Head Bush Film Review: ಹೆಡ್‌ ಬುಷ್‌ನಲ್ಲಿ ರಾಜಕೀಯ, ಸ್ನೇಹದ ಮೇಲಾಟ

By Govindaraj S  |  First Published Oct 22, 2022, 6:26 AM IST

ಬೆಂಗಳೂರಿನ ಕರಗ ಉತ್ಸವ, ಸ್ನೇಹಿತರ ಜತೆ ಸೇರಿ ಸಣ್ಣ ಪುಟ್ಟ ಗಲಾಟೆ ಮಾಡಿಕೊಂಡು, ತಮ್ಮ ಏರಿಯಾ ಜನರ ಪರವಾಗಿದ್ದವನು ಹೇಗೆ ಮುಂದೆ ದೊಡ್ಡ ಡಾನ್‌ ಆಗಿ ಮೆರೆಯಲು ಸಾಧ್ಯವಾಯಿತು ಎಂಬುದರ ಆರಂಭದ ದಿನಗಳನ್ನು ತುಂಬಾ ಅಚ್ಚುಕಟ್ಟಾಗಿ ನಿರೂಪಿಸಲಾಗಿದೆ. 


ಆರ್‌. ಕೇಶವಮೂರ್ತಿ

ರೌಡಿಯಿಸಂ ಕತೆ ಎಂದರೆ ಅಲ್ಲಿ ಕೊಲೆ, ರಕ್ತಪಾತಕ್ಕೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ಎನ್ನುವ ಒಂದು ಊಹೆ ಇದೆ. ಆದರೆ, ರೌಡಿಯಿಸಂ ಕತೆಯಲ್ಲೂ ಪ್ರೀತಿ, ಸ್ನೇಹ ಮತ್ತು ರಾಜಕೀಯದ ಚದುರಂಗದಾಟ ಹೇಗಿರುತ್ತದೆ ಎಂಬುದನ್ನು ತಿಳಿಯಲು ‘ಹೆಡ್‌ ಬುಷ್‌’ ಸಿನಿಮಾ ನೋಡಬೇಕು. ಬೆಂಗಳೂರಿನ ಆ ದಿನಗಳು ಸಿನಿಮಾ ಪರದೆಯಲ್ಲಿ ಮೂಡಿಬರುವ ಕ್ಲಾಸಿಕ್‌, ಕಲ್ಟ್‌ , ಮಾಸ್‌ ಸಿನಿಮಾ ಆಗಿಸಿ ನಿರ್ದೇಶಕ ಶೂನ್ಯ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ರಾಜಕೀಯ, ರೌಡಿಯಿಸಂ, ಇವರ ಮಧ್ಯೆ ಸಿಗುವ ಬಡವರ ಕತೆಗಳು... ಇದು ‘ಹೆಡ್‌ ಬುಷ್‌’ನ ಅಪರೂಪದ ಕಾಂಬಿನೇಶನ್‌. 

Tap to resize

Latest Videos

undefined

ದಾರಿ ತಪ್ಪುವ ಸಿದ್ಧಾಂತ, ಮುಖ್ಯಮಂತ್ರಿಯ ಜನಪರ ಕಾಳಜಿ, ಬೆನ್ನ ಹಿಂದೆ ಇದ್ದವರೇ ಚೂರಿ ಹಾಕುವುದು, ಕೊನೆಗೆ ತಮ್ಮ ರಕ್ಷಣೆಗೆ ಬಡವರ ಮಕ್ಕಳನ್ನು ಅಸ್ತ್ರಗಳಾಗಿ ಬಳಸಿಕೊಳ್ಳುವುದು ಮತ್ತು ಬೆಳೆಸುವುದು ಹೀಗೆ ಬೆಂಗಳೂರಿನ 70ರ ದಶಕದ ದಿನಗಳ ಆಟಗಳು ಒಂದೊಂದು ತೆರೆ ಮೇಲೆ ತೆರೆದುಕೊಳ್ಳುತ್ತವೆ. ನೈಜ ಘಟನೆಗಳು ಅಷ್ಟೇ ರಿಯಾಲಿಸ್ಟಿಕ್‌ ಆಗಿ ಮೂಡಿದರೂ ಸಿನಿಮಾಗೆ ಬೇಕಾದ ತಳಹದಿ ಕೂಡ ಮಿಸ್‌ ಆಗಿಲ್ಲ ಎಂಬುದು ಈ ಚಿತ್ರದ ಹೆಚ್ಚುಗಾರಿಕೆ. ಬೆಂಗಳೂರಿನ ಕರಗ ಉತ್ಸವ, ಸ್ನೇಹಿತರ ಜತೆ ಸೇರಿ ಸಣ್ಣ ಪುಟ್ಟ ಗಲಾಟೆ ಮಾಡಿಕೊಂಡು, ತಮ್ಮ ಏರಿಯಾ ಜನರ ಪರವಾಗಿದ್ದವನು ಹೇಗೆ ಮುಂದೆ ದೊಡ್ಡ ಡಾನ್‌ ಆಗಿ ಮೆರೆಯಲು ಸಾಧ್ಯವಾಯಿತು ಎಂಬುದರ ಆರಂಭದ ದಿನಗಳನ್ನು ತುಂಬಾ ಅಚ್ಚುಕಟ್ಟಾಗಿ ನಿರೂಪಿಸಲಾಗಿದೆ. 

