ಸದ್ದಿಲ್ಲದೇ ಲಾಂಚ್ ಆದ ವಿವೋ ವೈ12ಜಿ ಸ್ಮಾರ್ಟ್‌ಫೋನ್

By Suvarna News  |  First Published Aug 6, 2021, 4:31 PM IST

ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ಬ್ರ್ಯಾಂಡ್ ಎನಿಸಿರುವ ವಿವೋ ಕಂಪನಿ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಹೊಸ ವಿವೋ ವೈ12ಜಿ ಸ್ಮಾರ್ಟ್‌ಫೋನ್ ಫೀಚರ್‌ಗಳು ಹಾಗೂ ಬೆಲೆಯ ದೃಷಿಯಿಂದ ಹೆಚ್ಚು ಗಮನ ಸೆಳೆಯುತ್ತಿದೆ. ಸದ್ದಿಲ್ಲದೇ ಬಿಡುಗಡೆಯಾಗಿರುವ ಈ ಫೋನ್ ಸಖತ್ ಫೀಚರ್‌ಗಳನ್ನು ಹೊಂದಿದೆ.


ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಭಾವಿಶಾಲಿ ಬ್ರ್ಯಾಂಡ್ ಆಗಿ ಬೆಳೆದಿರುವ ವಿವೋ  ಸದ್ದಿಲ್ಲದೇ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ. ಈ ಹೊಸ ಫೋನ್ ಲಾಂಚ್ ಬಗ್ಗೆ ಈ ಮೊದಲು ಯಾವುದೇ ರೀತಿಯ ಸುದ್ದಿಗಳಾಗಿರಲಿಲ್ಲ.

ಚೀನಾ ಮೂಲದ ವಿವೋ ಪ್ರೀಮಿಯಂ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕವಲಯವನ್ನು ಸೃಷ್ಟಿಸಿಕೊಂಡಿದೆ. ಕಂಪನಿಯು ಇದೀಗ ವಿವೋ ವೈ12ಜಿ ಎಂಬ ಹೊಸ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. 

Latest Videos

undefined

ಈ ಫೋನ್‌ ಬೆಲೆ ಮತ್ತು ಫೀಚರ್‌ಗಳ ದೃಷ್ಟಿಯಿಂದ ಹೆಚ್ಚು ಗಮನಾರ್ಹವಾಗಿದೆ. ಈ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ನೀವು ವಾಟರ್‌ಡ್ರಾಪ್ ಸ್ಟೈಲ್ ಡಿಸ್‌ಪ್ಲೇ ನಾಚ್ ಕಾಣಬಹುದು. ಕ್ವಾಲಕಾಂ ಸ್ನ್ಯಾಪ್‌ಡ್ರಾಗನ್ 439 ಎಸ್ಒಸಿ ಪ್ರೊಸೆಸರ್ ಅನ್ನು ಕೂಡ ನೋಡಬಹುದು. ಇವುಗಳ ಜೊತೆಗೆ, ಮಲ್ಟಿ ಟರ್ಬೋ 3.0 ಅನ್ನು ಕಸ್ಟಮೈಸ್‌ ಮಾಡುವ ಮೂಲಕ ಫೋನ್ ಬಳಕೆಯ ಅನುಭವವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ. 

ನೋಕಿಯಾದಿಂದ ಮೊದಲ ಟ್ಯಾಬ್ಲೆಟ್! ನೋಕಿಯಾ ಟಿ20 ಟ್ಯಾಬ್ ವಿಶೇಷತೆಗಳೇನು?

ಯಾವುದೇ ಸದ್ದು ಗದ್ದಲ ಇಲ್ಲದೇ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ವಿವೋ ವೈ 12ಜಿ ಸ್ಮಾರ್ಟ್‌ಫೋನ್, ಈಗಾಗಲೇ ಮಾರುಕಟ್ಟೆಯಲ್ಲಿರುವ ಸ್ಯಾಮ್ಸಂಗ್‌ನ ಗ್ಯಾಲಕ್ಸಿ ಎಂ12, ರೆಡ್‌ಮಿ 9 ಪವರ್ ಮತ್ತು ಪೋಕೋ ಎಂ2 ಸ್ಮಾರ್ಟ್‌ ಫೋನ್‌ಗಳಿಗೆ ಭಾರೀ ಠಕ್ಕರ್ ನೀಡುವ ಸಾಧ್ಯತೆ ಇದೆ. ಹಾಗಾಗಿ, ಈ ಸೆಗ್ಮೆಂಟ್‌ನಲ್ಲಿ ಬಳಕೆದಾರರಿಗೆ ಮತ್ತೊಂದು ಆಯ್ಕೆ ವಿವೋ ವೈ 12 ಜಿ ಮೂಲಕ ಸಿಕ್ಕಿದೆ. ಕಳೆದ ಜನವರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ವಿವೋ ವೈ12 ಎಸ್‌ ಫೋನ್‌ ರೀತಿಯಲ್ಲಿ ಈ ಹೊಸ ಫೋನ್ ಇದೆ.

