ನೋಕಿಯಾ 7.3 ಸ್ಮಾರ್ಟ್‌ಫೋನ್‌ನಲ್ಲಿ ಪವರ್‌‌ಫುಲ್ ಬ್ಯಾಟರಿ

By Suvarna News  |  First Published Jan 6, 2021, 5:28 PM IST

ಈ ಹಿಂದೆಯೂ ನೋಕಿಯಾ ಫೋನ್‌‌‌ಗಳು ತನ್ನ ಅದ್ಭುತ ಬ್ಯಾಟರಿ ಸಾಮರ್ಥ್ಯದಿಂದಾಗಿಯೇ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿದ್ದವು. ಇದೀಗ ನೋಕಿಯಾ ತನ್ನ ಮುಂಬರುವ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಗಳನ್ನು ಬಳಕೆ ಮಾಡುತ್ತಿದೆ. ಈ ಹೊಸ ಸ್ಮಾರ್ಟ್‌ಫೋನ್ ವರ್ಷಾಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.


5050 mAh ಬ್ಯಾಟರಿ ಒಳಗೊಂಡ ಸ್ಮಾರ್ಟ್‌ಫೋನ್ ಅನ್ನು ನೋಕಿಯಾ ಬಿಡುಗಡೆ ಮಾಡುತ್ತಿದೆಯಾ?

ಗಿಝ್‌ಚೀನಾ ವರದಿಯ ಪ್ರಕಾರ, ಇದು ನಿಜ. ನೋಕಿಯಾ ಬ್ರ್ಯಾಂಡ್ ಹೊಂದಿರುವ ಎಚ್ಎಂಡಿ ಗ್ಲೋಬಲ್ ಕಂಪನಿಯು ನೋಕಿಯಾ 7.3 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಪ್ಲ್ಯಾನಿಂಗ್ ಮಾಡಿಕೊಳ್ಳುತ್ತಿದೆ. ಜಪಾನ್‌ನ ಟಿಯುವಿ ಹೇಯಿನ್‌ಲ್ಯಾಂಡ್ ಪ್ರಮಾಣೀಕರಣ ಬ್ಯೂರೋದಿಂದ ಹೊಸ ಮಾಹಿತಿ ಬಂದಿದ್ದು, ಅದರ  ವೆಬ್‌ಸೈಟ್‌ನಲ್ಲಿ ಎರಡು ನೋಕಿಯಾ ಮಾದರಿಗಳ ಬ್ಯಾಟರಿಗಳಿಗೆ ಪ್ರಮಾಣಪತ್ರಗಳು ದೊರೆತಿವೆ ಎಂದು ಗಿಜ್ಚಿನಾ ವರದಿ ಮಾಡಿದೆ.

Tap to resize

Latest Videos

undefined

ಜ.11ಕ್ಕೆ ಒನ್‌ಪ್ಲಸ್ ಫಿಟ್ನೆಸ್ ಬ್ಯಾಂಡ್ ಬಿಡುಗಡೆ?

ಈ ಪೈಕಿ ನೋಕಿಯಾ 7.3 ಸ್ಮಾರ್ಟ್‌ಫೋನ್‌ನಲ್ಲಿ 5050 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇರಲಿದೆ. ಮತ್ತೊಂದು ನೋಕಿಯಾ ಫೋನ್‌ ಅಂದರೆ ಬಹುಶಃ ಅದು ನೋಕಿಯಾ 6.3 ಅಥವಾ 6.4 ಇರಬಹುದು.  ಈ ಸ್ಮಾರ್ಟ್‌ಫೋನ್‌ನಲ್ಲಿ ಕಡಿಮೆ ಸಾಮರ್ಥ್ಯದ ಬ್ಯಾಟರಿ ಇರಲಿದೆ. ಅಂದಾಜು 4470 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇರಬಹುದು ಎಂದು ಅಂದಾಜಿಸಲಾಗಿದೆ.

ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಗಳನ್ನು ಹೊಂದಿರುವ ಈ ನೋಕಿಯಾ ಫೋನ್‌ಗಳು ಈ ವರ್ಷಾಂತ್ಯಕ್ಕೆ ಬಿಡುಗಡೆಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಫೋನ್ ಬಿಡುಗಡೆಯ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ ಎನ್ನಬಹುದು. ನೋಕಿಯಾ 7.3 ಸ್ಮಾರ್ಟ್‌ಫೋನ್ 5ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡಲಿದೆ. ಜೊತೆಗೆ, 90Hz ಅಥವಾ 120Hz ಡಿಸ್‌ಪ್ಲೇಗಳನ್ನು ಹೊಂದಿರಬಹುದಾದ ಸಾಧ್ಯತೆಗಳಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿ ಬಿಟ್ಟುಕೊಟ್ಟಿಲ್ಲ. ಆದರೂ, ಹೊಸ ಸ್ಮಾರ್ಟ್‌ಫೋನ್‌ 48 ಮೆಗಾ ಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು 12 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ ಹಾಗೂ 2 ಮೆಗಾ ಪಿಕ್ಸೆಲ್ ಕ್ಯಾಮರಾಗಳ ಸೆಟ್‌ಅಪ್ ಹೊಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ನೋಕಿಯಾ 7.3 ಸ್ಮಾರ್ಟ್‌ಫೋನ್‌ನ ಮುಂಬದಿಯಲ್ಲಿ ಸೆಲ್ಫಿ ಕ್ಯಾಮಾರ ಕೂಡ ಇದ್ದು, ಅದು 24 ಮೆಗಾ ಪಿಕ್ಸೆಲ್ ಕ್ಯಾಮರವಾಗಿರಲಿದೆ ಎನ್ನುತ್ತದೆ ವರದಿ.

