ಭಯ್ ಪುನೀತ್, ರೋಹಿತ್, ರಕ್ಷಕ್, ಸೋನಾಲ್ ಮೊಂತೆರೋ, ಜೋಗಿ ನಾಗರಾಜ್, ಶಶಿಕುಮಾರ್ ಅಭಿನಯಿಸಿರುವ ಸಿನಿಮಾ ಬಿಡುಗಡೆಯಾಗಿದೆ.
ಆರ್ ಕೇಶವಮೂರ್ತಿ
ಇಷ್ಟಕ್ಕೂ ಕತೆ ಏನು...
‘ಶಂಭೋ ಶಿವ ಶಂಕರ’ ಸಿನಿಮಾ ನೋಡಿ ಮುಗಿದ ಮೇಲೂ ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಂಡರೆ ಅದು ಉಪೇಂದ್ರ ಅವರ ಹುಳ ಬಿಡೋ ಚಿತ್ರದಂತೆ ಅಂದುಕೊಳ್ಳಬೇಡಿ.ಜೈಲಿನಿಂದ ಬರುವ ಮೂವರು ಹುಡುಗರು. ಇವರಲ್ಲಿ ಒಬ್ಬನಿಗೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಆ ಪ್ರೀತಿ ತನ್ನದಲ್ಲ ಎಂದು ಗೊತ್ತಾಗಿ ಹೂವು ಎಲ್ಲಾದರೂ ಚೆನ್ನಾಗಿರಲಿ ಎಂದು ಮಾಜಿ ಪ್ರೇಯಸಿಗೆ ನೆರವಾಗಲು ಹೋಗಿ ಒಂದು ಕೊಲೆಗೆ ಕಾರಣವಾಗುತ್ತಾರೆ ಈ ಮೂವರು. ಹೀಗೆ ಕೊಲೆಯಾದವನು ತನ್ನ ಮಾಜಿ ಪ್ರಿಯತಮೆಯನ್ನು ಕೈ ಹಿಡಿಯಬೇಕಾದವನು ಎಂದು ಗೊತ್ತಾಗುತ್ತದೆ.
ತಾರಾಗಣ: ಅಭಯ್ ಪುನೀತ್, ರೋಹಿತ್, ರಕ್ಷಕ್, ಸೋನಾಲ್ ಮೊಂತೆರೋ, ಜೋಗಿ ನಾಗರಾಜ್, ಶಶಿಕುಮಾರ್
ನಿರ್ದೇಶನ: ಶಂಕರ್ ಕೋಮನಹಳ್ಳಿ
MODALA MIDITHA REVIEW: ಮೊದಲ ಮಿಡಿತಕ್ಕೆ ಪ್ರೇಕ್ಷಕ ಸ್ತಂಭೀಭೂತ
ರೇಟಿಂಗ್: 2
ಹೀಗೆ ಎಲ್ಲಿ ಆರಂಭವಾಗುತ್ತದೋ ಅಲ್ಲೇ ಮುಗಿಯುವ ಚಿತ್ರದ ಕತೆಗೆ ಗುರಿ ಮತ್ತು ಉದ್ದೇಶ ಇಲ್ಲ. ಈಗಾಗಲೇ ನೂರಾರು ಸಿನಿಮಾಗಳಲ್ಲಿ ಸಾವಿರಾರು ಬಾರಿ ನೋಡಿರುವ ದೃಶ್ಯಗಳ ಮರು ಜೋಡಣೆ, ಕಳಪೆ ಚಿತ್ರಕತೆ, ನೆನಪಿನಲ್ಲಿ ಉಳಿಯದ ಸಂಭಾಷಣೆಗಳು, ಯಾವುದೋ ಕಾರಣಕ್ಕೆ ದಾರಿ ತಪ್ಪಿದವರೇ ಸಮಾಜ ಸುಧಾರಕರಂತೆ ಬಿಂಬಿಸುವ ಓಬಿರಾಯನ ಕಾಲದ ಆಲೋಚನೆ ಮೇಲೆ ‘ಶಂಭೋ ಶಿವ ಶಂಕರ’ ಚಿತ್ರವನ್ನು ಜೋಡಿಸಿದ್ದಾರೆ ನಿರ್ದೇಶಕ ಶಂಕರ್ ಕೋಮನಹಳ್ಳಿ.