Bachelor Party Review ದ್ರೋಹವೂ ಇಲ್ಲಿ ತಮಾಷೆಯ ಬೆನ್ನೇರಿದೆ!

By Kannadaprabha News  |  First Published Jan 27, 2024, 12:04 PM IST

ದಿಗಂತ್, ಯೋಗಿ, ಅಚ್ಯುತ್ ಕುಮಾರ್, ಸಿರಿ, ಪ್ರಕಾಶ್ ತುಮಿನಾಡು, ಬಾಲಾಜಿ ಮನೋಹರ್ ನಟನೆಯ ಬ್ಯಾಚುಲರ್ ಪಾರ್ಟಿ ಸಿನಿಮಾ ರಿಲೀಸ್ ಆಗಿದೆ. ಚಿತ್ರ ಹೇಗಿದೆ. 
 


ರಾಜೇಶ್ ಶೆಟ್ಟಿ

ಸರಿ ಇಲ್ಲದ ಸಂಬಂಧದ ವಿಷಾದ, ದೂರಾದ ತಂದೆ ಮಗನ ಮಧ್ಯದ ಬಾಂಧವ್ಯ, ಸ್ನೇಹಿತರ ನಡುವಿನ ತರ್ಲೆ ತಮಾಷೆ ಸಂತೋಷ ಸೇರಿರುವ ಕಥನವಿದು. ಇಲ್ಲಿ ಎಲ್ಲಕ್ಕೂ ತಮಾಷೆಯ ಹೊದಿಕೆ ಇದೆ. ಎಲ್ಲಕ್ಕೂ ನಗುವಿನ ಲೇಪ ಇದೆ. ಹಾಗಾಗಿ ಇದೊಂದು ತಮಾಷೆಯಿಂದ ಆರಂಭವಾಗಿ ತಮಾಷೆಯಲ್ಲೇ ಮುಗಿಯುವ ಸಿನಿಮಾ.

Tap to resize

Latest Videos

ನಿರ್ದೇಶನ: ಅಭಿಜಿತ್ ಮಹೇಶ್

ತಾರಾಗಣ: ದಿಗಂತ್, ಯೋಗಿ, ಅಚ್ಯುತ್ ಕುಮಾರ್, ಸಿರಿ, ಪ್ರಕಾಶ್ ತುಮಿನಾಡು, ಬಾಲಾಜಿ ಮನೋಹರ್

ರೇಟಿಂಗ್: 3

ಇಲ್ಲಿ ಇಬ್ಬರು ಸುರೇಶ-ರಮೇಶ ಥರದ ಬಾಲ್ಯ ಸ್ನೇಹಿತರಿದ್ದಾರೆ. ಒಬ್ಬನಿಗೆ ಮದುವೆಯಾಗಿ ದಾರಿ ಬೇರೆಯಾದ ಬಹುವರ್ಷಗಳ ನಂತರ ಸುರೇಶ ಸಿಕ್ಕಿದ ಮೇಲೆ ನಡೆಯುವ ಸಾಹಸಗಳೇ ಈ ಸಿನಿಮಾದ ಜರ್ನಿ. ಆದರೆ ಕತೆಯ ಕೇಂದ್ರ ದ್ರೋಹ. ಒಂದು ದ್ರೋಹದ ಕತೆಯನ್ನು ನಿರ್ದೆಶಕರು ಎಷ್ಟು ತಮಾಷೆಯಾಗಿ ಹೇಳಲು ಯತ್ನಿಸಿದ್ದಾರೆ ಎಂದರೆ ಅದೊಂದು ದ್ರೋಹದ ಕತೆ ಅನ್ನಿಸುವುದಕ್ಕೆ ಸಮಯವೇ ಕೊಡುವುದಿಲ್ಲ. ಅಷ್ಟರ ಮಟ್ಟಿಗೆ ಅವರು ಕಾಮಿಡಿಯನ್ನು ನೆಚ್ಚಿಕೊಂಡಿದ್ದಾರೆ.

CASE OF KONDANA REVIEW ತೀವ್ರವಾಗಿ ಕಾಡುವ ಕ್ರೈಮ್ ಥ್ರಿಲ್ಲರ್‌

ಈ ಸಿನಿಮಾದಲ್ಲಿ ಯಾವುದೂ ಭಾರ ಅನ್ನಿಸುವುದಿಲ್ಲ. ಅಶ್ಲೀಲತೆಯ ಹಂಗಿಲ್ಲ. ಒಂದು ಕತೆಯನ್ನು ಜನರು ತಲೆಕೆಡಿಸಿಕೊಳ್ಳದೇ ನೋಡಬೇಕು ಎಂದು ನಿರ್ದೇಶಕರು ನಿರ್ಧಾರ ಮಾಡಿ ಈ ಸಿನಿಮಾ ಮಾಡಿದಂತಿದೆ. ಅದು ಸಿನಿಮಾದ ಹೆಚ್ಚುಗಾರಿಕೆ. ಅದಕ್ಕೆ ತಕ್ಕಂತೆ ಪ್ರತಿಯೊಬ್ಬ ಕಲಾವಿದರೂ ಚೆನ್ನಾಗಿ ನಟಿಸಿದ್ದಾರೆ. ದಿಗಂತ್ ಮುಗ್ಧತೆಯಿಂದ, ಯೋಗಿ ತರ್ಲೆಯಿಂದ, ಅಚ್ಯುತ್ ಕುಮಾರ್ ನಿರ್ಲಿಪ್ತತೆಯಿಂದ ಮನಸ್ಸು ಗೆಲ್ಲುತ್ತಾರೆ. ದ್ವಿತೀಯಾರ್ಧದಲ್ಲಿ ಬರುವ ಪ್ರಕಾಶ್ ತುಮಿನಾಡು, ಬಾಲಾಜಿ ಮನೋಹರ್ ಹೊಟ್ಟೆ ತುಂಬಾ ನಗಿಸುತ್ತಾರೆ.

Alexa Review ಸ್ನೇಹ, ದ್ವೇಷ ಮತ್ತು ಮರ್ಡರ್‌ ಮಿಸ್ಟ್ರಿ

ಆರಂಭದಲ್ಲಿ ಕತೆ ದಾರಿಗೆ ಬರಲು ಕೆಲವು ಸೆಕೆಂಡು ಹೆಚ್ಚು ತೆಗೆದುಕೊಳ್ಳುತ್ತದೆ ಅನ್ನುವುದರ ಹೊರತಾಗಿ ಇದೊಂದು ನಕ್ಕು ಹಗುರಾಗಬಹುದಾದ ಕಾಮಿಡಿ ಎಂಟರ್‌ಟೇನರ್. ಹುಡುಕುವವರಿಗೆ ಗಾಂಭೀರ್ಯತೆ, ಮಜಾ ಬಯಸುವವರಿಗೆ ಹಾಸ್ಯಮಯತೆ ಎರಡೂ ಇರುವ ನಗಿಸುವ ಕಥನ.

click me!