ಶಿಯೋಮಿಯಿಂದ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್?

By Suvarna NewsFirst Published Apr 29, 2021, 4:37 PM IST
Highlights

ಚೀನಾ ಮೂಲದ ಪ್ರಖ್ಯಾತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಆನ್‌ಲೈನ್ ಮಾಧ್ಯಮ ವರದಿಗಳು ಹೇಳುತ್ತಿವೆ. ಕಂಪನಿಯು ಇತ್ತೀಚೆಗೆಷ್ಟೇ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದೀಗ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಗೆಗಿನ ಮಾಹಿತಿಯು ಹೆಚ್ಚು ಸದ್ದು ಮಾಡುತ್ತಿದೆ.

ಶಿಯೋಮಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್ ಅನ್ನು ಅಭಿವೃದ್ಧಿಪಡಿಸುತ್ತಿದೆಯೇ? ಕೆಲವು ಆನ್‌ಲೈನ್ ಮಾಧ್ಯಮಗಳ ವರದಿಗಳ ಪ್ರಕಾರ ಹೌದು. ಚೀನಾ ಮೂಲದ ಪ್ರಖ್ಯಾತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾಗಿರುವ ಶಿಯೋಮಿ, 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

ಇತ್ತೀಚೆಗಷ್ಟೇ ಶಿಯೋಮಿ ಕಂಪನಿ ಶಿಯೋಮಿ ಎಂಐ 11 ಎಕ್ಸ್ ಪ್ರೋ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು 108 ಮೆಗಾ ಪಿಕ್ಸೆಲ್ ಸ್ಯಾಮ್ಸಂಗ್ ಎಚ್ಎಂ2 ಪ್ರೈಮರಿ ಕ್ಯಾಮೆರಾ ಅಳವಡಿಸಿತ್ತು. ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದ ಬೆನ್ನಲ್ಲೇ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್ ಬಗ್ಗೆ ವರದಿಯಾಗುತ್ತಿದೆ.

ಕೋವಿಡ್ ಲಸಿಕೆ: CoWINನಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ?

ಶಿಯೋಮಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಗ್ಗೆ ಕೆಲವು ಟಿಪ್ಸಟರ್‌ಗಳು ಮಾಹಿತಿಯನ್ನು ಹೊರ ಹಾಕಿದ್ದಾರೆ. ಆನ್‌ಲೈನ್‌ಗಳಲ್ಲಿ ಹಲವು ದಿನಗಳಲ್ಲಿ ಶಿಯೋಮಿಯ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇದೇ ವೇಳೆ, ಕೆಲವು ಟಿಪ್ಸಟರ್‌ಗಳು ಸ್ಮಾರ್ಟ್‌ಫೋನ್ ಕ್ಯಾಮೆರಾಗಳಿಗಾಗಿ ಸ್ಯಾಮ್‌ಸಂಗ್ 200 ಮೆಗಾಪಿಕ್ಸೆಲ್ ಐಸೊಸೆಲ್ ಸಂವೇದಕದಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗುತ್ತಿದೆ.

ಟಿಪ್ಸಟರ್ ಡಿಜಿಟಲ್ ಚಾಟ್ ಸ್ಟೇಷನ್ ಟ್ವೀಟ್ ಮೂಲಕ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವುದನ್ನು  ಖಚಿತಪಡಿಸಿದೆ. ವೀಬೋದಲ್ಲಿ ಈ ಬಗ್ಗೆ ಪೋಸ್ಟ್ ಷೇರ್ ಮಾಡಲಾಗಿದೆ. ಈ ಟಿಪ್ಸಟರ್ ನಿರ್ದಿಷ್ಟವಾಗಿ ಶಿಯೋಮಿಯೇ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸ್ಮಾರ್ಟ್‌ಪೋನ್ ಮೇಲೆ ಕೆಲಸ ಮಾಡುತ್ತಿದೆ ಎಂದು ಹೇಳಿಲ್ಲವಾದರೂ ಐಟಿ ಹೋಮ್ ಮಾತ್ರ ಈ ಬಗ್ಗೆ ವರದಿ ಮಾಡಿ ಖಚಿತಪಡಿಸಿದೆ. ಜೊತೆಗೆ, ಟಿಪ್ಸಟರ್ ಐಸಿ ಯುನಿವರ್ಸ್ ಐಸೋಸೆಲ್ ಸೆನ್ಸರ್ ಅನ್ನು ಸ್ಯಾಮ್ಸಂಗ್ ಅಭಿವೃದ್ಧಪಡಿಸುತ್ತಿದೆ ಮತ್ತು ಅದು 0.64 ಮೈಕ್ರಾನ್ ಪಿಕ್ಸೆಲ್ ಹೊಂದಿದೆ ಎಂದು ಹೇಳಿದೆ. ಆದರೆ, ಈ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಈ ಟಿಪ್ಸಟರ್‌ಗಳು ತಮಗಿರುವ ಮಾಹಿತಿಯನ್ನು ಬಳಸಿಕೊಂಡು ಈ ಬಗೆಗಿನ ವರದಿ ಹಾಕಿದ್ದಾರೆ.

