ವಾಟ್ಸಾಪ್‌ನಿಂದ ‘ಒಮ್ಮೆ ನೋಡಿ’ ಫೀಚರ್‌ ಬಿಡುಗಡೆ

By Kannadaprabha NewsFirst Published Aug 5, 2021, 7:44 AM IST
Highlights

* ಒಮ್ಮೆ ನೋಡಿದ ಬಳಿಕ ತಂತಾನೆ ಅಳಿಸಿಹೋಗುವ ವಿಶೇಷ

* ವಾಟ್ಸಾಪ್‌ನಿಂದ ‘ಒಮ್ಮೆ ನೋಡಿ’ ಫೀಚರ್‌ ಬಿಡುಗಡೆ

ನವದೆಹಲಿ(ಆ.05): ಫೋಟೋ ಅಥವಾ ವಿಡಿಯೋಗಳನ್ನು ಒಂದು ಬಾರಿ ನೋಡಿದ ಬಳಿಕ ಅದು ತಂತಾನೆ ಅಳಿಸಿ ಹೋಗುವ ‘ವ್ಯೂ ಒನ್ಸ್‌’ (ಒಮ್ಮೆ ನೋಡಿ) ಎಂಬ ಹೊಸ ಫೀಚರ್‌ ಅನ್ನು ಬಿಡುಗಡೆ ಮಾಡಿದೆ. ಇದು ಫೋಟೋ, ವಿಡಿಯೋಗಳು ಗ್ಯಾಲರಿಯಲ್ಲಿ ಸಂಗ್ರಹವಾಗುವ ಸಮಸ್ಯೆ ನಿವಾರಿಸಲಿದೆ. ಸದ್ಯ ಬೇಟಾ ವರ್ಷನ್‌ನಲ್ಲಿ ಮಾತ್ರ ಇದು ಲಭ್ಯವಿದೆ. ಭಾರತದಲ್ಲಿ ಇದೀಗ ಐಫೋನ್‌ ಬಳಕೆದಾರರಿಗೆ ಮಾತ್ರವೇ ಈ ಹೊಸ ಫೀಚರ್‌ ಲಭ್ಯವಿದ್ದು, ಶೀಘ್ರವೇ ಎಲ್ಲಾ ಆ್ಯಂಡ್ರಾಡ್‌್ಡ ಬಳಕೆದಾರರಿಗೂ ಲಭ್ಯವಾಗುವ ನಿರೀಕ್ಷೆ ಇದೆ.

ಏನಿದು ಫೀಚರ್‌:

ಯಾವುದೇ ವಾಟ್ಸಾಪ್‌ ಬಳಕೆದಾರರು, ತಮ್ಮ ಮೊಬೈಲ್‌ನಿಂದ ಫೋಟೋ ಅಥವಾ ವಿಡಿಯೋಗಳನ್ನು ಕಳುಹಿಸುವಾಗ, ಸಂದೇಶದ ಎಡ ಭಾಗದ ವಿಂಡೋದಲ್ಲಿ 1 ಎಂಬ ಸಂಖ್ಯೆ ಗೋಚರವಾಗುತ್ತದೆ. ಅದನ್ನು ಕ್ಲಿಕ್‌ ಮಾಡಿ ಫೋಟೋ ಅಥವಾ ವಿಡಿಯೋ ರವಾನಿಸಿದರೆ, ಅದನ್ನು ಯಾರಿಗೆ ಕಳುಹಿಸಲಾಗಿರುತ್ತದೋ ಅವರು ಅದನ್ನು ಒಂದು ಬಾರಿ ಮಾತ್ರವೇ ವೀಕ್ಷಿಸಬಹುದು. ಬಳಿಕ ಅದು ತಂತಾನೆ ಅಳಿಸಿ ಹೋಗುತ್ತದೆ.

ಇದರಿಂದ ಫೋಟೋ ವಿಡಿಯೋಗಳು ಚಾಟ್‌ನಲ್ಲಾಗಲಿ ಅಥವಾ ಫೋನ್‌ ಗ್ಯಾಲರಿಯಲ್ಲಾಗಲಿ ಉಳಿದುಕೊಳ್ಳುವುದಿಲ್ಲ. ಸ್ಟೋರೇಜ್‌ ಸಮಸ್ಯೆಗೆ ಇದರಿಂದ ಪರಿಹಾರ ಸಿಗುವುದರೊಂದಿಗೆ ಖಾಸಗಿತನಕ್ಕೂ ರಕ್ಷಣೆ ಸಿಗಲಿದೆ. ಆದರೆ ಸಂದೇಶ ಸ್ವೀಕರಿಸಿದವರು ಸ್ಕ್ರೀನ್‌ಶಾಟ್‌ ಅಥವಾ ಸ್ಕ್ರೀನ್‌ ರೆಕಾರ್ಡಿಂಗ್‌ ಮಾಡಿಟ್ಟುಕೊಳ್ಳಬಹುದು.

click me!