3 ಜಿಬಿ ರ್ಯಾಮ್ ಮತ್ತು 32 ಜಿಬಿ ಸ್ಟೋರೇಜ್ ವಿವೋ ವೈ12ಜಿ ಸ್ಮಾರ್ಟ್‌ಫೋನ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 10990 ರೂಪಾಯಿಯಾಗಿದೆ. ಗ್ರಾಹಕರು ವಿವೋ ಇಂಡಿಯಾ ವೆಬ್‌ಸೈಟ್ ಮೂಲಕ ಖರೀದಿಸಬಹುದಾಗಿದೆ. ಈ ಫೋನ್ ಗ್ಲೇಸಿಯರ್ ಬ್ಲೂ ಮತ್ತು ಫಂತೂಮ್ ಬ್ಲ್ಯಾಕ್ ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ. ದೇಶದ ಪ್ರಮುಖ ಇ ಕಾಮರ್ಸ್ ತಾಣಗಳಲ್ಲಿ ಈ ಫೋನ್ ಮಾರಾಟಕ್ಕೆ ಸಿಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
 

ಭಾರತ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ವಿವೋ ವೈ12ಜಿ ಸ್ಮಾರ್ಟ್‌ಫೋನ್ ತನ್ನ ವಿಶಿಷ್ಟ ವೈಶಿಷ್ಟ್ಯಗಳಿಂದಲೂ ಹೆಚ್ಚು ಗಮನ ಸೆಳೆಯುತ್ತಿದೆ. ಆಂಡ್ರಾಯ್ಡ್ 11ನೊಂದಿಗೆ ಫನ್‌ಟಚ್ ಒಎಸ್ 11 ಆಧರಿತವಾಗಿದೆ. 

ಗೂಗಲ್ ಪಿಕ್ಸೆಲ್ 6, ಪಿಕ್ಸೆಲ್ 6 ಪ್ರೋ ಸ್ಮಾರ್ಟ್‌ಫೋನ್ ಬಿಡುಗಡೆ ಪಕ್ಕಾ

ವಿವೋ ವೈ12ಜಿ ಸ್ಮಾರ್ಟ್‌ಫೋನ್ 6.51 ಇಂಚ್ ಎಚ್‌ಡಿ  ಪ್ಲಸ್ ಹೊಂದಿದ್ದು, 20:9 ಡಿಸ್‌ಪ್ಲೇ ಅನುಪಾತವಿದೆ.  ಅಕ್ಟೋಕೋರ್ ಕ್ಲಾಲಕಾಂ ಸ್ನ್ಯಾಪ್‌ಡ್ರಾಗನ್ 439 ಎಸ್ಒಸಿ ಪ್ರೊಸೆಸರ್ ಅನ್ನು ಕಂಪನಿ ನೀಡಿದೆ. ಇದಕ್ಕೆ 3 ಜಿಬಿ ರ್ಯಾಮ್ ಅನ್ನು ಸಂಯೋಜಿಸಲಾಗಿದೆ. 

ಇನ್ನು ಈ ಹೊಸ ಫೋನ್‌ನ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಫೋನ್ ಹಿಂಭಾಗದಲ್ಲಿ ಕಂಪನಿಯ ಡುಯಲ್ ಕ್ಯಾಮೆರಾ ನೀಡಿದೆ. ಮೊದಲನೆ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಮತ್ತು ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಫೋನ್ ಮುಂಭಾಗದಲ್ಲಿ ಸೆಲ್ಫಿಗಾಗಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. 
 

ವಿವೋ ವೈ12ಜಿ ಸ್ಮಾರ್ಟ್‌ಪೋನ್ 32 ಜಿಬಿ ಸ್ಟೋರೇಜ್ ಒದಗಿಸುತ್ತದೆ. 4ಜಿ ಎಲ್ಇಟಿ, ವೈಫೈ, ಬ್ಲೂಟೂಥ್, ಜಿಪಿಎಸ್ ಎ ಜಿಪಿಎಸ್, ಎಫ್ ಎಂ ರೆಡಿಯೋ, ಮೈಕ್ರೋ ಯುಎಸ್‌ಬಿ, 3.5 ಆಡಿಯೋ ಜಾಕ್ ಸೇರಿದಂತೆ ಇನ್ನಿತರ ಕನೆಕ್ಟಿವಿಟಿ ಆಪ್ಷನ್‌ಗಳನ್ನು ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಕಾಣಬಹುದಾಗಿದೆ.

ರಿಯಲ್‌ಮಿ ಡಿಝೋ ಸ್ಮಾರ್ಟ್‌ವಾಚ್ ಲಾಂಚ್, ಸಖತ್ ಫೀಚರ್ಸ್!

ಮುಖ್ಯವಾದ ಸಂಗತಿ ಎಂದರೆ, ಕಂಪನಿ ಈ ಫೋನ್‌ಗೆ 5,000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದೆ. ಇದು 10 ವಾಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಬ್ಯಾಟರಿ ದೃಷ್ಟಿಯಿಂದ ಈ ಸೆಗ್ಮೆಂಟ್‌ನ ಸ್ಮಾರ್ಟ್‌ಫೋನ್‌ಗಳ ಪೈಕಿ ಈ ವಿವೋ ವೈ 12ಜಿ ಹೆಚ್ಚು ಪವರ್‌ಫುಲ್ ಆಗಿದೆ. 

click me!