
ಆರ್ ಕೆ
ಈ ಚಿತ್ರದ ಪೂರ್ತಿ ಹೆಸರು ‘ಕರ್ಕಿ ನಾನು ಬಿಎ ಎಲ್‌ಎಲ್‌ಬಿ’. ಇಂಥ ಚಿತ್ರಗಳು ಪ್ರೇಕ್ಷಕರ ಮನಸ್ಸುಗಳಿಗೆ ಇನ್ನಷ್ಟು ಹತ್ತಿರವಾಗುವಂತೆ ರೂಪುಗೊಳ್ಳಲಿ ಎನಿಸುವುದು ಕತೆಯ ಕಾರಣಕ್ಕೆ. ತಮಿಳಿನಲ್ಲಿ ಮಾರಿ ಸೆಲ್ವರಾಜ ನಿರ್ದೇಶಿದ್ದ ‘ಪರಿಯೇರುಂ ಪೆರುಮಾಳ್’ ಚಿತ್ರವನ್ನು ಬಹುತೇಕರು ನೋಡಿದ್ದಾರೆ. ಅದರ ಪಡಿಯಚ್ಚು ಈ ‘ಕರ್ಕಿ’. ಪ್ರೀತಿ, ಎಲ್ಲಾ ಬೇಲಿ ಮತ್ತು ಗಡಿ ರೇಖೆಗಳನ್ನು ಮೀರಿದ್ದು ಎನ್ನುತ್ತಾರೆ.
ಆದರೂ ಅದಕ್ಕೆ ಜಾತಿ, ಮೇಲು-ಕೀಳು ಎನ್ನುವ ಮೈಲಿಗೆ ಗಾಢವಾಗಿ ಅವರಿಸಿಕೊಂಡಿದೆ. ಜಾತಿ, ಸಾಮಾಜಿಕ ಅವಮಾನ, ಮೇಲು-ಕೀಳು ಎನ್ನುವ ಮೈಲಿಗೆಗೆ ಕನ್ನಡಿ ಹಿಡಿಯುವ ಬೆರಳೆಣಿಕೆಯ ಚಿತ್ರಗಳ ಸಾಲಿಗೆ ‘ಕರ್ಕಿ’ ಸೇರುತ್ತದೆ. ಮೂಲ ಚಿತ್ರದಂತೆಯೇ ‘ಕರ್ಕಿ’ ಕಾಡುತ್ತದೆಯೇ ಎಂದರೆ ಉತ್ತರಿಸುವುದು ಕಷ್ಟ. ಅಲ್ಲಿನ ಗಾಢ ಅನುಭವಗಳು, ಭಾವನೆಗಳು, ಸಂಭಾಷಣೆಗಳಲ್ಲಿ ಹೇಳಲಾಗದ್ದನ್ನು ಒಂದು ನೋಟದಲ್ಲಿ ಹೇಳುವ, ಸಣ್ಣ ದೃಶ್ಯದಲ್ಲಿ ತಲುಪಿಸುವ, ಕಪ್ಪು ನಾಯಿ, ಚಿತ್ರದ ಕೊನೆಯಲ್ಲಿ ಬರುವ ಕಾಫಿ ಗ್ಲಾಸಿನ ದೃಶ್ಯ ಮೂಲ ಚಿತ್ರದಂತೆ ಇಲ್ಲಿ ಪ್ರಭಾವಿಸಲ್ಲ.
ಯಾಕೆಂದರೆ ಅದು ಮಾರಿ ಸೆಲ್ವರಾಜ ಅವರ ಅನುಭವ. ಆದರೂ ಪವಿತ್ರನ್ ನಿರ್ದೇಶನದ ‘ಕರ್ಕಿ’ ಕತೆಯ ಆಶಯದ ಕಾರಣಕ್ಕೆ ನೋಡಬಹುದಾದ ಸಿನಿಮಾ. ಜೆಪಿ, ಬಲರಾಜವಾಡಿ ನಟನೆ ಮನಸ್ಸಿನಲ್ಲಿ ಉಳಿಯುತ್ತದೆ. ಸಾಧು ಕೋಕಿಲಾ ಸಾಧ್ಯವಾದಷ್ಟು ನಗಿಸುತ್ತಾರೆ. ಯತಿರಾಜ್, ಸ್ವಾತಿ ಪಾತ್ರಗಳು ಕತೆಗೆ ಪೂರಕ.
ಚಿತ್ರ: ಕರ್ಕಿ
ತಾರಾಗಣ: ಜೆಪಿ, ಮೀನಾಕ್ಷಿ, ಬಲರಾಜವಾಡಿ, ಸಾಧು ಕೋಕಿಲ, ಮಿಮಿಕ್ರಿ ಗೋಪಿ, ಯತಿರಾಜ್, ಸ್ವಾತಿ
ನಿರ್ದೇಶನ: ಪವಿತ್ರನ್
ಪದವಿ ಕಲಿಯುವ ಆಸೆ ಇರುವ ತರುಣನ ಕತೆ ಕರ್ಕಿ: ‘ಕರ್ಕಿ’ ಸಿನಿಮಾ ತಮಿಳಿನ ಪವಿತ್ರನ್ ನಿರ್ದೇಶನ, ಪ್ರಕಾಶ್ ಪಳನಿ ನಿರ್ಮಾಣದ ಚಿತ್ರವಿದು. ಜಯಪ್ರಕಾಶ್ ಹಾಗೂ ಮೀನಾಕ್ಷಿ ಚಿತ್ರದ ಜೋಡಿ. ಸಾಧು ಕೋಕಿಲ, ಬಾಲ ರಾಜವಾಡಿ, ಮಿಮಿಕ್ರಿ ಗೋಪಿ, ಯತಿರಾಜ್, ಸ್ವಾತಿ ಗುರುದತ್, ವಾಲೆ ಮಂಜುನಾಥ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಹೃಷಿಕೇಶ್ ಕ್ಯಾಮೆರಾ, ಕವಿರಾಜ್ ಸಾಹಿತ್ಯ ಚಿತ್ರಕ್ಕಿದೆ. ಶಿಕ್ಷಣ, ಜಾತಿ ವ್ಯವಸ್ಥೆ, ಪ್ರೀತಿ-ಪ್ರೇಮದ ಅಂಶಗಳ ಸುತ್ತಾ ಸಾಗುವ ರಿಯಾಲಿಸ್ಟಿಕ್ ಕತೆಯನ್ನು ಹೇಳುವ ಸಿನಿಮಾ ಇದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.