಟ್ ಹೀರೋ, ಲವ್ವರ್ ಬಾಯ್ ಇಮೇಜ್‌ಗಿಂತ ವಿಭಿನ್ನವಾದ ಪಾತ್ರವಿದು. ನಾನಲ್ಲದಿರುವ ಪಾತ್ರವಿದು, ಎರಡು ಕಾಲಘಟ್ಟದಲ್ಲಿ ಕಥೆ ನಡೆಯುತ್ತದೆ. ನಾನು ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಗಜ ಎಂಬುದು ನನ್ನ ಪಾತ್ರದ ಹೆಸರು ಎಂದು ಶ್ರೀ ಮಹದೇವ್ ಹೇಳಿದ್ದಾರೆ. ವಿಜೆಟ್ ಚಂದ್ರ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.