
ಆತ್ಮನಿರ್ಭರ್ ಭಾರತ್ ಪ್ರೇರಣೆಯ ಫಲವಾಗಿ ಇತ್ತೀಚೆಗಷ್ಟೇ ದೇಶಿ ಕಂಪನಿ ಮೈಕ್ರೋಮ್ಯಾಕ್ಸ್ ಹೊಸ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಗೆ ಭರ್ಜರಿ ರೀ ಎಂಟ್ರಿ ಕೊಟ್ಟಿತ್ತು. ಇದೀಗ ಮತ್ತೊಂದು ದೇಶಿ ಕಂಪನಿ ಲಾವಾ ಕೂ ಅದೇ ಹಾದಿಯನ್ನು ತುಳಿದು ವಿಶಿಷ್ಟ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದರ ಮೂಲಕ ಸದ್ದು ಮಾಡುತ್ತಿದೆ.
ನೋಕಿಯಾ 7.3 ಸ್ಮಾರ್ಟ್‌ಫೋನ್‌ನಲ್ಲಿ ಪವರ್‌ಫುಲ್ ಬ್ಯಾಟರಿ
ಈ ಬಾರಿ ವಿಶಿಷ್ಟ ರೀತಿಯಲ್ಲಿ ಲಾವಾ ಹೊಸ ಸಾಹಸಕ್ಕೆ ಕೈ ಹಾಕಿದೆ. ಗ್ರಾಹಕರು ತಮ್ಮ ಇಚ್ಛೆಗೆ ಅನುಗುಣವಾಗಿ ಸ್ಮಾರ್ಟ್‌ಫೋನ್‌ಗಳ ಬಿಡಿ ಭಾಗಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಲಾವಾ ಒದಗಿಸುತ್ತಿದೆ. ಅಂದರೆ, ಇಂಥ ಕಸ್ಟಮಿಸಬಲ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿರುವುದು ಜಗತ್ತಿನಲ್ಲೇ ಇದೇ ಮೊದಲು. ಅಂದರೆ, ಗ್ರಾಹಕರು ಕ್ಯಾಮರಾ, ಮೆಮೋರಿ, ಸ್ಟೋರೇಜ್ ಸಾಮರ್ಥ್ಯ ಮತ್ತು ಬಣ್ಣಗಳನ್ನು ತಮ್ಮ ಇಚ್ಛಾನುಸಾರ ಆಯ್ಕೆ ಮಾಡಿಕೊಳ್ಳಬಹುದು. ಈ ಕಸ್ಟಮೈಸ್ಡ್ ಸ್ಮಾರ್ಟ್ ಫೋನ್ ಜೊತೆಗೆ ಕಂಪನಿ ಲಾವಾ ಜೆಡ್ ಸೀರಿಸ್‌ನಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಫೋನ್‌ಗಳ ಹತ್ತು ಸಾವಿರ ರೂಪಾಯಿ ಒಳಗೇ ಇರಲಿದೆ. ಲಾವಾ ಮೈಜೆಡ್ ಕಂಪನಿಯ ಕಸ್ಟಮೈಸ್ಡ್ ಸ್ಮಾರ್ಟ್‌ಫೋನ್ ಸೀರಿಸ್ ಆಗಲಿದೆ. ಗ್ರಾಹಕರು ಕ್ಯಾಮರಾ, ರ್ಯಾಮ್ ಮತ್ತು ಕಲರ್ ಸೇರಿದಂತೆ 66 ಸಂಯೋಜನೆಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು ಮತ್ತು ಅವುಗಳನ್ನು ಬಳಸಬಹುದು.
ಫೋನ್‌ನ ಜೀವಿತಾವಧಿಯಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಗ್ರಾಹಕರು ತಮ್ಮ ಫೋನ್ ಅನ್ನು ಅಪ್‌ಗ್ರೇಡ್ ಮಾಡಿಕೊಳ್ಳಬಹುದು. ಅವರು ಫ್ರಂಟ್ ಕ್ಯಾಮರಾ, ರಿಯರ್ ಕ್ಯಾಮರಾ, ರ್ಯಾಮ್, ಬಣ್ಣ ಸೇರಿದಂತೆ ಯಾವುದೇ ಕಾಂಪೋನೆಂಟ್‌ಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ, ಕಡಿಮೆ ಕಾನ್ಫಿಗರೇಷನ್‌ನಿಂದ ಹೈ ಕಾನ್ಫಿಗರೇಷನ್‌ಗೂ ಅಪ್‌ಗ್ರೇಡ್ ಕೂಡ ಮಾಡಿಕೊಳ್ಳಬಹುದು. ಈ ಇಡೀ ಪ್ರೋಗ್ರಾಮ್ ಅನ್ನು ಭಾರತದಲ್ಲಿರುವ ಪ್ರತಿಭೆಗಳಿಂದಲೇ ರೂಪಿಸಲಾಗಿದೆ ಎಂದು ಲಾವಾ ಇಂಟರ್‌ನ್ಯಾಷನಲ್ ಪ್ರೆಸಿಡೆಂಟ್ ಮತ್ತು ಬಿಸಿನೆಸ್ ಹೆಡ್ ಸುನಿಲ್ ರೈನಾ ಅವರು ಸ್ಮಾರ್ಟ್‌ಫೋನ್ ಬಿಡುಗಡೆ ವೇಳೆ ಹೇಳಿದ್ದಾರೆ.
