Ayogya 2 Review: ಸತೀಶ್ ನೀನಾಸಂ ಕೊಡೊ ಕೊನೆಯ ಟ್ವಿಸ್ಟ್ ಇಡೀ ಕತೆಯನ್ನೇ ಬದಲಿಸುತ್ತಾ?

Published : Aug 08, 2026, 04:41 PM IST
Ayogya 2

ಸಾರಾಂಶ

Ayogya 2 Movie Review: ಅಯೋಗ್ಯ 1 ಚಿತ್ರದ ಮುಂದುವರಿದ ಭಾಗ ಇದು. ಆರಂಭದಲ್ಲಿಯೇ ಭಾಗ 1ರ ಕತೆಯನ್ನು ಹೇಳುತ್ತಾರಾದ್ದರಿಂದ ನೇರವಾಗಿ ಭಾಗ 2 ನೋಡುವವರಿಗೆ ಕತೆ ಮಿಸ್ ಆಗುವ ಚಾನ್ಸ್‌ ಇಲ್ಲ.

ರಾಜೇಶ್

ಅಯೋಗ್ಯ 1 ಚಿತ್ರದ ಮುಂದುವರಿದ ಭಾಗ ಇದು. ಆರಂಭದಲ್ಲಿಯೇ ಭಾಗ 1ರ ಕತೆಯನ್ನು ಹೇಳುತ್ತಾರಾದ್ದರಿಂದ ನೇರವಾಗಿ ಭಾಗ 2 ನೋಡುವವರಿಗೆ ಕತೆ ಮಿಸ್ ಆಗುವ ಚಾನ್ಸ್‌ ಇಲ್ಲ. ಇದೊಂದು ರಾಜಕೀಯ ವಿಡಂಬನಾತ್ಮಕ ಕತೆ ಹೊಂದಿರುವ ಸಿನಿಮಾ. ಆ ವಿಡಂಬನೆ ಶುರುವಾಗುವ ಮೊದಲೇ ನಾಯಕನ ಅಬ್ಬರ ಶುರುವಾಗುತ್ತದೆ.

ಆರಂಭದಲ್ಲಿಯೇ ಒಂದು ಫೈಟು, ಒಂದು ಕಲರ್ ಕಲರ್ ಹಾಡಿನ ಮೂಲಕ ನಿರ್ದೇಶಕರು ಹಬ್ಬ ಮಾಡುತ್ತಾರೆ. ಆಮೇಲೆ ಗ್ರಾಮಪಂಚಾಯಿತಿ ಸದಸ್ಯ, ಗ್ರಾಪಂ ಅಧ್ಯಕ್ಷನಾಗುವ ಹೋರಾಟ ಶುರುವಾಗುತ್ತದೆ. ಆ ಹೋರಾಟದ ಮಧ್ಯೆ ಸತೀಶ್ ನೀನಾಸಂ, ಗಿರಿ, ಶಿವರಾಜ್‌ ಕೆಆರ್‌ ಪೇಟೆ ಪಾತ್ರಗಳು ದಾಂಧಲೆ ಎಬ್ಬಿಸುತ್ತಿರುತ್ತವೆ. ಕತೆ ಹಿಂದಕ್ಕೂ ಮುಂದಕ್ಕೂ ಜಿಗಿಯುತ್ತಾ ಒಮ್ಮೆ ಕ್ರೋಧಾವೇಶ ಉಕ್ಕಿಸುತ್ತಾ ಮತ್ತೊಮ್ಮೆ ಭಾವ ಪ್ರಪಂಚಕ್ಕೆ ಕೈಹಾಕುತ್ತಾ ಮುಂದೆ ಸಾಗುತ್ತದೆ. ಲವಲವಿಕೆಯಿಂದ ಸಾಗುವ ಸಿನಿಮಾ ಮಧ್ಯಂತರದ ಹೊತ್ತಿಗೆ ಘನಗಂಭೀರವಾಗುತ್ತದೆ.

