ಕೊರೋನಾ ವಿರುದ್ಧದ ಭಾರತದ ಹೋರಾಟಕ್ಕೆ ವಿಶ್ವದೆಲ್ಲೆಡೆಯಿಂದ ನೆರವು ಹರಿದು ಬರುತ್ತಿದೆ. ಈ ಮೂಲಕ ಭಾರತ ತನ್ನು ಹೋರಾಟವನ್ನು ತೀವ್ರಗೊಳಿಸಿದೆ. ಇದೀಗ ಸ್ಯಾಮ್ಸಂಗ್ ಭಾರತಕ್ಕೆ ಹಣಕಾಸು ಹಾಗೂ ವೈದ್ಯಕೀಯ ಸಲಕರಣೆ ನೆರವು ಘೋಷಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ನವೆದೆಹಲಿ(ಮೇ.04): ಕೊರೋನಾದಿಂದ ಭಾರತದ ಪರಿಸ್ಥಿತಿ ಹದಗೆಟ್ಟಿದೆ. ಆರೋಗ್ಯ ಕ್ಷೇತ್ರ ಅತ್ಯಂತ ಕೆಟ್ಟ ಸವಾಲನ್ನು ಎದುರಿಸುತ್ತಿದೆ. ವೈರಸ್ ವಿರುದ್ಧ ಸತತ ಹೋರಾಟ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಇದೀಗ ಸ್ಯಾಮ್ಸಂಗ್ ನೆರವು ಘೋಷಿಸಿದೆ.
ಪಾಂಡ್ಯ ಕುಟುಂಬದಿಂದ 200 ಆಕ್ಸಿಜನ್ ಕಾನ್ಸಟ್ರೇಟರ್ಸ್; ನೆರವು ಘೋಷಿಸಿದ ಹಾರ್ದಿಕ್
undefined
ಭಾರತದ ಆರೋಗ್ಯ ಕ್ಷೇತ್ರಕ್ಕೆ ವೈದ್ಯಕೀಯ ಸಲಕರಣೆ, ಅತೀ ಕಡಿಮೇ ವೇಸ್ಟೇಜ್ ಹೊಂದಿರುವ LDS ಸಿರಿಂಜ್, ಆಕ್ಸಿಜನ್ ಕಾನ್ಸಟ್ರೇಟರ್ಸ್, ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಹಲವು ವೈದ್ಯಕೀಯ ಸಲಕರಣೆಗಳನ್ನು ಸ್ಯಾಮ್ಸಂಗ್ ನೀಡುವುದಾಗಿ ಘೋಷಿಸಿದೆ.
ಸ್ಯಾಮ್ಸಂಗ್ ಗ್ಯಾಲಾಕ್ಸಿ F62 ರಿಲಾಯನ್ಸ್ ಡಿಜಿಟಲ್, ಜಿಯೋ ಸ್ಟೋರ್‌ನಲ್ಲಿ ಲಭ್ಯ!
ವಿಶೇಷವಾಗಿ ಸೌತ್ ಕೊರಿಯಾದಿಂದ ಲಸಿಕೆ ವ್ಯರ್ಥವಾಗುವುದನ್ನು ತಡೆಯಲು ಸೌತ್ ಕೊರಿಯಾದಿಂದ LDS ಸಿರಿಂಜ್‌ಗಳನ್ನು ಏರ್‌ಲಿಫ್ಟ್ ಮಾಡಿ ಭಾರತಕ್ಕೆ ಕಳುಹಿಸಲು ಸ್ಯಾಮ್ಸಂಗ್ ನಿರ್ಧರಿಸಿದೆ. ಈ ಮೂಲಕ ಸವಾಲಾಗಿರುವ ಭಾರತದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಬೆಂಬಲ ಹಾಗೂ ಆತ್ಯಾಧುನಿಕ ವೈದ್ಯಕೀಯ ಸಲಕರಣೆಗಳು ಸಿಗಲಿದೆ.