ಏರ್‌ಟೆಲ್‌ನ 199 ರೂ. ಪ್ಲ್ಯಾನ್ ಪರಿಷ್ಕರಣೆ, ನಿತ್ಯ 1.5 ಜಿಬಿ ಡೇಟಾ!

ಈ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಎಂದು  ಹೇಳಲಾಗುತ್ತಿರುವ ನೋಕಿಯಾ 7.3 ಸ್ಮಾರ್ಟ್‌ಫೋನ್‌ 18 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ  ಬೆಂಬಲ ನೀಡಲಿದೆ. ಯುಎಸ್‌ಬಿ ಟೈ- ಸಿ ಪೋರ್ಟ್ ಮೂಲಕ ನೀವು ಚಾರ್ಜಿಂಗ್ ಮಾಡಿಕೊಳ್ಳಬಹುದು. ಜೊತೆಗೆ, ಈ ಸ್ಮಾರ್ಟ್‌ಫೋನ್‌ 3.5 ಹೆಡ್‌ಫೋನ್ ಜಾಕ್ ಹೊಂದಿರಲಿದೆ.

ಮತ್ತೊಂದು ಗಮನಿಸಬೇಕಾದ ಸಂಗತಿ ಏನೆಂದರೆ, ಎಚ್‌ಎಂಡಿ ಗ್ಲೋಬಲ್ ಕಂಪನಿಯು  ನೋಕಿಯಾ 9.3 ಪ್ಯೂರ್‌ವ್ಯೂ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಬಗ್ಗೆಯೂ ಪ್ಲ್ಯಾನಿಂಗ್ ನಡೆಸಿದೆ ಎನ್ನಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ 108 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮರಾ, ಜೇಸಿಸ್ ಆಪ್ಟಿಕ್ಸ್‌ನೊಂದಿಗೆ 64 ಮೆಗಾ ಪಿಕ್ಸೆಲ್ ಸೆಕೆಂಡರಿ ಕ್ಯಾಮರಾದೊಂದಿಗೆ ಬರಲಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲಕಾಂನ ಸ್ನ್ಯಾಪ್‌ಡ್ರಾಗನ್ 865 ಪ್ರೊಸೆಸರ್ ಮತ್ತು ಒಎಲ್ಇಡಿ ಡಿಸ್‌ಪ್ಲೇ ಅಳವಡಿಸಬಹುದು ಎನ್ನಲಾಗುತ್ತಿದೆ.

ಭಾರತವೂ ಸೇರಿದಂತೆ ಜಗತ್ತಿನ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನೋಕಿಯಾ ತನ್ನ ಮೊದಲಿನ ಹಿಡಿತವನ್ನು ಸಾಧಿಸುವ  ಪ್ರಯತ್ನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ನೋಕಿಯಾ ಬ್ರ್ಯಾಂಡ್ ಹೊಂದಿರುವ ಎಚ್ಎಂಡಿ ಗ್ಲೋಬಲ್ ಕಂಪನಿಯು ಅನೇಕ ಹೊಸ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಒಂದರ ಮೇಲೊಂದು ಎಂಬಂತೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. 2021ರಲ್ಲೂ ಅನೇಕ ಸ್ಮಾರ್ಟ್‌‌‌ಫೋನ್‌‌ಗಳು ಮಾರುಕಟ್ಟೆಗೆ ಬರಲು ಸಜ್ಜಾಗಿವೆ. ಬಹುತೇಕ ಎಲ್ಲ ಕಂಪನಿಗಳು ಹೊಸ ಹೊಸ ಫೀಚರ್‌ಗಳೊಂದಿಗೆ ಗ್ರಾಹಕರಿಗೆ ಅತ್ಯಾನುಭವ ನೀಡುವ ದೆಸೆಯಿಂದ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಈ ವಿಷಯದಲ್ಲಿ ನೋಕಿಯಾ ಕೂಡ ಹಿಂದೆ ಬಿದ್ದಿಲ್ಲ.

ಹೊಸ ವರ್ಷಕ್ಕೆ ವಾಟ್ಸಾಪ್‍ನಲ್ಲಿ 140 ಕೋಟಿ ಧ್ವನಿ ಮತ್ತು ವಿಡಿಯೋ ಕರೆ!

click me!