Khadak Movie Review; ಡ್ರಗ್ಸ್ ಮಾಫಿಯಾ ಕಥೆ ಸುತ್ತ ಖಡಕ್ ಚಿತ್ರ

By Suvarna News  |  First Published Jun 23, 2022, 6:05 PM IST

ಅನುಷಾ ರೈ ಹಾಗೂ ಧರ್ಮ ಕೀರ್ತಿರಾಜ್ ಅಭಿನಯದ ಖಡಕ್ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರನಟಿ ಎನ್ ನಾಗೇಶ ನಿರ್ದೇಶನ ಮಾಡಿದ್ದು ಕಬೀರ್ ದುಹಾನ್ ಸಿಂಗ್ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಸಿನಿಮಾ : ಖಡಕ್ 
ನಿರ್ದೇಶಕ : ಟಿ ಎನ್ ನಾಗೇಶ್ 
ನಿರ್ಮಾಣ : ಎಸ್ ವಾಲಿ - ಸಿಂಗಪುರ ಸಿದ್ದರಾಮಯ್ಯ 
ಸಂಗೀತ : ಎಂ ಎನ್ ಕೃಪಾಕರ್ 

ಅನುಷಾ ರೈ ಹಾಗೂ ಧರ್ಮ ಕೀರ್ತಿರಾಜ್ ಅಭಿನಯದ ಖಡಕ್ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರನಟಿ ಎನ್ ನಾಗೇಶ ನಿರ್ದೇಶನ ಮಾಡಿದ್ದು ಕಬೀರ್ ದುಹಾನ್ ಸಿಂಗ್ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖಡಕ್ ಸಿನಿಮಾ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾದಲ್ಲಿ ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಸಮಾಜಕ್ಕೆ ಒಂದು ಉತ್ತಮ ಮೆಸೆಜ್ ಕೊಡುವ ಪ್ರಯತ್ನ ಮಾಡಿದ್ದಾರೆ.

Latest Videos

undefined

ಬಾಳೆಹೊನ್ನೂರು ಶಾಖಾ ಮಠದ 16ನೇ ವರ್ಷದ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ

ಟಿ ಎನ್ ನಾಗೇಶ್ ಡ್ರಗ್ ಮಾಫೀಯಾದಿಂದ ಆರಂಭವಾಗುವ ಕಥೆ ನಂತ್ರ ಪ್ರೀತಿ ಪ್ರೇಮ ಹಾಗೂ ಸಮಾಜ ಸೇವೆ ಅಂತ ಸಿನಿಮಾ ಸಾಗುತ್ತಾ ಹೋಗುತ್ತೆ. ಅಂಡರ್ ಕವರ್ ಪೊಲೀಸ್ ಆಫೀಸರ್ ಆಗಿ ಎಂಟ್ರಿ ಕೊಡೋ ನಾಯಕ ತನ್ನ ತಂದೆಯ ಸಾವಿನ ಸೇಡನ್ನ ತೀರಿಸಿಕೊಳ್ಳಲು ಡ್ರಗ್ ದಂದೆ ಮಾಡುವವರ ಗ್ಯಾಂಗ್ ಜೊತೆ ಸೇರಿಕೊಳ್ಳುತ್ತಾನೆ. ಅವರ ಜೊತೆಯಲ್ಲೇ ಇದ್ದು ಅವರ ಕೆಲಸಗಳನ್ನ ತಿಳಿದುಕೊಂಡು ನಂತ್ರ ರಿವೆಂಜ್ ತೀರಿಸಿಕೊಳ್ಳಲು ತಯಾರಾಗುತ್ತಾನೆ..ಈ ಪ್ರಯಾಣದಲ್ಲಿ ನಾಯಕಿ ಪ್ರೀಯ ಪ್ರೀತಿಯಲ್ಲಿ ಬೀಳುತ್ತಾನೆ.

ತನ್ನ ಡ್ರಗ್ ಮಾಫಿಯಾಗೆ ಅಡ್ಡಿಯಾಗಿರುವವರು ಯಾರು ಅನ್ನೋದನ್ನ ತಿಳಿಯಲು ವಿಲನ್ ಮುಂದಾಗುತ್ತಾನೆ ಆಗ ನಾಯಕನ ಅಸಲಿ ಸ್ಟೋರಿ ರಿವಿಲ್ ಆಗುತ್ತೆ. ಖಡಕ್ ಚಿತ್ರದಲ್ಲಿ ವಿಲನ್ ಆಗಿ ಖಬೀರ್ ದುಹಾನ್ ಸಿಂಗ್ ಕಾಣಿಸಿಕೊಂಡಿದ್ದು ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒಡಗಿಸಿದ್ದಾರೆ..ಇನ್ನು ಅನುಷಾ ರೈ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಯಕ ಪಾತ್ರದಲ್ಲಿ ಧರ್ಮ ಆಕ್ಟಿಂಗ್ ಪ್ರೇಕ್ಷಕರಿಗೆ ಇಷ್ಟವಾಗುತ್ತೆ.

Sushant Singh Rajput case - ಮತ್ತೆ ಸಂಕಷ್ಟದಲ್ಲಿ ರಿಯಾ ಚಕ್ರವರ್ತಿ

ಖಡಕ್ ಸಾಮಾನ್ಯ ಕಥೆಯಾಗಿದ್ದು ಅದನ್ನ ವಿಭಿನ್ನ ರೀತಿಯಲ್ಲಿ ಪ್ರಸೆಂಟ್ ಮಾಡಲು ನಿರ್ದೆಶಕರು ಪ್ರಯತ್ನ ಮಾಡಿದ್ದು ನಿರ್ದೇಶನಕ್ಕೆ ಮತ್ತಷ್ಟು ತಯಾರಿ ಬೇಕಿತ್ತು ಅನ್ನೋದು ಪ್ರೇಕ್ಷಕರ ಅಬಿಪ್ರಾಯ. ಇನ್ನು ಸಾಹಸ ದೃಶ್ಯಗಳು ನೈಜ್ಯತೆಗೆ ಹತ್ತಿರವಾಗಿದ್ದಿದ್ದರೆ ಸಿನಿಮಾ ಪ್ರೇಕ್ಷಕರಿಗೂ ಹತ್ತಿರವಾಗುತ್ತಿತ್ತು . ಇನ್ನು ಹಾಡುಗಳು ಹಾಗೆ ಬಂದು ಹೀಗೆ ಹೋಗುತ್ತೆ ಆದ್ರೆ ಯಾವ ಹಾಡುಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿಲ್ಲ. ಒಟ್ಟಾರೆ ವಾರಾಂತ್ಯ ಟೈ ಪಾಸ್ ಮಾಡಬೇಕು ಅಂದ್ರೆ ಖಡಕ್ ಸಿನಿಮಾ ಆಯ್ಕೆ ಮಾಡಿಕೊಳ್ಳಬಹುದು.

click me!