ನಿರ್ದೇಶಕರು ಕತೆಯನ್ನು ಗ್ರಾಪಂ ರಾಜಕೀಯವನ್ನು ವಿಧಾನಸಭೆ ರಾಜಕೀಯಕ್ಕೆ ಕೊಂಡೊಯ್ಯುವುದು ಇಲ್ಲಿನ ಹೆಚ್ಚುಗಾರಿಕೆ. ಕ್ಲ್ಯೈಮ್ಯಾಕ್ಸ್‌ನಲ್ಲಿ ಬೇರೆ ಸಕತ್ ಟ್ವಿಸ್ಟ್‌ ಇಟ್ಟಿದ್ದಾರೆ. ಆ ಟ್ವಿಸ್ಟ್‌ ಈ ಕತೆಯ ವಿಸ್ತಾರವನ್ನು ಹೆಚ್ಚಿಸಿದೆ. ಮಜಾ ಎಂದರೆ ಇಲ್ಲಿ ರಾಕಿ ಭಾಯ್ ಅಣ್ಣ ರಾಗಿ ಭಾಯ್ ಬಂದು ದೊಡ್ಡಮ್ಮ ಮೆಶಿನ್‌ ಗನ್‌ನಿಂದ ಹೊಳೆಬದಿ ಕೂತಿರುವವರನ್ನು ಓಡಿಸುವ ದೃಶ್ಯ ಬಹಳ ಸಂಕೇತಾತ್ಮಕವಾಗಿ ಮೂಡಿಬಂದಿದೆ.

ಚಿತ್ರ: ಅಯೋಗ್ಯ 2

ನಿರ್ದೇಶನ: ಮಹೇಶ್ ಕುಮಾರ್

ತಾರಾಗಣ: ಸತೀಶ್ ನೀನಾಸಂ, ರಚಿತಾ ರಾಮ್, ರವಿಶಂಕರ್‌, ಗಿರಿ, ಶಿವರಾಜ್‌ ಕೆಆರ್‌ ಪೇಟೆ, ಅರುಣಾ ಬಾಲರಾಜ್

ರೇಟಿಂಗ್: 3

ಸತೀಶ್ ನೀನಾಸಂ, ರವಿಶಂಕರ್‌, ಮಂಜು ಪಾವಗಡ ಸೇರಿದಂತೆ ಎಲ್ಲರೂ ಸೊಗಸಾಗಿ ನಟಿಸಿದ್ದಾರೆ. ರಚಿತಾರಾಮ್ ಸ್ಕ್ರೀನ್ ಸ್ಪೇಸ್ ಕಡಿಮೆ ಇದ್ದರೂ ಶಿಳ್ಳೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿರ್ದೇಶಕರು ಈ ಫ್ರಾಂಚೈಸ್‌ ಅನ್ನು ಮತ್ತಷ್ಟು ಮುಂದುವರಿಸುವ ದಿಟ್ಟ ನಿರ್ಧಾರವನ್ನು ಕೈಗೊಂಡಿರುವುದು ಅವರ ಚುಂಬಕ ಕಥನಶಕ್ತಿಗೆ ಹಿಡಿದ ಕೈಗನ್ನಡಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BOSS Review: 'ಬಾಸ್' ಸಿನಿಮಾದಲ್ಲಿ ಇರೋದು ಯಾವ ಬಾಸ್‌? ಯಾವ ಕ್ರಿಕೆಟಿಗ..? ಕಥೆ ನೋಡಿ ನೀವೇ 'ಡಾಟ್' ಕನೆಕ್ಟ್ ಮಾಡ್ಕೊಳ್ಳಿ!
ಜಾಲಿ ಸಿನಿಮಾ ವಿಮರ್ಶೆ: ಹುಡುಗಿಯಲ್ಲಿ ಅಮ್ಮನನ್ನು, ಹುಡುಗನಲ್ಲಿ ತಂದೆಯನ್ನು ಕಂಡ ಪ್ರೀತಿಯ ಕಥೆ!