ಜಗ್ಗೇಶ್, ಧನಂಜಯ, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾ ದತ್ ನಟನೆಯ ತೋತಾಪುರಿ 2 ಸಿನಿಮಾ ರಿಲೀಸ್ ಆಗಿದೆ...
ರಾಜೇಶ್ ಶೆಟ್ಟಿ
ಜಗ್ಗೇಶ್ ಪಾತ್ರದ ತಮಾಷೆ, ಧನಂಜಯ್ ಭಾವುಕತೆ, ಅದಿತಿ ಪ್ರಭುದೇವ ಪ್ರಬುದ್ಧತೆ, ಹೇಮ್ ದತ್ ಅಮಾಯಕತೆ, ಸುಮನ್ ರಂಗನಾಥ್ ಅಸಹಾಯಕತೆ, ವೀಣಾ ಸುಂದರ್ ಪ್ರಾಮಾಣಿಕತೆ ಎಲ್ಲವೂ ಮೇಳೈಸಿರುವ ಸಂದೇಶಾತ್ಮಕ, ಮನರಂಜನಾತ್ಮಕ ಸಿನಿಮಾ.
undefined
ವಿಷಾದವನ್ನು ತಮಾಷೆಯ ರ್‍ಯಾಪರ್‌ನಲ್ಲಿ ಕಟ್ಟಿಕೊಡುವ ತಂತ್ರವನ್ನು ಬಹಳಷ್ಟು ನಿರ್ದೇಶಕರು ಬಳಸುತ್ತಾರೆ. ಅದರಲ್ಲಿ ವಿಜಯಪ್ರಸಾದ್ ಚೇಷ್ಟೆ ಒಂದು ಕೈ ಜಾಸ್ತಿ. ಜಗ್ಗೇಶ್ ತಮ್ಮ ಟೈಮಿಂಗ್‌ನಿಂದಲೇ ಎಂಥಾ ಚೇಷ್ಟೆಯನ್ನೂ ಸರಿಹೊಂದಿಸುವ ಸಾಮರ್ಥ್ಯ ಉಳ್ಳವರು. ಈ ಸಿನಿಮಾ ಕೂಡ ಚೇಷ್ಟೆಯಿಂದಲೇ ಆರಂಭವಾಗುತ್ತದೆ. ಯಾವಾಗ ಸುಮನ್, ಧನಂಜಯ್ ಪಾತ್ರಗಳ ಕತೆ ತೆರೆದುಕೊಳ್ಳುತ್ತದೋ ಅಲ್ಲಿಗೆ ಭಾವುಕ ಪ್ರೇಮಕ್ಕೆ ಹೊರಳಿಕೊಳ್ಳುತ್ತದೆ.
Tatsama Tadbhava Review: ಜಾಣ ಬರವಣಿಗೆಯ ಕುತೂಹಲಕರ ಥ್ರಿಲ್ಲರ್
ನಿರ್ದೇಶನ: ವಿಜಯಪ್ರಸಾದ್
ತಾರಾಗಣ: ಜಗ್ಗೇಶ್, ಧನಂಜಯ, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾ ದತ್
ರೇಟಿಂಗ್: 3
ಗಾಂಭೀರ್ಯವನ್ನು ಹಗುರವಾಗಿಸುವುದು ವಿಜಯಪ್ರಸಾದ್ ಶಕ್ತಿ. ಬಹಳ ಗಂಭೀರವಾಗಿದ್ದು ನಡೆದ ಮರುಕ್ಷಣವೇ ಅದನ್ನು ತಿಳಿಯಾಗಿಸುತ್ತಾರೆ. ಹಾಗಾಗಿ ಈ ಸಿನಿಮಾ ಬಲು ಹಗುರ. ನಿರ್ದೇಶಕರು ಇಲ್ಲಿ ಗಂಭೀರವಾದ ಸಂದೇಶವನ್ನು ಸಾರುತ್ತಾರೆ. ಸಮಾನತೆ ಪ್ರತಿಪಾದಿಸುತ್ತಾರೆ. ಕಟ್ಟಿರುವ ಪಾತ್ರಗಳು ಅದಕ್ಕೆ ಪೂರಕವಾಗಿಯೇ ಇವೆ. ಪಾತ್ರಗಳಿಗೆ ತಕ್ಕಂತೆ ಅಪೂರ್ವ ಕಲಾವಿದರೂ ಇದ್ದಾರೆ. ಆ ಎಲ್ಲಾ ಪಾತ್ರಗಳಿಗೂ ಒಂದು ಘನತೆ ದಯಪಾಲಿಸುವುದಕ್ಕೆ ಈ ಭಾಗದಲ್ಲಿ ಎಲ್ಲವೂ ಸಹಕಾರಿಯಾಗಿ ಒದಗಿಬಂದಿದೆ. ಆದ್ದರಿಂದಲೇ ಈ ಸಿನಿಮಾ ಮೊದಲ ಭಾಗಕ್ಕಿಂತ ಹೆಚ್ಚು ಘನವಾಗಿದೆ.
Dvandva Review: ಸಸ್ಪೆನ್ಸ್, ಸಸ್ಪೆನ್ಸ್ ಮತ್ತೂ ಸಸ್ಪೆನ್ಸ್
ಜಗ್ಗೇಶ್ ಮ್ಯಾನರಿಸಂ ಅಭಿಮಾನಿಗಳಿಗೂ ಇಲ್ಲೂ ಹಬ್ಬ ಇದೆ. ಬೋನಸ್ ಎಂದರೆ ಧನಂಜಯ್ ಪಾತ್ರದ ನಿರಾಳತೆ. ಭಗ್ನಪ್ರೇಮಿಯಾಗಿ, ರಸಿಕತೆಯ ಹುಡುಗಾಟದ ಕುತೂಹಲಿಗನಾಗಿ ಅವರು ಅಚ್ಚರಿ ಹುಟ್ಟಿಸುತ್ತಾರೆ. ಒಟ್ಟಾರೆ ಇದೊಂದು ತಮಾಷೆ ಭರಿತ ಮನರಂಜನೆಯೇ ಪ್ರಧಾನವಾಗಿರುವ, ಉತ್ತಮ ಸಂದೇಶ ಹೊಂದಿರುವ ವಿಶಿಷ್ಟ ಪ್ರಯತ್ನ.