ಪವರ್‌ ಬ್ಯಾಂಕ್‌ ಕುರಿತು ತಿಳಿದಿರಬೇಕಾದ 10 ಅಂಶಗಳು!

By Suvarna News  |  First Published Mar 19, 2020, 5:57 PM IST

ಮೊಬೈಲ್ ಹೆಚ್ಚು ಉಪಯೋಗಿಸುವವರಿಗೆ ಮೊಬೈಲ್ ಜೊತೆಗೆ ಪವರ್ ಬ್ಯಾಂಕ್ ಅನಿವಾರ್ಯ. ಹಲವು ಕಂಪನಿಗಳ ಪವರ್ ಬ್ಯಾಂಕ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಪವರ್ ಬ್ಯಾಂಕ್ ಉಪಯೋಗಿಸುವವರು, ಹೊಸದಾಗಿ ಖರೀದಿಸುವವರು, ಪವರ್ ಬ್ಯಾಂಕ್ ಕುರಿತು 10 ಪ್ರಮುಖ ಅಂಶಗಳನ್ನು ತಿಳಿದಿರುವುದು ಉತ್ತಮ


ಇವತ್ತು ಮೊಬೈಲ್‌ ಫೋನ್‌ ಜತೆಗೆ ಒಂದು ಪವರ್‌ ಬ್ಯಾಂಕ್‌ ಒಯ್ಯುವುದು ಅವಶ್ಯಕತೆಯೇ ಆಗಿಬಿಟ್ಟಿದೆ. ನಮ್ಮ ಬಳಕೆ ಜಾಸ್ತಿಯಾದಂತೆ, ಫೋನುಗಳು ಬ್ಯಾಟರಿ ಖಾಲಿ ಆಗುತ್ತಿದ್ದಂತೆ, ಸಂಜೆ ಹೊತ್ತಿಗೆ ಟಿಂಗ್‌ ಎಂಬ ಸದ್ದಿನೊಂದಿಗೆ ಬ್ಯಾಟರಿ ಲೋ ಎಂಬ ಸಂದೇಶವೂ ಬರುವುದು ಸಾಮಾನ್ಯ.

ಕೊರೋನಾವೈರಸ್‌ ಸೋಂಕು ಪತ್ತೆಗೆ ಗೂಗಲ್‌ನಿಂದ ಹೊಸ ವೆಬ್‌ಸೈಟ್‌ ಶುರು

Tap to resize

Latest Videos

undefined

ಆದರೆ ಯಾವ ಪವರ್‌ಬ್ಯಾಂಕ್‌ ಕೊಳ್ಳಬೇಕು ಅನ್ನುವ ಪ್ರಶ್ನೆಗೆ ಉತ್ತರ ಕಷ್ಟ. ಕಡಿಮೆ ಅಪಾಯಕಾರಿಯಾದ, ಹೆಚ್ಚು ಬಾಳಿಕೆ ಬರುವ, ನಿಜಕ್ಕೂ ಪವರ್‌ ಹಿಡಿದಿಡುವ ಪವರ್‌ಬ್ಯಾಂಕುಗಳನ್ನು ಗುರುತಿಸುವುದು ಹೇಗೆ ಎಂಬುದು ಬಹುದೊಡ್ಡ ಪ್ರಶ್ನೆ.

ಪವರ್‌ ಬ್ಯಾಂಕುಗಳನ್ನು ಕೊಳ್ಳುವ ಮುಂಚೆ ಈ ಅಂಶಗಳನ್ನು ನೆನಪಲ್ಲಿಟ್ಟುಕೊಳ್ಳಿ.

ಏ.1ರಿಂದ ಮೊಬೈಲ್‌ ಫೋನ್‌ ಬಲು ದುಬಾ​ರಿ!

1. ಪವರ್‌ಬ್ಯಾಂಕ್‌ ಕೆಪಾಸಿಟಿ: ಇದು ನಿಮ್ಮ ಬಳಕೆಯನ್ನು ಅವಲಂಬಿಸಿದೆ. ನೀವು 3000 ಎಂಎಎಚ್‌ ಪವರ್‌ನ ಸ್ಮಾರ್ಟ್‌ಫೋನ್‌ ರೀಚಾಜ್‌ರ್‍ ಮಾಡಲಿಕ್ಕೆ 5000 ಎಂಎಎಚ್‌ ಪವರ್‌ಬ್ಯಾಂಕ್‌ ಸಾಕು. ಒಂದೆರಡು ಸಾರಿ ರೀಚಾಜ್‌ರ್‍ ಮಾಡಬೇಕಾದ ಅವಶ್ಯಕತೆ ಇದ್ದರೆ 10000 ಎಂಎಎಚ್‌ ಬೇಕಾದೀತು. ಅದೇ, ಲ್ಯಾಪ್‌ ಟಾಪ್‌ ಕೂಡ ಚಾಜ್‌ರ್‍ ಆಗಬೇಕಿದ್ದಾರೆ ಕನಿಷ್ಠ 30000 ಎಂಎಎಚ್‌ ಪವರ್‌ಬ್ಯಾಂಕ್‌ ಬೇಕೇಬೇಕು.