ಚಿತ್ರ: ಹೆಡ್‌ ಬುಷ್‌

ತಾರಾಗಣ: ಧನಂಜಯ್‌, ಯೋಗೀಶ್‌, ಬಾಲುನಾಗೇಂದ್ರ, ದೇವರಾಜ್‌, ಶ್ರುತಿ ಹರಿಹರನ್‌, ಪಾಯಲ್‌ ರಜಪೂತ್‌, ವಸಿಷ್ಠ ಸಿಂಹ, ಬಾಲಾಜಿ ಮನೋಹರ್‌

ನಿರ್ದೇಶನ: ಶೂನ್ಯ

ರೇಟಿಂಗ್‌: 3

ಒಬ್ಬ ವ್ಯಕ್ತಿಯ ಚಿತ್ರಣದಂತೆ ಶುರುವಾಗಿ, ಕೊನೆಗೆ ಬೆಂಗಳೂರಿನ ಒಂದು ಕಾಲಘಟ್ಟದ ಕತೆಯಾಗಿ ಬದಲಾಗುತ್ತದೆ. ಅಲ್ಲಿಗೆ ಮೂರು- ನಾಲ್ಕು ತಲೆಮಾರು ನೋಡಿರದ ಬೆಂಗಳೂರಿನ ಆ ದಿನಗಳ ಕತೆಯನ್ನು ‘ಹೆಡ್‌ ಬುಷ್‌’ ತೋರಿಸುತ್ತಾ ಸಾಗುತ್ತದೆ. ಕಲಾ ನಿರ್ದೇಶಕ, ಛಾಯಾಗ್ರಾಹಣ, ಹಿನ್ನೆಲೆ ಸಂಗೀತ ಚಿತ್ರದ ಪ್ರತಿ ಪಾತ್ರವನ್ನು ಪ್ರೇಕ್ಷಕರ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. ಬಾಲ್ಯದಿಂದಲೂ ಒರಟ ಮತ್ತು ಕೋಪಿಷ್ಠ ಎನಿಸಿಕೊಂಡಿರುವ ಜಯರಾಜ್‌, ರಾಜಕಾರಣಿಯ ಸ್ನೇಹಕ್ಕೆ ಬಂದು ಇಂದಿರಾ ಬ್ರಿಗೇಡ್‌ ಕಟ್ಟಲು ಹೊರಡುತ್ತಾರೆ. ಕರಗ ಹೊರುವ ವಿಚಾರಕ್ಕೆ ಸ್ನೇಹಿತರ ಮಧ್ಯೆ ಜಗಳ ಆಗುತ್ತದೆ. ಅದು ಕೊಲೆ ಮಾಡುವ ಹಂತಕ್ಕೆ ಹೋಗಿ, ಪಕ್ಷವೊಂದರ ಬಹು ದೊಡ್ಡ ಯೋಜನೆಗೆ ಕಲ್ಲು ಬೀಳುತ್ತದೆ. ಈ ನಡುವೆ ಮತ್ತೊಬ್ಬನ ಪ್ರವೇಶ ಆಗುತ್ತದೆ. 

Champion Film Review: ಫೇಕ್‌ ಕರೆನ್ಸಿ ವ್ಯೂಹದಲ್ಲಿ ಕ್ರೀಡಾಪಟುವಿನ ಸಮರ

ಆತ ಆಗಷ್ಟೆ ನೌಕಾಪಡೆಯಿಂದ ಓಡಿ ಬಂದವನು. ಆತನೇ ರಾಮಚಂದ್ರ ರಾವ್‌ ಅಲಿಯಾಸ್‌ ಕೊತ್ವಾಲ್‌ ರಾಮಚಂದ್ರ. ಮುಂದೇನು ಎಂಬುದು ಚಿತ್ರದ ಕತೆ. ಕತೆಗಾರ ಅಗ್ನಿ ಶ್ರೀಧರ್‌, ನಿರ್ದೇಶಕ ಶೂನ್ಯ ಅವರ ಶ್ರಮಕ್ಕೆ ಧನಂಜಯ್‌, ಬಾಲು ನಾಗೇಂದ್ರ, ಯೋಗೀಶ್‌ ಶಕ್ತಿ ಮೀರಿ ಜೀವ ತುಂಬಿದ್ದಾರೆ. ಈ ಮೂವರು ಪವರ್‌ಫುಲ್‌ ಅಭಿನಯವನ್ನು ವಸಿಷ್ಠ ಸಿಂಹನ ಪಾತ್ರ ಮುಂದುವರಿಸುವಂತೆ ಘರ್ಜಿಸಿದೆ. ಆ ದಿನಗಳ ಪ್ರಭಾವಿ ಮುಖ್ಯಮಂತ್ರಿಗಳೇ ಎದ್ದು ಬಂದಿದ್ದಾರೆ ಎನ್ನುವಂತೆ ದೇವರಾಜ್‌ ಅವರು ತಮ್ಮ ಪಾತ್ರವನ್ನು ಪೋಷಿಸಿದ್ದಾರೆ. ‘ಹೆಡ್‌ ಬುಷ್‌’ ಒಮ್ಮೆ ನೋಡುವಂತಹ ಸಿನಿಮಾ ಎಂಬುದರಲ್ಲಿ ಅನುಮಾನ ಇಲ್ಲ.

click me!