ಫೋನ್ ಬೆಲೆ ಎಷ್ಟು?
Lava Z1: Rs 5,499, Lava Z2: Rs 6,999, Lava Z4: Rs 8,999, Lava Z6: Rs 9,999 ಇರಲಿದೆ. ಇನ್ನು ಲಾವಾ ಮೈಜೆಡ್ ಸ್ಮಾರ್ಟ್‌ಫೋನ್ ಬೆಲೆ 6,999ರಿಂದ 10,500 ರೂಪಾಯಿವರೆಗೂ ಇರಲಿದೆ. ಇದು ಗ್ರಾಹಕರು ತಮ್ಮ ಇಚ್ಛಾನುಸಾರ ಮೊಬೈಲ್ ಅನ್ನು ಕಸ್ಟಮೈಸ್ಡ್ ಮಾಡಿಕೊಳ್ಳುವುದರಿಂದ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ.
ಜ.11ಕ್ಕೆ ಒನ್‌ಪ್ಲಸ್ ಫಿಟ್ನೆಸ್ ಬ್ಯಾಂಡ್ ಬಿಡುಗಡೆ?
ಮೈಜೆಡ್ ಜೊತೆಯಲ್ಲೇ ಜೆಡ್2, ಜೆಡ್4 ಮತ್ತು ಜೆಡ್6 ಫೋನ್‌ಗಳು ಜನವರಿ 11ರಿಂದಲೇ ಮಾರಾಟಕ್ಕೆ ಲಭ್ಯವಾಗಲಿವೆ. ಸರ್ಕಾರದ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ ಯೋಜನೆಗೆ ಅರ್ಹತೆ ಪಡೆದ 16 ಕಂಪನಿಗಳಲ್ಲಿ ಲಾವಾ ಕೂಡ ಒಂದು. ಯೋಜನೆಯ ದೇಶೀಯ ಕಂಪನಿ ವಿಭಾಗದ ಅಡಿಯಲ್ಲಿ ಒಂದು ಯೂನಿಟ್‌ಗೆ 15,000 ರೂ.ಗಿಂತ ಕಡಿಮೆ ಬೆಲೆಯ ಮೊಬೈಲ್ ಫೋನ್‌ಗಳಲ್ಲಿ ಪ್ರೋತ್ಸಾಹ ಧನ ಪಡೆಯಲು ಕಂಪನಿಯು ಅರ್ಹವಾಗಿದೆ.
ವರ್ಷಕ್ಕೆ 4 ಕೋಟಿ ಫೀಚರ್ ಫೋನ್‌ಗಳು ಮತ್ತು 2.6 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ತನಗಿದೆ ಎಂದು ಲಾವಾ ಕಂಪನಿ ಹೇಳಿಕೊಂಡಿದೆ.
ಸ್ಮಾರ್ಟ್‌ಫೋನ್ ಮಾತ್ರವಲ್ಲದೇ ಕಂಪನಿ ವೀಯರಬಲ್ ಸೆಗ್ಮೆಂಟ್‌ಗೂ ಕಾಲಿಡುತ್ತಿದ್ದೆ. 2,699 ರೂ. ಮೌಲ್ಯ BeFIT ಸ್ಮಾರ್ಟ್‌ಬ್ಯಾಂಡ್ ಹೊಂದಿದೆ. ಇದು ದೇಹದ ಉಷ್ಣಾಂಶ, ಆಮ್ಲಜನಕದ ಲೇವಲ್, ಹಾರ್ಟ್ ರೇಟ್ ಸೇರಿದಂತೆ ಇನ್ನಿತರ ವಿಶೇಷ ಫೀಚರ್‌ಗಳನ್ನು ಒಳಗೊಂಡಿದೆ. ಲಾವಾ ಸ್ಮಾರ್ಟ್‌ಫೋನ್‌ಗಳ ಅಪ್‌ಗ್ರೇಡ್ ಸೇವೆಯು ಜೆಡ್‌ಅಪ್ ಸ್ಮಾರ್ಟ್‌ಫೋನ್ ಜೆಡ್1 ಮತ್ತು ಸ್ಮಾರ್ಟ್ ಬ್ಯಾಂಡ್ BeFIT ಜನವರಿ 26ರಿಂದ ಲಭ್ಯವಾಗಲಿದೆ.
ಏರ್‌ಟೆಲ್‌ನ 199 ರೂ. ಪ್ಲ್ಯಾನ್ ಪರಿಷ್ಕರಣೆ, ನಿತ್ಯ 1.5 ಜಿಬಿ ಡೇಟಾ!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.