ಭಾರತದ ವಿವಿಧ ಪಾಲುದಾರರೊಂದಿಗೆ ಮಾತುಕತೆ ನಡೆಸಿದ ಸ್ಯಾಮ್ಸಂಗ್ ಈ ನಿರ್ಧಾರ ಘೋಷಿಸಿದೆ. ಇನ್ನು ತನ್ನ ಅತೀ ದೊಡ್ಡ ಘಟಕ ಹೊಂದಿರುವ ಉತ್ತರ ಪ್ರದೇಶ ಹಾಗೂ ತಮಿಳುನಾಡಿಗೆ ಹೆಚ್ಚುವರಿಯಾಗಿ 100 ಆಕ್ಸಿಡನ್ ಕಾನ್ಸಟ್ರೇಟರ್ಸ್, 3,000 ಆಕ್ಸಿಜನ್ ಸಿಲಿಂಡರ್ ಸೇರಿದಂತೆ 3 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ವೈದ್ಯಕೀಯ ಸಲಕರಣೆಗಳನ್ನು ನೀಡುತ್ತಿದೆ.
ಸೋಂಕಿತರ ನೆರವಿಗೆ ಧಾವಿಸಿದ ರಾಜೀವ್ ಚಂದ್ರಶೇಖರ್; ಬೆಂಗಳೂರು ಪ್ರತಿಷ್ಠಾನದಿಂದ ಆಕ್ಸಿಜನ್ ಪೂರೈಕೆ
ಲಸಿಕೆ ಕೊರತೆ, ಅಭಾವ ಎಷ್ಟರಮಟ್ಟಿಗಿದೆ ಅನ್ನೋದನ್ನು ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ. 18 ವರ್ಷ ಮೇಲ್ಪಟ್ಟವರಿಗೆ ಮೇ01ರಿಂದ ಲಸಿಕೆ ಹಾಕಲು ಗ್ರೀನ್ ಸಿಗ್ನಲ್ ನೀಡಿದರೂ, ಬಹುತೇಕ ರಾಜ್ಯಗಳು ಲಸಿಕೆ ಇಲ್ಲದೆ ಇನ್ನೂ ಅಭಿಯಾನ ಆರಂಭಿಸಿಲ್ಲ. ಹೀಗಾಗಿ ಸೌತ್ ಕೊರಿಯಾದಿಂದ LDS ಸಿರಿಂಜನ್ನು ಸ್ಯಾಮ್ಸಂಗ್ ಏರ್‌ಲಿಫ್ಟ್ ಮಾಡಿ ಭಾರತಕ್ಕೆ ಕಳಹಿಸುತ್ತಿದೆ.
LDS ಅಥವಾ ಲೋ ಡೆಡ್ ಸ್ಪೇಸ್ ಸಿರಿಂಜ್‌ಗಳು ಚುಚ್ಚು ಮದ್ದಿನ ನಂತರ ವ್ಯರ್ಥವಾಗುವ ಔಷಧಿ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಸದ್ಯ ಸಿರಿಂಜಿನಲ್ಲಿ ಡೆಡ್ ಸ್ಪೇಸ್‌ನಲ್ಲಿ ಲಸಿಕೆ ಉಳಿಯುತ್ತದೆ. ಇದನ್ನು ಗಮನದಲ್ಲಿರಿಸಿ, ನರ್ಸ್ ಅಥವಾ ಅಸ್ಪತ್ರೆ ಸಿಬ್ಬಂದಿ ನಿಗದಿತ ಲಸಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಿರಿಂಜಿಗೆ ಎಳೆದುಕೊಂಡು, ಚುಚ್ಚು ಮದ್ದು ನೀಡಲಾಗುತ್ತದೆ. ಆದರೆ LDS ಸಿರಿಂಜಿನಲ್ಲಿ ಈ ಅವಶ್ಯಕತೆ ಇಲ್ಲ. ಎಷ್ಟು ಪ್ರಮಾಣದ ಲಸಿಕೆ ನೀಡಬೇಕೋ, ಅಷ್ಟು ಮಾತ್ರ ತೆಗೆದುಕೊಂಡರೆ ಸಾಕು.
ಏಪ್ರಿಲ್ 2020 ರಲ್ಲಿ ಕೊರೋನಾ ವೈರಸ್ ತಡೆಗೆ ಸ್ಯಾಮ್ಸಂಗ್ 20 ಕೋಟಿ ರೂಪಾಯಿ ದೇಣಿಗೆ ನೀಡಿತ್ತು. ಇದೀಗ 37 ಕೋಟಿ ರೂಪಾಯಿ ವೈದ್ಯಕೀಯ ಸಲಕರಣೆ ನೀಡುತ್ತಿದೆ.