ರೆಡ್‌ಮಿ ನೋಟ್ 10ಎಸ್ ಸ್ಮಾರ್ಟ್‌ಫೋನ್ ಟೀಸರ್, ಶೀಘ್ರವೇ ಭಾರತದಲ್ಲಿ ಬಿಡುಗಡೆ

By Suvarna News  |  First Published May 5, 2021, 1:35 PM IST

ಚೀನಾ ಮೂಲದ ಸ್ಮಾರ್ಟ್‌ಫೋನ್ ಉತ್ಪಾದನಾ ಕಂಪನಿ ಶಿಯೋಮಿ ಭಾರತದಲ್ಲಿ ಶೀಘ್ರವೇ ರೆಡ್‌ಮಿ ನೋಟ್ 10ಎಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಶಿಯೋಮಿ ಕಂಪನಿಯ ಈ ಸ್ಮಾರ್ಟ್‌ಫೋನ್ ಇರುವ ರಿಟೇಲ್ ಬಾಕ್ಸ್ ಇಮೇಜ್ ಅನ್ನು ರಿಲೀಸ್ ಮಾಡಿ ಸ್ಮಾರ್ಟ್‌ಫೋನ್ ಗ್ರಾಹಕರಲ್ಲಿ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.


ಭಾರತದಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ರೆಡ್ ಮಿ ನೋಟ್ 10 ಎಸ್‌ ಸ್ಮಾರ್ಟ್‌ಫೋನ್ ರಿಟೇಲ್ ಬಾಕ್ಸ್ ಇಮೇಜ್ ಜೊತೆಗೆ ಒಂದಿಷ್ಟು ವಿಶೇಷತೆಗಳನ್ನು ಚೀನಾ ಮೂಲದ ಶಿಯೋಮಿ ಕಂಪನಿ ಬಹಿರಂಗ ಮಾಡಿದೆ. ಈ ಮೂಲಕ ಬಳಕೆದಾರರಲ್ಲಿ ಕುತೂಹಲವನ್ನ ಹೆಚ್ಚಿಸಿದೆ. ಕಳೆದ ತಿಂಗಳು ಜಾಗತಿಕವಾಗಿ ಬಿಡುಗಡೆಯಾದ ರೆಡ್ ಮಿ ನೋಟ್ 10ಎಸ್ ಟೀಸರ್ ಬಿಡುಗಡೆ ಮಾಡಿದ ಕಂಪನಿ, ವಿಶೇಷತೆಗಳು ಹೊಂದಾಣಿಕೆಯಾಗುವುದರಿಂದ ಭಾರತದಲ್ಲಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ ಎಂದು ಬಹುಮಟ್ಟಿಗೆ ನಿರೀಕ್ಷಿಸಲಾಗಿದೆ.

ಕೋವಿಡ್ ಲಸಿಕೆ: CoWINನಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ?

Tap to resize

Latest Videos

undefined

ಈಗಾಗಲೇ ಕಂಪನಿಯ ಭಾರತೀಯ ಮಾರುಕಟ್ಟೆಗೆ ರೆಡ್‌ಮಿ ನೋಟ್ 10 ಸೀರೀಸ್‌ನಲ್ಲಿ  ರೆಡ್ ಮಿ ನೋಟ್ 10, ರೆಡ್ ಮಿ ನೋಟ್ 10 ಪ್ರೋ ಮತ್ತು ರೆಡ್ ಮಿ ನೋಟ್ 10 ಪ್ರೋ ಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಮತ್ತು ಮಾರುಕಟ್ಟೆಯಿಂದಲೂ ಕಂಪನಿಗೆ ಒಳ್ಳೆ ರೆಸ್ಪಾನ್ಸ್ ದೊರೆತಿದೆ. ಗ್ರಾಹಕರಿಂದಲೂ ಉತ್ತಮ ಫೀಡ್‌ಬ್ಯಾಕ್ ಸಿಕ್ಕಿದೆ. ಇದೇ ಹೊತ್ತಿನಲ್ಲಿ ಕಂಪನಿ ಮತ್ತೊಂದು ರೆಡ್ ಮಿ ನೋಟ್ 10 ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ರೆಡ್ ಮಿ ನೋಟ್ 10 ಸೀರೀಸ್‌ಗೆ ಸೇರ್ಪಡೆ ಮಾಡಲು ಮುಂದಾಗಿದೆ.

ಶಿಯೋಮಿ ಕಂಪನಿಯು ಟ್ವಿಟರ್‌ನ ತನ್ನ ಅಧಿಕೃತ ಖಾತೆಯ ಮೂಲಕ ರೆಡ್ ಮಿ ನೋಟ್ 10 ಎಸ್ ಸ್ಮಾರ್ಟ್‌ಫೋನ್ ಬಿಡುಗಡೆಯ ಬಗ್ಗೆ ಟೀಸ್ ಮಾಡಿದೆ. ಈ ಟೀಸರ್‌ನಲ್ಲಿ ಸ್ಮಾರ್ಟ್‌ಫೋನ್ ಹಲವು ವಿಶೇಷತೆಗಳನ್ನು ನಮೂದಿಸಿರುವ ರಿಟೇಲ್ ಬಾಕ್ಸ್‌ ಭಾವಚಿತ್ರವಿದೆ.

ಈಗಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ರೆಡ್ ಮಿ ನೋಟ್ 10 ಎಸ್  ಸ್ಮಾರ್ಟ್‌ಫೋನ್‌ನಲ್ಲಿ 64 ಮೆಗಾ ಪಿಕ್ಸೆಲ್ ಕ್ಯಾಮೆರಾ, ಎಂಐಯು 12.5 ಆಪರೇಟಿಂಗ್ ಸಾಫ್ಟ್‌ವೇರ್‌ಗಳಿದ್ದು ಮೂರು ಬಣ್ಣಗಳ ಆಯ್ಕೆಯಲ್ಲಿ ಬಳಕೆದಾರರಿಗೆ ಸಿಗಲಿದೆ. ನೀಲಿ, ಡಾರ್ಕ್ ಗ್ರೇ ಮತ್ತು  ಬಿಳಿ ಬಣ್ಣಗಳಲ್ಲಿ ಈ ರೆಡ್ ಮಿ ನೋಟ್ 10ಎಸ್ ಸ್ಮಾರ್ಟ್‌ಫೋನ್ ಸಿಗಲಿದೆ. ಇನ್ನು ಈ ಫೋನ್ ಗೇಮಿಂಗ್ ಸೆಂಟ್ರಿಕ್ ಆಗಿದ್ದು, ಹೈ-ರೆಸ್ ಆಡಿಯೋಗೆ ಸಪೋರ್ಟ್ ಮಾಡುತ್ತದೆ ಮತ್ತು ಸೂಪರ್ ಡಿಸ್ಪ್ಲೇ ಒಳಗೊಂಡಿದೆ.

ಶಿಯೋಮಿಯಿಂದ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್?

6GB + 64GB, 6GB + 128GB ಮತ್ತು 8GB + 128GB ವೆರಿಯೆಂಟ್‌ಗಳಲ್ಲಿ ಈ ರೆಡ್ ಮಿನೋಟ್ 10ಎಸ್ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಸಿಗಲಿದೆ. ಆದರೆ, ಸ್ಮಾರ್ಟ್ ಫೋನ್ ಬೆಲೆ ಎಷ್ಟಿರಲಿದೆ ಎಂಬುದು ಇನ್ನೊ ಗೊತ್ತಾಗಲಿ. ಬಹುಶಃ ಕೈಗೆಟುಕುವ ದರದಲ್ಲಿ ಸಿಗಬಹುದು ಎಂಬ ವಿಶ್ವಾಸವಿದೆ ಎನ್ನಲಾಗುತ್ತಿದೆ.

ಈ ಫೋನ್‌ನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ರೆಡ್ ಮಿ ನೋಟ್ 10ಎಸ್ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಆಧರಿತ ಎಂಐಯುಐ 12.5 ಆಪರೇಟರಿಂಗ್ ಸಾಫ್ಟ್ ವೇರ್ ಆಧರಿತವಾಗಿದೆ. 6.5 ಇಂಚ್ ಫುಲ್ ಎಚ್ ಡಿ ಪ್ಲಸ್ ಹೋಲ್ ಪಂಚ್ ಡಿಸ್‌ಪ್ಲೇ ಮತ್ತು ಮೀಡಿಯಾ ಟೆಕ್ ಹೆಲಿಯೋ ಜಿ95 ಪ್ರೊಸೆಸರ್ ಒಳಗೊಂಡಿದೆ.

ಈ ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು 5,000 ಎಂಎಎಚ್ ಸಾಮರ್ಥ್ಯದ  ಬ್ಯಾಟರಿಯನ್ನು ಅಳವಡಿಸಿದೆ. ಈ ಬ್ಯಾಟರಿಯು 33 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಇಷ್ಟು ಮಾತ್ರವಲ್ಲದೇ ಈ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಡ್ ಕ್ಯಾಮೆರಾ ಸೆಟ್ ಇದ್ದು, ಪ್ರಾಥಮಿಕ ಕ್ಯಾಮೆರಾ 64  ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿರಲಿದೆ. ಇನ್ನು ಉಳಿದ ಮೂರು ಕ್ಯಾಮೆರಾಗಳು 8 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳು ಆಗಿರಲಿವೆ. ಸೆಲ್ಫಿ ಕ್ಯಾಮೆರಾ ಕೂಡಾ ಚೆನ್ನಾಗಿದ್ದು, ಕಂಪನಿ ಫೋನ್ ಫ್ರಂಟ್‌ನಲ್ಲಿ 13 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸುತ್ತಿದೆ.

ಶಿಯೋಮಿಯ ದುಬಾರಿ 75 ಇಂಚಿನ ಎಂಐ ಕ್ಯೂಎಲ್ಇಡಿ ಟಿವಿ ಬಿಡುಗಡೆ: ಬೆಲೆ 1,19,999 ರೂ.

ಭಾರತದಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ಈ ರೆಡ್ ಮಿ ನೋಟ್ 10 ಎಸ್ ಸ್ಮಾರ್ಟ್‌ಫೋನ್ ಹಲುವೈ ವೈಶಿಷ್ಟ್ಯಗಳನ್ನು ಹೊಂದಿದ್ದು, ಗ್ರಾಹಕರಿಗೆ ವಿಶಿಷ್ಟ ಅನುಭವವ ನೀಡಲಿದೆ ಎಂದು ಹೇಳಬಹುದು.

click me!