2. ಇನ್‌ಪುಟ್‌ ಮತ್ತು ಔಟ್‌ಪುಟ್‌: ನೀವು ಬಳಸುವ ಮೊಬೈಲ್‌ ಯಾವುದು? ಅದಕ್ಕೆ ತಕ್ಕ ಇನ್‌ಪುಟ್‌ ಮತ್ತು ಔಟ್‌ಪುಟ್‌ ಆ ಪವರ್‌ಬ್ಯಾಂಕಲ್ಲಿದೆಯೋ ಅನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮಗೆ ಅದು ಕಂಪ್ಯಾಟಿಬಲ್‌ ಅನ್ನಿಸಿದರೆ ಮಾತ್ರ ಕೊಂಡುಕೊಳ್ಳಿ.

3.ಬೆಲೆ ಮತ್ತು ಗುಣಮಟ್ಟ: ಅನೇಕ ಸಲ ನಮಗೆ ಅತೀ ಕಡಿಮೆ ಬೆಲೆಗೆ ಹೆಚ್ಚು ಶಕ್ತಿಯುತ ಪವರ್‌ಬ್ಯಾಂಕುಗಳು ದೊರೆಯುತ್ತವೆ. ಆದರೆ ಅವಕ್ಕೆ ಬಲಿಯಾಗಬೇಡಿ. ಗುಣಮಟ್ಟಚೆನ್ನಾಗಿದೆಯೋ ಅನ್ನುವುದು ಮುಖ್ಯ. ಕೆಲವು ಕೆಲವೇ ದಿನಕ್ಕೆ ಜಡ್ಡಾಗಿಬಿಡಬಹುದು. ಕೆಲವು ಓವರ್‌ಲೋಡ್‌ ಆಗಿ ಫೋನಿಗೆ ಹಾನಿ ಮಾಡಬಹುದು. ಕೆಲವು ನಿಧಾನವಾಗಿ ಚಾಜ್‌ರ್‍ ಮಾಡಬಹುದು.

4. ಗಾತ್ರ: ನೀವು ಸುಲಭವಾಗಿ ಒಯ್ಯಬಹುದಾದ ಗಾತ್ರದ ಪವರ್‌ಬ್ಯಾಂಕ್‌ ಹುಡುಕಿ. ಕೆಲವು ಲಾರಿ ಬ್ಯಾಟರಿಯಷ್ಟುದೊಡ್ಡದಿರುತ್ತವೆ. ಅವನ್ನು ಜೊತೆಗೆ ಒಯ್ಯುವುದೇ ರಗಳೆ. ಆರಾಮಾಗಿ ಒಯ್ಯಬಲ್ಲ, ಹೆಚ್ಚು ಕಮ್ಮಿ ಫೋನಿನಷ್ಟೇ ಗಾತ್ರದ ಪವರ್‌ಬ್ಯಾಂಕ್‌ ಒಳ್ಳೆಯ ಆಯ್ಕೆ.

5. ಆ್ಯಂಪ್‌: ಪವರ್‌ ಬ್ಯಾಂಕುಗಳಲ್ಲಿ ಆ್ಯಂಪಿಯರ್‌ ಬಹಳ ಮುಖ್ಯ. ಎಷ್ಟುವೇಗವಾಗಿ ನಿಮ್ಮ ಫೋನ್‌ ಚಾಜ್‌ರ್‍ ಆಗುತ್ತದೆ ಅನ್ನುವುದನ್ನು ಅದೇ ನಿರ್ಧಾರ ಮಾಡುವುದು. ಸಾಮಾನ್ಯವಾಗಿ 1 ರಿಂದ 3.5 ಆ್ಯಂಪಿಯರ್‌ ತನಕದ ಚಾರ್ಜರ್‌ ದೊರೆಯುತ್ತದೆ. ಆ್ಯಂಪಿಯರ್‌ ಹೆಚ್ಚಾದಷ್ಟುಚಾರ್ಜಿಂಗ್‌ ವೇಗವಾಗುತ್ತದೆ.

