JugalBandi Review ಬದುಕಿನ ನೆರಳಲ್ಲಿ ಭಾವನೆಗಳ ಮೆರವಣಿಗೆ

By Kannadaprabha News  |  First Published Mar 2, 2024, 10:54 AM IST

ಮಾನಸಿ ಸುಧೀರ್‌, ಅಶ್ವಿನ್‌ರಾವ್‌ ಪಲ್ಲಕ್ಕಿ, ಯಶ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಸಂತೋಷ್‌ ಆಶ್ರಯ್‌, ಅರವಿಂದ್‌ ರಾವ್‌ ನಟನೆಯ ಸಿನಿಮಾ ರಿಲೀಸ್ ಆಗಿದೆ. 


ಆರ್‌.ಕೇಶವಮೂರ್ತಿ

ಮಕ್ಕಳಿಲ್ಲದ ಆಕೆಗೆ ‘ಅಮ್ಮ’ ಅನಿಸಿಕೊಳ್ಳಬೇಕು, ಸಿನಿಮಾ ಹೀರೋ ಆಗಬೇಕೆಂಬ ಕನಸು ಮತ್ತೊಬ್ಬನದು, ಮಧ್ಯಮ ವರ್ಗದ ಜೀವನದಿಂದ ಮುಕ್ತಗೊಳ್ಳುವ ಕನಸು ಮೂವರದ್ದು, ತನ್ನ ಸಾಕು ತಾಯಿಗೆ ಹುಟ್ಟುವ ಮಗುವಿಗೆ ಚಿಕಿತ್ಸೆ ನೀಡಲು ಹಣ ಜೋಡಿಸಲು ಹೊರಡುವ ಮಾತು ಬಾರದ, ಕಿವಿ ಕೇಳಿಸದ ಯುವಕ. ಇವರ ನಡುವೆ ಒಬ್ಬ ಶ್ರೀಮಂತ. ಹೀಗೆ ಸಮಾಜದ ಬೇರೆ ಬೇರೆ ಸ್ತರದ ಜನಗಳ ಪಯಣವನ್ನು ರೂಪಿಸುವ ‘ಜುಗಲ್‌ ಬಂದಿ’, ಬದುಕಿನ ದಾರಿಯಲ್ಲಿ ಭಾವನೆಗಳನ್ನೇ ಹೊತ್ತು ಸಾಗುವ ಚಿತ್ರದೋಣಿ.

Tap to resize

Latest Videos

undefined

ತಾರಾಗಣ: ಮಾನಸಿ ಸುಧೀರ್‌, ಅಶ್ವಿನ್‌ರಾವ್‌ ಪಲ್ಲಕ್ಕಿ, ಯಶ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಸಂತೋಷ್‌ ಆಶ್ರಯ್‌, ಅರವಿಂದ್‌ ರಾವ್‌

ನಿರ್ದೇಶನ: ದಿವಾಕರ್ ಡಿಂಡಿಮ

ರೇಟಿಂಗ್: 3

NAMO BHARATA REVIEW ದೇಶಭಕ್ತ ಸೈನಿಕನ ಜೀವನ ಪ್ರಯಾಣ

ಎಲ್ಲರೂ ಇಲ್ಲಿ ಬದುಕಬೇಕು. ಆ ಬದುಕಿಗೆ ದುಡ್ಡು ಬೇಕು. ಆ ಶ್ರೀಮಂತಿಕೆ ಎಲ್ಲಿದೆ ಕ್ರಿಸ್ಟಲ್‌ ಎನ್ನುವ ಡೈಮೆಂಡ್‌ನಷ್ಟೆ ಬೆಲೆಬಾಳುವ ವಸ್ತುವಿನಲ್ಲಿದೆ. ಅದರ ಸುತ್ತ ಎಲ್ಲರ ಶಿಕಾರಿ ಶುರುವಾಗುತ್ತದೆ. ಇದು ಯಾರಿಗೆ ದಕ್ಕುತ್ತದೆ, ಕೊನೆಗೆ ಏನಾಗುತ್ತದೆ ಎಂಬುದು ಚಿತ್ರದ ಕತೆ. ನಿರೀಕ್ಷೆಯೇ ಇಲ್ಲದ ತಿರುವುಗಳು, ಭಾವುಕ ಸನ್ನಿವೇಶಗಳು, ತಾಯಿಯ ವ್ಯಥೆ ಚಿತ್ರದ ಮುಖ್ಯ ಕೇಂದ್ರಬಿಂದುವಾಗಿ ಇಡೀ ಚಿತ್ರವನ್ನು ಮುಂದುವರೆಸುತ್ತದೆ.

ನಿರ್ದೇಶಕ ದಿವಾಕರ್‌ ಡಿಂಡಿಮ ಭಿನ್ನ ಕತೆಯನ್ನು ಆಯ್ಕೆ ಮಾಡಿಕೊಳ್ಳುವ ಜತೆಗೆ ಅದನ್ನು ಭಿನ್ನವಾಗಿಯೇ ರೂಪಿಸಿದ್ದಾರೆ. ಹೀಗಾಗಿ ಅವರು ಸ್ಟಾರ್‌ ನೆರಳು, ಎಲಿವೇಷನ್ನು, ಅದ್ದೂರಿ ಮೇಕಿಂಗ್‌ ಮೊರೆ ಹೋಗದೆ ಆಪ್ತ ನಿರೂಪಣೆಗೆ ಮಹತ್ವ ಕೊಟ್ಟಿದ್ದಾರೆ. ಪ್ರೇಕ್ಷಕ ಕೂಡ ಕತೆ ಹೊರತಾಗಿ ಬೇರೆ ಏನೂ ಬೇಕಿಲ್ಲ ಎಂದುಕೊಂಡು ಸಿನಿಮಾ ನೋಡಬಹುದು ಎನ್ನುವಷ್ಟು ಭರವಸೆ ತುಂಬಿದ್ದಾರೆ ನಿರ್ದೇಶಕರು.

Kreem Review ಕುತೂಹಲಕರ ವಿಷಾದಕರ ವಿಭಿನ್ನ ಕಥನ

ಸಿನಿಮಾ ಆಗಬೇಕೆಂಬ ಕನಸು ಕಾಣುವ ಯಶ್‌ ಶೆಟ್ಟಿ, ತಾಯಿ ಅನಿಸಿಕೊಳ್ಳಲು ಒದ್ದಾಡುವ ಮಾನಸಿ ಸುಧೀರ್‌, ಕಿವಿ ಕೇಳಿಸದ, ಮಾತು ಬಾರದ ಪಾತ್ರದಲ್ಲಿ ಸಂತೋಷ್‌ ಅಶ್ರಯ್‌, ಮಧ್ಯಮ ವರ್ಗದ ಹುಡುಗಿಯಾಗಿ ಅರ್ಚನಾ ಕೊಟ್ಟಿಗೆ... ಇವಿಷ್ಟು ಪಾತ್ರಗಳ ನಟನಾ ಕೌಶಲ್ಯ ನಿರ್ದೇಶಕನ ಕನಸಿಗೆ ಹೊಳಪು ತಂದಿದೆ. ಅದರಲ್ಲೂ ಮಾನಸಿ ಸುಧೀರ್‌ ಅವರ ನಟನೆ ಮಗುವಿನಷ್ಟೇ ಶುದ್ಧ, ಯಶ್‌ ಶೆಟ್ಟಿ ಅವರನ್ನು ಇದುವರೆಗೂ ನೋಡದ ಪಾತ್ರದಲ್ಲಿ ನೋಡುತ್ತೀರಿ.

click me!