ವಾಟ್ಸಪ್‌ನಲ್ಲಿ ಇನ್ನು ಮುಂದೆ ಬಳಕೆದಾರರು ತಮ್ಮ ಮಾಹಿತಿಯನ್ನು ಫೇಸ್‌ಬುಕ್ ಜೊತೆ ಹಂಚಿಕೊಳ್ಳಬೇಕು ಎಂಬ ನೂತನ ನಿಯಮ| ಫೇಸ್‌ಬುಕ್ ಜೊತೆ ಮಾಹಿತಿ ಹಂಚಿಕೆ ವಾಟ್ಸಪ್ ಬ್ಯುಸಿನೆಸ್ ಚಾಟ್‌ಗಳಿಗೆ ಮಾತ್ರ ಅನ್ವಯ
ವಾಷಿಂಗ್ಟನ್(: ವಾಟ್ಸಪ್‌ನಲ್ಲಿ ಇನ್ನು ಮುಂದೆ ಬಳಕೆದಾರರು ತಮ್ಮ ಮಾಹಿತಿಯನ್ನು ಫೇಸ್‌ಬುಕ್ ಜೊತೆ ಹಂಚಿಕೊಳ್ಳಬೇಕು ಎಂಬ ನೂತನ ನಿಯಮಕ್ಕೆ ಸಂಬಂಧಿಸಿದಂತೆ ವಾಟ್ಸಪ್ ಸಂಸ್ಥೆ ಸ್ಪಷ್ಟನೆ ನೀಡಿದೆ. ಫೆ.8ರಿಂದ ಜಾರಿ ಆಗಲಿರುವ ನೂತನ ನಿಯಮ ವಾಟ್ಸಪ್‌ನಲ್ಲಿ ಬ್ಯುಸಿನೆಸ್ ಅಕೌಂಟ್‌ನ ಚಾಟ್‌ಗಳಿಗೆ ಮಾತ್ರ ಅನ್ವಯ ಆಗಲಿದೆ. ಸಾಮಾನ್ಯ ಸಂದೇಶ ವಿನಿಮಯಕ್ಕೆಂದು ಬಳಸುವ ಬಳಕೆದಾರರ ನಿಯಮಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಷರತ್ತಿಗೆ ಒಪ್ಪದಿದ್ದರೆ ಫೆ.8ರಿಂದ ವಾಟ್ಸಾಪ್ ಬಂದ್: ಸದ್ದಿಲ್ಲದೆ ಹೊಸ ನಿಯಮ!
undefined
ಹೊಸ ನಿಯಮ ಜಾರಿಯಿಂದ ಬ್ಯುಸಿನೆಸ್ ಅಕೌಂಟ್ ಇರುವವರು ಫೇಸ್‌ಬುಕ್‌ನ ನೆರವಿನೊಂದಿಗೆ ಹೆಚ್ಚಿನ ಸುರಕ್ಷಿತ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ಹೆಚ್ಚಿನ ಜನರು ವಾಟ್ಸಪ್ ಅನ್ನು ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಂವಹನಕ್ಕೆ ಬಳಕೆ ಮಾಡುವ ಕಾರಣ ಅವರ ಮಾಹಿತಿಗಳನ್ನು ಫೇಸ್‌ಬುಕ್ ಬಳಕೆ ಮಾಡುವುದಿಲ್ಲ. ವಾಟ್ಸಪ್ ಬ್ಯುಸಿನೆಸ್ ಮೂಲಕ ಸಂವಹನ ನಡೆಸಬೇಕೇ? ಅಥವಾ ಬೇಡವೇ ಎಂಬ ಆಯ್ಕೆಯನ್ನು ಕೂಡ ಬಳಕೆದಾರಿಗೇ ನೀಡಲಾಗಿದೆ ವಾಟ್ಸಪ್‌ನ ಸ್ಪಷ್ಟನೆಯಲ್ಲಿ ತಿಳಿಸಲಾಗಿದೆ.
ವಾಟ್ಸಪ್‌ನಲ್ಲಿ ಈ ವರ್ಷ ಬರಲಿದೆ ಮತ್ತೆ 6 ಹೊಸ ಫೀಚರ್‌ಗಳು..!
ಈ ನಡುವೆ ವಾಟ್ಸಾಪ್‌ನ ಹೊಸ ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿಶ್ವದ ನಂ.1 ಶ್ರೀಮಂತರಾದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ‘ಸಿಗ್ನಲ್’ ಆ್ಯಪ್ ಬಳಸುವಂತೆ ಟ್ವೀಟ್ ಮಾಡಿದ್ದಾರೆ. ಸಿಗ್ನಲ್ ಎಂಬುದು ಬಳಕೆದಾರರ ಖಾಸಗಿತನ ಮತ್ತು ಭದ್ರತೆಗೆ ಹೆಚ್ಚಿನ ಮಹತ್ವ ನೀಡುವ ಆ್ಯಪ್ ಆಗಿದ್ದು, ವಿಶ್ವಾದ್ಯಂತ ಭದ್ರತಾ ತಜ್ಞರು, ಸಂಶೋಧಕರು, ಶಿಕ್ಷಣ ತಜ್ಞರು ಹಾಗೂ ಪತ್ರಕರ್ತರು ಬಳಸುತ್ತಿದ್ದಾರೆ. ಆದರೆ ಸಿಗ್ನಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡವರಿಗೆ ಪರಿಶೀಲನೆ(ವೆರಿಫಿಕೇಷನ್) ಕೋಡ್ ರವಾನೆಯಾಗುವುದು ತಡವಾಗುತ್ತಿದೆ. ಈ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಲು ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಸಿಗ್ನಲ್ ಆ್ಯಪ್ ಟ್ವೀಟ್ ಮಾಡಿದೆ.