ಇಂದು ಸಾಮಾಜಿಕ ಅಂತರ ಕಾಯ್ದುಕೊಂಡರೂ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಳ್ಳುವುದು ಬಹಳವೇ ಕಷ್ಟ. ಆದರೆ, ಇಲ್ಲಿ ಬರುವ ಸುದ್ದಿಗಳಲ್ಲ ನಿಜವಲ್ಲ. ಹಾಗಂತ ಬಂದಿದ್ದೆಲ್ಲವೂ ಸುಳ್ಳಲ್ಲ. ಈಗ ಕೋವಿಡ್-19 ಬಗ್ಗೆಯೂ ಹಲವು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇದನ್ನು ಮನಗಂಡಿರುವ ಟ್ವಿಟ್ಟರ್ ಜನರಿಗೆ ನೈಜ ಸುದ್ದಿಗಳನ್ನು ಕೊಡುವ ಕೆಲಸಕ್ಕೆ ಕೈಹಾಕಿದೆ. ಹಾಗಾದರೆ ನೀವು ಹೇಗೆ ಮಾಹಿತಿ ಪಡೆಯಬೇಕು ಎಂಬ ಬಗ್ಗೆ ಇಲ್ಲಿದೆ ವಿವರ.
ಬೆಂಗಳೂರು (ಏ.04): ಕೊರೋನಾ ವೈರಸ್ ಮನುಷ್ಯನ ದೇಹದ ಮೇಲೆ ಪ್ರಭಾವ ಬೀರಿದರೆ, ಇದರ ಸುಳ್ಳುಸುದ್ದಿಗಳು ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಇದರ ವಿರುದ್ಧ ಈಗ ಟ್ವಿಟ್ಟರ್ ಸಮರ ಸಾರಿದೆ. ಇದಕ್ಕಾಗಿ ಕೋವಿಡ್-19 ಸರ್ಚ್ ಪ್ರಾಂಪ್ಟ್ ಪ್ರಾರಂಭಿಸಿದೆ.
ಹೌದು. ಸೋಷಿಯಲ್ ಮೀಡಿಯಾ (ಸಾಮಾಜಿಕ ಜಾಲತಾಣ) ಎಂಬುದು ಇಂದು ಎಷ್ಟು ಉಪಕಾರಿಯೋ ಅಷ್ಟೇ ಸುಳ್ಳುಪ್ರಪಂಚವನ್ನು ಹುಟ್ಟುಹಾಕುವ ಲೋಕ ಎಂದೇ ಪ್ರಖ್ಯಾತಿ/ಕುಖ್ಯಾತಿ ಪಡೆದಿದೆ. ಇಲ್ಲಿ ಬರುವ ಯಾವ ಸುದ್ದಿಯನ್ನು ಎಷ್ಟು ನಂಬಬೇಕು? ಯಾವುದು ವಿಶ್ವಾಸಾರ್ಹ, ಯಾವುದು ಮಾನಿಹಾನಿಕಾರಕ ಎಂಬುದೂ ಕೆಲವೊಮ್ಮೆ ತಿಳಿಯಲು ಕಷ್ಟವಾಗುವಷ್ಟರ ಮಟ್ಟಿಗೆ ನೈಜತೆಯಂತೆಯೇ ಬಿಂಬಿತವಾಗಿರುತ್ತದೆ.
undefined
ಈಗ ದೇಶ ಸೇರಿದಂತೆ ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನಾ ವೈರಸ್ (ಕೋವಿಡ್-19) ಸಾಂಕ್ರಾಮಿಕ ರೋಗದ ಬಗ್ಗೆ ದಿನಕ್ಕೊಂದು ಕಟ್ಟುಕಥೆಗಳು, ಭಯಹುಟ್ಟಿಸುವ ಸುಳ್ಳುಸುದ್ದಿಗಳು ಹುಟ್ಟಿಕೊಳ್ಳುತ್ತಿವೆ. ಇಂಥವುಗಳಿಗೆ ಕಡಿವಾಣ ಹಾಕುವ ಕಾರ್ಯವೂ ಅಷ್ಟೇ ಭರದಿಂದ ಸಾಗಿದೆ. ಆದರೆ, ಇದು ಸಂಪೂರ್ಣ ನಿಯಂತ್ರಣ ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಸುದ್ದಿಯನ್ನು ಪಡೆಯುವುದು ಒಳಿತು. ಈ ಕಾರ್ಯಕ್ಕೆ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲೊಂದಾದ ಟ್ವಿಟ್ಟರ್ ಮುಂದಾಗಿದೆ.