200 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿದಂತೆ ಸ್ಯಾಮ್ಸಂಗ್  ಹೆಸರು ಮುಂಚೂಣಿಯಲ್ಲಿರುವುದು ಇದೇ ಮೊದಲೇನಲ್ಲ. ಐಸ್ ಯುನಿವರ್ಸ್ ಟ್ವೀಟ್ ಹೊರತಾಗಿಯೂ ಟಿಪ್ಸಟರ್, ವೈಲ್ಯಾಬ್ ಕೂಡ ಸ್ಯಾಮ್ಸಂಗ್ ಕಂಪನಿಯ 200 ಮೆಗಾ ಪಿಕ್ಸೆಲ್ ಸೆನ್ಸರ್ ಮೇಲೆ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದೆ.

ಇನ್ಸ್‌ಟಾಕ್ಸ್ ಮಿನಿ 40 ಇನ್ಸ್‌ಟಂಟ್ ಕ್ಯಾಮೆರಾ ಬಿಡುಗಡೆ, ಬೆಲೆ ಕೇವಲ 8,499 ರೂ.!

ಈ ವೈಲ್ಯಾಬ್ ಪ್ರಕಾರ, ಸ್ಯಾಮ್ಸಂಗ್ ಅಭಿವೃದ್ಧಿಪಡಿಸುತ್ತಿರುವ 200 ಮೆಗಾ ಪಿಕ್ಸೆಲ್ ಕ್ಯಾಮೆರಾ 1/ 1.37 ಇಂಚ್ ಮತ್ತು 1.28 ಮೈಕ್ರಾನ್ ಪಿಕ್ಸಲ್ ಒಳಗೊಂಡಿದೆ. 4 ಇನ್ 1 ಮತ್ತು 16 ಇನ್ 1 ಪಿಕ್ಸೆಲ್ ಬಿನ್ನಿಂಗ್ ಟೆಕ್ನಾಲಜಿಗೂ ಇದು ಬೆಂಬಲಿಸುತ್ತದೆ. ಈ ಟೆಕ್ನಾಲಜಿಯು ಶಬ್ಧವನ್ನು ಕಡಿಮೆ ಮಾಡಿ ಇಮೇಜ್ ಅನ್ನು ಉನ್ನತಿಕರಿಸುತ್ತದೆ. ಜೊತೆಗೆ, ಈ ಸೆನ್ಸರ್ ಮೂಲಕ ನೀವು 16ಕೆ ಕ್ವಾಲಿಟಿ ವಿಡಿಯೋ ಕೂಡ ರೆಕಾರ್ಡ್ ಮಾಡಬಹುದು.

ಈ ಸ್ಯಾಮ್ಸಂಗ್ ಅಭಿವೃದ್ಧಿಪಡಿಸುತ್ತಿರುವ 200 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಈ ಶಿಯೋಮಿ ಕಂಪನಿಯು ತನ್ನ ಸ್ಮಾರ್ಟ್‌ಫೋನ್‌ಗೆ ಬಳಸಲಿದೆ ಎಂಬ ವರದಿಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಒಂದು ವೇಳೆ, 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುವುದು ನಿಜವಾದರೆ ಸ್ಮಾರ್ಟ್‌ಫೋನ್‌ ಬಳಕೆಯು ಮತ್ತೊಂದು ಹಂತಕ್ಕೆ ಹೋಗಲಿದೆ. ಅಂಗೈಯಲ್ಲೇ ಮಾಯಾಜಾಲವನ್ನು ಸೃಷ್ಟಿಸುತ್ತಿರುವ ಈ ಸ್ಮಾರ್ಟ್‌ಫೋನ್ ಹೊಸ ಹೊಸ ಸಾಧ್ಯತೆಗಳನ್ನು ನಮ್ಮ ಮುಂದೆ ತೆರೆದಿಟ್ಟಿವೆ. ಇದೀಗ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆಯಲ್ಲಿ ಬರುವುದಾದರೆ ಬಳಕೆದಾರರಿಗೆ ಹೊಸ ಅನುಭವ ದೊರೆಯಲಿದೆ ಎನ್ನುತ್ತಾರೆ ತಜ್ಞರು.

ಜೆಬ್ರಾನಿಕ್ಸ್‌ನಿಂದ ಹೊಸ ಫಿಟ್ನೆಸ್ ಬ್ಯಾಂಡ್ ಬಿಡುಗಡೆ, ಸಖತ್ ಫೀಚರ್ಸ್

click me!