6. ಫೋನಿನ ಬ್ಯಾಟರಿ: ನಿಮ್ಮ ಫೋನಿನ ಬ್ಯಾಟರಿ ಕೆಪಾಸಿಟಿ ಎಷ್ಟೆಂದು ನೋಡಿಕೊಳ್ಳಿ. ಅದನ್ನು ಫೋನಿನ ಸ್ಪೆಸಿಫಿಕೇಷನ್ನಿನಲ್ಲೇ ಬರೆದಿರುತ್ತಾರೆ. ಹಾಗೆಯೇ ನೀವು ಪವರ್‌ಬ್ಯಾಂಕಲ್ಲಿ ಎಷ್ಟುಸಲ ಚಾಜ್‌ರ್‍ ಮಾಡಬೇಕಾದ ಅಗತ್ಯ ಬೀಳುತ್ತದೆ ಎನ್ನುವುದನ್ನು ನೋಡಿ. ಗ್ರಾಮೀಣ ಪ್ರದೇಶಗಳಲ್ಲಿ ಒಂದೆರಡು ದಿನ ಕರೆಂಟಿಲ್ಲದೇ ಇದ್ದಾಗ ನಾಲ್ಕೈದು ಸಲ ರೀಚಾಜ್‌ರ್‍ ಮಾಡಬೇಕಾಗಿ ಬರಬಹುದು. ನಾಲ್ಕೈದು ಫೋನುಗಳನ್ನು ಚಾಜ್‌ರ್‍ ಮಾಡಬೇಕಾಗಬಹುದು. ಕಾಡುಗಳಲ್ಲಿ ಕೆಲಸ ಮಾಡುವವರು ನಾಲ್ಕೈದು ದಿನ ಅಲ್ಲೇ ಉಳಿದಾಗ ಚಾರ್ಜಿಂಗ್‌ ಮಾಡುವುದಕ್ಕೆ ಹೆಚ್ಚಿನ ಕೆಪಾಸಿಟಿಯ ಪವರ್‌ ಬ್ಯಾಂಕ್‌ ಬೇಕಾದೀತು.

7. ಒಂದಕ್ಕಿಂತ ಹೆಚ್ಚು ಸ್ಲಾಟ್‌: ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಫೋನುಗಳನ್ನು ಬಳಸಬೇಕಾಗಿ ಬರುವ ಸಂಭವ ಇದ್ದರೆ ಹೆಚ್ಚು ಚಾರ್ಜಿಂಗ್‌ ಸ್ಲಾಟ್‌ ಇರುವ ಪವರ್‌ಬ್ಯಾಂಕ್‌ ಕೊಂಡುಕೊಳ್ಳಿ.

8. ಇಂಡಿಕೇಟರ್‌: ಪೂರ್ತಿ ಚಾಜ್‌ರ್‍ ಆಗಿದೆ ಅಂತ ತೋರಿಸುವ, ಉಳಿದ ಬ್ಯಾಟರಿ ಎಷ್ಟೆಂಬುದನ್ನು ತೋರಿಸುವ ಪವರ್‌ಬ್ಯಾಂಕ್‌ ಒಳ್ಳೆಯದು. ಚಾರ್ಜಿಂಗ್‌ ಮತ್ತು ಡಿಸ್‌ಚಾರ್ಜಿಂಗ್‌ ಇಂಡಿಕೇಟರ್‌ ಇರುವ ಪವರ್‌ಬ್ಯಾಂಕುಗಳೂ ಸಿಗುತ್ತವೆ. ಕೆಲವು ಪವರ್‌ ಬ್ಯಾಂಕುಗಳಲ್ಲಿ ಫ್ಲಾಷ್‌ ಲೈಟ್‌ ಕೂಡ ಇರುತ್ತದೆ.

9. ಆಗಾಗ ಚಾಜ್‌ರ್‍ ಮಾಡುತ್ತಿರಿ: ಕಾರುಗಳಲ್ಲಿ ಸ್ಟೆಪ್ನಿ ಇರುತ್ತದೆ. ಆದರೆ ಅದಕ್ಕೆ ಗಾಳಿ ತುಂಬಿಸುವುದನ್ನು ಮರೆತಿರುತ್ತಾರೆ. ಪವರ್‌ ಬ್ಯಾಂಕ್‌ ಸ್ಥಿತಿಯೂ ಹಾಗೇ ಆಗದಿರಲಿ. ಎಷ್ಟೋ ಸಲ ತಿಂಗಳಾನುಗಟ್ಟಲೆ ಪವರ್‌ ಬ್ಯಾಂಕ್‌ ಬಳಸದೇ ಹಾಗೆಯೇ ಇಟ್ಟಾಗ ಅದರ ಪವರ್‌ ಖಾಲಿಯಾಗಿರುತ್ತದೆ. ಅಗತ್ಯ ಬಿದ್ದಾಗ ಅದು ಉಪಯೋಗಕ್ಕೆ ಬರುವುದಿಲ್ಲ.ಹೀಗಾಗಿ ಆಗಾಗ ಅದನ್ನು ಚಾಜ್‌ರ್‍ ಮಾಡಿಟ್ಟುಕೊಂಡಿರಿ.