ಇದನ್ನೂ ಓದಿ | ಹೊರಗೆ ಕೊರೋನಾ ಅಟ್ಟಹಾಸ, ಮನೆಯಿಂದ ಕೆಲ್ಸ ಮಾಡೋರಿಗೆ ಹ್ಯಾಕರ್ಸ್ ಕಾಟ!
ಏನಿದು ಕೋವಿಡ್-19 ಸರ್ಚ್ ಪ್ರಾಂಪ್ಟ್?
ಕೋವಿಡ್-19ಕ್ಕೆ ಸಂಬಂಧಪಟ್ಟಂತೆ ಈಗಂತೂ ಗೂಗಲ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ವಿಪರೀತವಾಗಿ ನಡೆಯುತ್ತಿದೆ. ಕೆಲವರು ಮಾಹಿತಿಗೋಸ್ಕರ ಹುಡುಕಾಟ ನಡೆಸಿದರೆ, ಮತ್ತೆ ಕೆಲವರು ರೋಗ ಹರಡುವಿಕೆ, ಲಕ್ಷಣಗಳು ಹೀಗೆ ತಮಗೆ ಬೇಕಾದ ಮಾಹಿತಿಯನ್ನು ತಡಕಾಡಿರುತ್ತಾರೆ. ಇಂಥವರಿಗೋಸ್ಕರವೇ ಟ್ವಿಟ್ಟರ್ ಸರ್ಚ್ ಪ್ರಾಂಪ್ಟ್ ಪ್ರಸ್ತುತಿಪಡಿಸಿದೆ. ಇದರ ಮೂಲಕ ನೇರ-ನಿಖರ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶಹೊಂದಲಾಗಿದೆ.
ಇದಕ್ಕಾಗಿ ರಾಷ್ಟ್ರೀಯ ಆರೋಗ್ಯ ಏಜೆನ್ಸಿಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಸಂಸ್ಥೆಗಳಿಂದ ಬರುವ ಸುದ್ದಿಗಳನ್ನಷ್ಟೇ ಬಿತ್ತರಗೊಳಿಸಲಾಗುತ್ತಿದೆ. ಜೊತೆಗೆ ವಿಶ್ವಾದ್ಯಂತ ಆಯಾ ದೇಶಗಳಲ್ಲಿರುವ ಸ್ಥಳೀಯ ಏಜೆನ್ಸಿಗಳ ಮೂಲಕವೇ ಮಾಹಿತಿಯನ್ನು ಪಡೆದು ಸರ್ಚ್ ಪ್ರಾಂಪ್ಟ್ ಮೂಲಕ ಒದಗಿಸಲಾಗುತ್ತಿದೆ. ಭಾರತದಲ್ಲಿ ಹುಡುಕಾಡುವವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಡಬ್ಲ್ಯುಎಚ್ಒ ವೆಬ್‌ಸೈಟಿನ ಲಿಂಕ್ ಅನ್ನು ಸರ್ಚ್ ಪ್ರಾಂಪ್ಟ್ ಮೂಲಕ ಒದಗಿಸಲಾಗುತ್ತದೆ.
ಅಲ್ಲದೆ, ಇದರ ನಿರ್ವಹಣೆಗಾಗಿ ಟ್ವಿಟ್ಟರ್‌ನಲ್ಲಿ ಒಂದು ತಂಡವೇ ಇದ್ದು, ಹುಡುಕಾಟ ವಿಷಯಗಳ ಸಂಬಂಧಿತ ಪದಗಳು, ತಪ್ಪು ಅಕ್ಷರ ಟೈಪಿಂಗ್, ಕೆಲ ಪ್ರಮುಖ ಪದಗಳ ಬಗ್ಗೆ ಈ ತಂಡದವರು ನಿಗಾವಹಿಸುತ್ತಿರುತ್ತಾರೆ.
