ಅವನಿರಬೇಕಿತ್ತು ಸಿನಿಮಾ ವಿಮರ್ಶೆ: ಹೊಸ ವಂಚನೆಯ ರೂಪಾಂತರ, ಸಾಮಾನ್ಯ ವ್ಯಕ್ತಿಯ ಹೋರಾಟ

Kannadaprabha News   | Kannada Prabha
Published : Jun 28, 2025, 04:56 PM IST
Avanirabekittu

ಸಾರಾಂಶ

ಇಡೀ ಕತೆ ಪ್ರಯೋಗದ ನೆರಳಿಗೆ ಒಡ್ಡಿಕೊಂಡಿರುವುದರಿಂದ ಸುತ್ತು ಬಳಸಿ ಹೇಳಿದಂತೆ ಅನಿಸಬಹುದು. ಆದರೆ, ಡ್ಯಾನ್ಸ್‌, ಡೈಲಾಗ್‌ ಡೆಲಿವರಿ, ಸ್ಕ್ರೀನ್‌ ಅಪಿಯರೆನ್ಸ್‌ನಲ್ಲಿ ಭರತ್‌, ಸೌಮ್ಯಾ ಜಾನ್‌ ಕಾಂಬಿನೇಶನ್‌ ಚಿತ್ರದ ಸಣ್ಣಪುಟ್ಟ ಕೊರತೆಗಳನ್ನ ನೀಗಿಸುತ್ತದೆ.

ಆರ್‌.ಕೇಶವಮೂರ್ತಿ

ಬಹಳಷ್ಟು ಫ್ರಾಡ್‌ ಪ್ರಕರಣಗಳು ಸಿನಿಮಾಗಳಾಗಿವೆ. ಅಂಥ ಕತೆಗಳು ಬರುತ್ತಲೇ ಇವೆ. ಇಂಥ ಮೋಸದ ಜಾಲದ ಹಿಂದೆ ಇನ್ಯಾರದೋ ನೋವು, ಸಂಕಷ್ಟಗಳು ಇರುತ್ತವೆ. ವಂಚನೆಗೆ ತುತ್ತಾದವರು ಪೊಲೀಸು, ಕಂಪ್ಲೇಂಟ್‌, ಕೋರ್ಟು ಅಂತ ಹೋಗದೆ ಮೋಸಗಾರರೇ ತಾವಾಗಿಯೇ ಕಾನೂನಿನ ಕುಣಿಕೆಗೆ ಬಂದು ಬೀಳುವಂತೆ ಮಾಡುವುದು ಹೇಗೆಂದು ಹೇಳುವ ಒಂದು ವಿಚಿತ್ರ, ವಿಲಕ್ಷಣ ಚಿತ್ರವೇ ‘ಅವನಿರಬೇಕಿತ್ತು’. ಸರ್ಕಾರಿ ದಾಖಲೆಗಳಲ್ಲಿ ಉಂಟಾಗುವ ಒಂದು ಸಣ್ಣ ತಾಂತ್ರಿಕ ದೋಷದಿಂದ ಹೇಗೆಲ್ಲ ಮೋಸ ಹೋಗಬಹುದು, ಬೀದಿಗೆ ಬರಬಹುದು ಎಂಬುದನ್ ವಿಭಿನ್ನವಾದ ನಿರೂಪಣಾ ಶೈಲಿಯಲ್ಲಿ ಹೇಳುವ ಪ್ರಯತ್ನ ಮಾಡಿರುವುದು ಈ ಚಿತ್ರದ ಪ್ಲಸ್‌ ಪಾಯಿಂಟ್‌.

ಇಡೀ ಕತೆ ಪ್ರಯೋಗದ ನೆರಳಿಗೆ ಒಡ್ಡಿಕೊಂಡಿರುವುದರಿಂದ ಸುತ್ತು ಬಳಸಿ ಹೇಳಿದಂತೆ ಅನಿಸಬಹುದು. ಆದರೆ, ಡ್ಯಾನ್ಸ್‌, ಡೈಲಾಗ್‌ ಡೆಲಿವರಿ, ಸ್ಕ್ರೀನ್‌ ಅಪಿಯರೆನ್ಸ್‌ನಲ್ಲಿ ಭರತ್‌, ಸೌಮ್ಯಾ ಜಾನ್‌ ಕಾಂಬಿನೇಶನ್‌ ಚಿತ್ರದ ಸಣ್ಣಪುಟ್ಟ ಕೊರತೆಗಳನ್ನ ನೀಗಿಸುತ್ತದೆ. ಲೋಕಿ ತವಸ್ಯ ಸಂಗೀತ, ದೇವರಾಜ್‌ ಪೂಜಾರಿ ಅವರ ಛಾಯಾಗ್ರಾಹಣ ತಾಂತ್ರಿಕತೆ ಸೊಬಗು ಹೆಚ್ಚಿಸಿದರೆ, ರಾಹುಲ್‌ ನೃತ್ಯ ಸಂಯೋಜನೆ ಚಿತ್ರದ ಮೊದಲ ಹೀರೋ ಆಗುತ್ತದೆ. ಮೂರೂ ಹಾಡುಗಳಲ್ಲಿ ರಾಹುಲ್‌ ಸಂಯೋಜಿಸಿರುವ ಡ್ಯಾನ್ಸ್‌ ಮೂಮೆಂಟ್‌ಗಳು ಇತ್ತೀಚಿನ ವರ್ಷಗಳಲ್ಲಿ ನೋಡಿರಲಿಕ್ಕೆ ಸಾಧ್ಯವಿಲ್ಲ.