10. ಸೋಲಾರ್‌ ಪ್ಯಾನೆಲ್‌: ಚಾಜ್‌ರ್‍ ಮಾಡುವುದಕ್ಕೆ ಸೋಲಾರ್‌ ಪ್ಯಾನೆಲ್‌ ಇರುವ ಪವರ್‌ಬ್ಯಾಂಕ್‌ಗಳೂ ಸಿಗುತ್ತವೆ. ಇವು ಪರಿಸರ ಸ್ನೇಹಿಯೂ ಹೌದು.

ರೆಡ್‌ಮಿ

ಯಾವ ಪವರ್‌ಬ್ಯಾಂಕ್‌ ಕೊಳ್ಳಬೇಕು? ಯಾವುದು ಒಳ್ಳೆಯದು? ಯಾವುದು ಬಾಳಿಕೆ ಬರುತ್ತದೆ?

ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವೆಂದರೆ ನಂಬಿಕೆಗೆ ಅರ್ಹವಾದ ಕಂಪೆನಿಯ ಪವರ್‌ಬ್ಯಾಂಕ್‌. ಇದೀಗ ರೆಡ್‌ಮಿ ಕಂಪೆನಿಯು 10000 ಎಂಎಎಚ್‌ನ ಪವರ್‌ಬ್ಯಾಂಕನ್ನು ಮಾರುಕಟ್ಟೆಗೆ ತಂದಿದೆ.

ಇದರಲ್ಲಿ ಏನೇನಿದೆ:

1. ಟೈಪ್‌ ಸಿ ಮತ್ತು ಮೈಕ್ರೋ ಯುಎಸ್‌ಬಿ ಚಾರ್ಜರ್‌ಗಳ ಮೂಲಕ ಇದನ್ನು ಚಾಜ್‌ರ್‍ ಮಾಡಬಹುದು.

2. ಎರಡು ಡಿವೈಸ್‌ಗಳನ್ನು ಏಕಕಾಲಕ್ಕೆ ಚಾಜ್‌ರ್‍ ಮಾಡಬಹುದು.

3. ಹೈ ಕೆಪಾಸಿಟಿಯ ಲಿ-ಪಾಲಿ ಬ್ಯಾಟರಿ ಹೊಂದಿದೆ.

4. 10 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಹೊಂದಿದೆ. ಹೀಗಾಗಿ ಫೋನ್‌ ಬೇಗನೇ ಚಾಜ್‌ರ್‍ ಆಗುತ್ತದೆ.

5. ಹಗುರವಾಗಿದೆ ಮತ್ತು ಹಿಡಿತದಿಂದ ಜಾರದ ಹೊರಮೈ ಹೊಂದಿದೆ

6. ಬ್ಲೂಟೂಥ್‌ ಹೆಡ್‌ಸೆಟ್‌, ಫಿಟ್‌ನೆಸ್‌ ಬ್ಯಾಂಡ್‌ಗಳನ್ನು ಚಾಜ್‌ರ್‍ ಮಾಡಲು ಲೋ-ಪವರ್‌ ಮೋಡ್‌ ಇದೆ. ಪವರ್‌ ಬಟನ್‌ ಎರಡು ಸಲ ಒತ್ತಿದರೆ 2 ಗಂಟೆಯ ಲೋ ಪವರ್‌ ಚಾರ್ಜಿಂಗ್‌ ಮೋಡ್‌ಗೆ ಹೋಗುತ್ತದೆ.

7. ಶಾರ್ಟ್‌ ಸರ್ಕೂ್ಯಟ್‌ ಆಗದಂತೆ ರಕ್ಷಣೆ

7. ರಿಸೆಟ್‌ ಮಾಡಲು ವ್ಯವಸ್ಥೆ

8.ಹೆಚ್ಚಿನ ವಿದ್ಯುತ್‌ ಪ್ರವಾಹದಿಂದ ರಕ್ಷಣೆ.

9. ಔಟ್‌ಪುಟ್‌ ಇನ್‌ಪುಟ್‌ಗಳ ಅಂಡರ್‌ ವೋಲ್ಟೇಜ್‌ ಸುರಕ್ಷತೆ

10. ಪವರ್‌ಬ್ಯಾಂಕ್‌, ಮ್ಯಾನ್ಯುಯಲ್‌ ಮತ್ತು ಕೇಬಲ್‌ ಜೊತೆ ಸಿಗುತ್ತದೆ

click me!