ಇದನ್ನೂ ಓದಿ | ಯಾವ ಅಂಗಡಿ ತೆರೆದಿದೆ? ವೆಬ್‌ಸೈಟ್ ನೋಡಿ
ದ್ವಿಭಾಷಾ ಪುಟ ನಿಮಗಾಗಿ
ಕೋವಿಡ್-19 ಮಾಹಿತಿ ನೀಡುವುದಕ್ಕಾಗಿಯೇ ಟ್ವಿಟ್ಟರ್ ಪುಟವೊಂದನ್ನು ಪ್ರಾರಂಭಿಸಿದೆ. ಕೊರೋನಾ ವೈರಸ್ ಟ್ವೀಟ್ಸ್ ಫ್ರಂ ಇಂಡಿಯನ್ ಅಥಾರಿಟೀಸ್ (“Coronavirus Tweets from Indian authorities”) ಎಂಬ ಪುಟ ಅದಾಗಿದ್ದು, ಇಲ್ಲಿ ಪ್ರಮಾಣೀಕೃತ ಸುದ್ದಿಗಳಷ್ಟೇ ಪ್ರಕಟವಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ, ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರ ಟ್ವೀಟ್ ಸಂದೇಶಗಳು ಹಾಗೂ ಸಾರ್ವಜನಿಕ ಆರೋಗ್ಯ ಇಲಾಖೆಗಳ ಸಂದೇಶ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕೃತ ಪ್ರಕಟಣೆ, ಮಾಹಿತಿ, ಸೂಚನೆಗಳು ಇಲ್ಲಿ ಪ್ರಕಟವಾಗುತ್ತದೆ. ಪುಟದ ಟೈಮ್‌ಲೈನ್ ಮೇಲ್ಭಾಗದಲ್ಲೂ ಇದನ್ನು ಕಾಣಬಹುದಾಗಿದೆ. ಇಂಗ್ಲಿಷ್ ಅಲ್ಲದೆ ಹಿಂದಿ ಭಾಷೆಯಲ್ಲಿಯೂ ಅಪ್ಡೇಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ | ಕೊರೋನಾ ರೋಗಿಯಿಂದ ನೀವೆಷ್ಟು ಸೇಫ್? ಮಾಹಿತಿ ಕೊಡುತ್ತೆ ಕೇಂದ್ರದ ಹೊಸ ಆ್ಯಪ್
ವಿಶ್ವ ಆರೋಗ್ಯ ಸಂಸ್ಥೆಯ ಚಾಲೆಂಜ್:
ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆಯ ಜೊತೆಗೆ ಕೈಜೋಡಿಸಿರುವ ಟ್ವಿಟ್ಟರ್, ಕೊರೋನಾ ವಿರುದ್ಧದ ಹೋರಾಟಕ್ಕೆ ಕೆಲವು ಉಪಯುಕ್ತ ಮಾಹಿತಿಯನ್ನು ನೀಡತೊಡಗಿದೆ. ಇದಕ್ಕಾಗಿ ಪದೇಪದೆ ಕೈತೊಳೆಯಬೇಕು, ಯಾವ ಮಾದರಿಯಲ್ಲಿ ಕೈತೊಳೆಯಬೇಕು ಎಂಬಿತ್ಯಾದಿ ಮಾಹಿತಿಯನ್ನು ಒದಗಿಸುತ್ತಿದೆ.
ಇದಕ್ಕೋಸ್ಕರ ಹ್ಯಾಂಡ್ ವಾಷಿಂಗ್ ಇಮೋಜಿ (#handwashing) ಯನ್ನು ಬಳಕೆಗೆ ತಂದಿದೆ. #handwashing, #SafeHands, #HandWashChallenge, #WashYourHands, #हाथधोलेना, #हाथकीसफाईमेंभलाई, #हाथधोयाक्या ಈ ಹ್ಯಾಶ್ ಟ್ಯಾಗ್ ಗಳ ಪೈಕಿ ಯಾವುದನ್ನು ಬಳಸಿದರೂ ಇಮೋಜಿ ಲಭ್ಯವಾಗಲಿದೆ.
ಇದಲ್ಲದೆ, ತಪ್ಪು ಮಾಹಿತಿಗಳ ವಿರುದ್ಧವೂ ಸಮರ ಸಾರಿದ್ದು, ಅಧಿಕೃತ ಮೂಲಗಳ ಸುದ್ದಿಗಳನ್ನು ಮಾತ್ರ ಪ್ರಕಟಿಸಲಾಗುತ್ತಿದೆ.