ಚಿತ್ರ: ಅವನಿರಬೇಕಿತ್ತು
ತಾರಗಣ: ಭರತ್‌, ಸೌಮ್ಯಾ ಜಾನ್‌, ಜಯಸಿಂಹ, ಲಕ್ಷ್ಮೀದೇವಮ್ಮ, ಪ್ರಶಾಂತ್‌ ಸಿದ್ದಿ, ಕಿರಣ್‌ ನಾಯಕ್‌
ನಿರ್ದೇಶನ: ಅಶೋಕ್‌ ಸಾಮ್ರಾಟ್‌
ರೇಟಿಂಗ್: 3

ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರೋ ಬಹುಮುಖ ಪ್ರತಿಭೆ ಅಶೋಕ್ ಸಾಮ್ರಾಟ್ ನಿರ್ದೇಶನದ ಚೊಚ್ಚಲ ಸಿನಿಮಾ ಅವನಿರಬೇಕಿತ್ತು.. ಗೆಳೆಯ ಮುರಳಿ ಬಿಟಿ ಅಶೋಕ್ ಸಿನಿಮಾ ಕನಸಿಗೆ ಬಂಡವಾಳ ಹೂಡಿದ್ದಾರೆ. ಹಂಸಲೇಖ ಶಿಷ್ಯ ಲೋಕಿ ತವಸ್ಯಾ ಸಂಗೀತ ಸಂಯೋಜಿಸಿದ್ದು, ದೇವರಾಜ್ ಪೂಜಾರಿ ಛಾಯಾಗ್ರಹಣ ಮಾಡಿದ್ದಾರೆ. ತಾಂತ್ರಿಕವಾಗಿ ನಿಪುಣರ ತಂಡವನ್ನ ಕಟ್ಟಿಕೊಂಡು, ಹೊಸ ಬಗೆಯ ಕಥೆಯನ್ನ ಹೆಣೆದು, ವಿನೂತನ ಸ್ಕ್ರೀನ್ ಪ್ಲೇ ಜೊತೆಗೆ ಗುಣ ಮಟ್ಟದ ಮೇಕಿಂಗ್ ಮಾಡಿರೋ ಸಿನಿಮಾ ಅವನಿರಬೇಕಿತ್ತು.

ಅವನಿರಬೇಕಿತ್ತು... ಸಿನಿಮಾ ಹಲವಾರೂ ವಿಶೇಷ ವಿಚಾರಗಳಿಗೆ ಹೆಸರಾಗುವಂತೆ ಕಾಣ್ತಿದೆ.. ಕನ್ನಡ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವ ಭರವಸೆಯನ್ನೂ ನೀಡಿದೆ.. ಚಿತ್ರದಲ್ಲಿ ನಾಯಕ ಭರತ್, ನಾಯಕಿ ಸೌಮ್ಯಾ ಹೊಸ ಮುಖಗಳೇ ಆದ್ರೂ ಟ್ರೈಲರ್ ನೋಡಿದಾಗ ಅನುಭವಸ್ಥ ಕಲಾವಿದರಿಗಿಂತ ಏನು ಕಡಿಮೆ ಕಾಣ್ತಿಲ್ಲ. ಹಾಡುಗಳಲ್ಲಿ ಇವ್ರ ಡ್ಯಾನ್ಸ್ ಮತ್ತು ಅಭಿನಯ ವಿಶೇಷವಾಗಿ ಕಾಣ್ತಿದೆ. ಚಿತ್ರದಲ್ಲಿ ಪ್ರಶಾಂತ್ ಸಿದ್ದಿ, ಕಿರಣ್ ನಾಯಕ್, ಹಿರಿಯ ನಟಿ ಲಕ್ಷ್ಮೀ ದೇವಮ್ಮ ಸೇರಿದಂತೆ ಹಲವು ಅನುಭವಸ್ಥ ಕಲಾವಿದರು ಅವನಿರಬೇಕಿತ್ತು ಚಿತ್ರಕ್ಕೆ ಶಕ್ತಿಯಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?
ಪ್ರೇಮವೋ, ದ್ವೇಷವೋ, ಥ್ರಿಲ್ಲರೋ?: ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