ಇದೊಂದು ತನಿಖೆಯ ಕತೆ. ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನೇ ಇಟ್ಟುಕೊಂಡು ನಿರ್ದೇಶಕರು ಕತೆ ಹೆಣೆದಿದ್ದಾರೆ. ಹಾಗೆ ನೋಡಿದರೆ ಟೆರರಿಸಂ ಕತೆ ಹೊಸದೇನಲ್ಲ. ಅಪರಿಚಿತ ವ್ಯಕ್ತಿಗಳು ಬಂದು ಯಾವುದೋ ಒಂದು ಮನೆ ಬಾಡಿಗೆ ಪಡೆದು ಅಲ್ಲಿ ದೇಶದ್ರೋಹಿ ಚಟುವಟಿಕೆ ನಡೆಸುವ ಕತೆ ಎಲ್ಲರೂ ಕೇಳಿರುತ್ತಾರೆ.
ಆರ್.ಬಿ.
ಬಾಂಗ್ಲಾದೇಶದಿಂದ ಬಂದವರಿಗೆ ಇಲ್ಲಿಗೆ ಡೂಪ್ಲಿಕೇಟ್ ಆಧಾರ್ ಕಾರ್ಡ್ ಮಾಡಿಕೊಡುವುದರಿಂದ ಹಿಡಿದು ಆಟೋದಲ್ಲಿ ಕುಕ್ಕರ್ ಬಾಂಬ್ ಸಿಗುವವರೆಗೆ ಸಾಮಾಜಿಕ ವಿಪ್ಲವಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನ ಇದು. ಈ ಸಿನಿಮಾ ಬಹಳ ವಿಸ್ತಾರವಾದ ಕತೆಯನ್ನು ಹೊಂದಿದೆ. ಬೇರೆ ಬೇರೆ ಜಿಲ್ಲೆಗಳಿಗೆ ಮತ್ತು ಬೇರೆ ಬೇರೆ ರಾಷ್ಟ್ರಗಳಲ್ಲಿ ನಡೆಯುವ ಕತೆಯನ್ನು ಹೊಂದಿದೆ. ಸೂಪರ್‌ಸ್ಟಾರ್ ಒಬ್ಬ ಸಮಾಜದ್ರೋಹಿಗಳಿಗೆ ದಾಳವಾಗುವುದರಿಂದ ಹಿಡಿದು ವಿಮಾನದಿಂದ ಬಿದ್ದ ವಸ್ತುವಿನಿಂದ ಯಾವುದೋ ಒಂದು ಹಳ್ಳಿಯ ಬಡ ಕುಟುಂಬದ ಹುಡುಗ ಬಲಿಯಾಗುವವರೆಗೆ ಕತೆ ಬೆಳೆಯುತ್ತಾ ಹೋಗುತ್ತದೆ.
ಇದೊಂದು ತನಿಖೆಯ ಕತೆ. ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನೇ ಇಟ್ಟುಕೊಂಡು ನಿರ್ದೇಶಕರು ಕತೆ ಹೆಣೆದಿದ್ದಾರೆ. ಹಾಗೆ ನೋಡಿದರೆ ಟೆರರಿಸಂ ಕತೆ ಹೊಸದೇನಲ್ಲ. ಅಪರಿಚಿತ ವ್ಯಕ್ತಿಗಳು ಬಂದು ಯಾವುದೋ ಒಂದು ಮನೆ ಬಾಡಿಗೆ ಪಡೆದು ಅಲ್ಲಿ ದೇಶದ್ರೋಹಿ ಚಟುವಟಿಕೆ ನಡೆಸುವ ಕತೆ ಎಲ್ಲರೂ ಕೇಳಿರುತ್ತಾರೆ. ನಿರ್ದೇಶಕರು ಅದರ ಹಿನ್ನೆಲೆ ಹುಡುಕುವ ಪ್ರಯತ್ನ ಮಾಡಿದ್ದಾರೆ. ಇದು ರಿಯಲಿಸ್ಟಿಕ್ ಕತೆ. ಪ್ರತೀ ಫ್ರೇಮ್‌ನಲ್ಲೂ ರಿಯಲಿಸ್ಟಿಕ್ ಗುಣ ಕಾಣುತ್ತದೆ.
ಚಿತ್ರ: ಹೈನ
ನಿರ್ದೇಶನ: ವೆಂಕಟ್ ಭಾರದ್ವಾಜ್
ತಾರಾಗಣ: ಡಾ.ರಾಜ್ ಕಮಲ್, ವೆಂಕಟ್ ಭಾರದ್ವಾಜ್, ಲಕ್ಷ್ಮಣ್ ಶಿವಶಂಕರ್, ಹರ್ಷ ಅರ್ಜುನ್
ಪೊಲೀಸ್ ಸ್ಟೇಷನ್‌ನಿಂದ ಹಿಡಿದು ಇಂಟೆಲಿಜೆನ್ಸ್ ಆಫೀಸ್‌ವರೆಗೂ ಎಲ್ಲವೂ ರಿಯಲಿಸ್ಟಿಕ್ ಆಗಿರುವುದರಿಂದ ಸಿನಿಮಾ ಎಂದೇ ಭಾಸವಾಗದೇ ಇದ್ದರೂ ಅಚ್ಚರಿಯಿಲ್ಲ. ಎಲ್ಲೆಲ್ಲಿ, ಏನೇನು ಸಮಸ್ಯೆ ಆಗುತ್ತಿದೆ, ಯಾರಿಂದ ತೊಂದರೆ ಆಗುತ್ತಿದೆ ಎಂಬುದನ್ನು ನಿರ್ದೇಶಕರು ತೋರಿಸುವ ಪ್ರಯತ್ನ ಮಾಡಿದ್ದಾರೆ. ನೋಡಿದವರಿಗೆ ಅದಕ್ಕೊಂದು ತಾತ್ವಿಕ ಪರಿಹಾರ ಹುಡುಕುವ ಕೆಲಸವನ್ನು ಕೊಟ್ಟಿದ್ದಾರೆ. ವೆಂಕಟ್ ಭಾರದ್ವಾಜ್ ಸೇರಿದಂತೆ ಎಲ್ಲಾ ನಟರೂ ಪಾತ್ರಗಳೇ ಆಗಿ ವಾಸ್ತವಕ್ಕೆ ಹತ್ತಿರವಾಗಿ ನಟಿಸಿದ್ದಾರೆ.